ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 20ರಂದು ಚಂದ್ರನ ಮಡಿಲಿಗೆ ಚಂದ್ರಯಾನ-2 ನೌಕೆ

|
Google Oneindia Kannada News

ಅಹ್ಮದಾಬಾದ್, ಆಗಸ್ಟ್ 12: ಚಂದ್ರಯಾನ-2 ನೌಕೆಯು ಆಗಸ್ಟ್ 20ರಂದು ಚಂದ್ರನ ಕಕ್ಷೆ ಪ್ರವೇಶಿಸಲಿದ್ದು, ಸೆಪ್ಟೆಂಬರ್ 7ರಂದು ಚಂದ್ರನ ಮೇಲ್ಮೈನಲ್ಲಿ ಇಳಿಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.

ಭೂಮಿಯ ಕಕ್ಷೆಯಿಂದ ಇನ್ನು ಎರಡು ದಿನಗಳಲ್ಲಿ ನೌಕೆ ಹೊರಡಲಿದೆ. ಜುಲೈ 22ರಂದು ಚಂದ್ರಯಾನ-2ಅನ್ನು ಉಡಾವಣೆ ಮಾಡಿದ ಬಳಿಕ ಐದು ಹಂತಗಳನ್ನು ತಲುಪಿದ್ದೇವೆ. ನೌಕೆಯ ಸಂರಚಿತ ಭಾಗವು ಈಗ ಭೂಮಿಯನ್ನು ಸುತ್ತುತ್ತಿದೆ ಎಂದು ಅವರು ತಿಳಿಸಿದರು.

ಪಯಣದ ನಡುವೆ ಚಂದ್ರಯಾನ2 ಕಂಡ ಭೂಮಿಯ 'ಬ್ಯೂಟಿಫುಲ್' ಚಿತ್ರಗಳುಪಯಣದ ನಡುವೆ ಚಂದ್ರಯಾನ2 ಕಂಡ ಭೂಮಿಯ 'ಬ್ಯೂಟಿಫುಲ್' ಚಿತ್ರಗಳು

ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಮಹ ಎಂದೇ ಖ್ಯಾತರಾದ ಡಾ. ವಿಕ್ರಂ ಸಾರಾಭಾಯ್ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಅಹಮದಾಬಾದ್‌ಗೆ ಆಗಮಿಸಿದ್ದರು.

Chandrayaan-2 To Reach Moon Orbit On August 20 ISRO K Sivan

ಆಗಸ್ಟ್ 14ರಂದು ಬೆಳಿಗ್ಗೆ 3.30ರ ವೇಳೆಗೆ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಎಂಬ ಚಟುವಟಿಕೆಯನ್ನು ನಡೆಸಲಿದ್ದೇವೆ. ಅದರ ಬಳಿಕ ಚಂದ್ರಯಾನ ನೌಕೆ ಭೂಮಿಯ ಕಕ್ಷೆಯಿಂದ ಚಂದ್ರನೆಡೆಗೆ ಸಾಗಲಿದೆ. ಆಗಸ್ಟ್ 20ರಂದು ಚಂದ್ರನಲ್ಲಿಗೆ ಪ್ರವೇಶಿಸುತ್ತೇವೆ ಎಂದು ಅವರು ಹೇಳಿದರು.

ಚಂದ್ರನಿಗೆ ನಾವೀಗ ಮೂರು ಹೆಜ್ಜೆ ಹತ್ತಿರ: ಇಸ್ರೋ ಚಂದ್ರನಿಗೆ ನಾವೀಗ ಮೂರು ಹೆಜ್ಜೆ ಹತ್ತಿರ: ಇಸ್ರೋ

ಬಳಿಕ ಲೂನಾರ್ ಆರ್ಬಿಟ್ ಅಳವಡಿಕೆಯನ್ನು ನಡೆಸಲಾಗುವುದು. ಈ ಪ್ರಕ್ರಿಯೆ ಮೂಲಕ ಆಗಸ್ಟ್ 20ರಂದು ಚಂದ್ರಯಾನ ನೌಕೆ ಚಂದಿರನ ಸುತ್ತ ಇರಲಿದೆ. ಚಂದ್ರನ ದಕ್ಷಿಣ ಭಾಗಕ್ಕೆ ಸೆ. 7ರಂದು ಕಾಲಿರಿಸಲಿದ್ದೇವೆ ಎಂದು ತಿಳಿಸಿದರು.

English summary
ISRO Chairman K Sivan said that, Chandrayaan-2 mission is expected to reach Moon's orbit on August 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X