ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ-ಆಗಸ್ಟ್‌ನಲ್ಲಿ ಕೊರೊನಾ ಲಸಿಕೆ ವಿತರಣೆಗೆ ವೇಗ: ಅಮಿತ್ ಶಾ

|
Google Oneindia Kannada News

ಅಹಮದಾಬಾದ್, ಜೂನ್ 21: ಜುಲೈ-ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಲಸಿಕೆ ವಿತರಣೆಯ ವೇಗ ಹೆಚ್ಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಕೋವಿಡ್-19 ವಿರುದ್ಧ ಹೋರಾಡಲು ಸರ್ಕಾರ ಆರಂಭಿಸಿರುವ ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬೆಂಗಳೂರು: ವಿದೇಶಕ್ಕೆ ತೆರಳುವವರಿಗೆ ಜೂನ್ 22 ರಂದು ಕೊರೊನಾ ಲಸಿಕೆಬೆಂಗಳೂರು: ವಿದೇಶಕ್ಕೆ ತೆರಳುವವರಿಗೆ ಜೂನ್ 22 ರಂದು ಕೊರೊನಾ ಲಸಿಕೆ

ಇಷ್ಟೊಂದು ಜನಸಂಖ್ಯೆಯನ್ನು ಹೊಂದಿರುವ ಭಾರತದಂತಹ ದೇಶಗಳಲ್ಲಿ ವಯಸ್ಕರಿಗೆಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವುದು ನಿಜಕ್ಕೂ ಸವಾಲಿನ ವಿಷಯ.ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ದೇಶಾದ್ಯಂತ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಈ ಲಸಿಕೆ ಕಾರ್ಯಕ್ರಮದಲ್ಲಿ ಭಾರತ ಈಗಾಗಲೇ ಮುಂಚೂಣಿಯಲ್ಲಿದೆ ಎಂದರು.

Centre To Increase Pace Of COVID-19 vVccination In July-August: Amit Shah

ಇನ್ನು ಮುಂದಿನ ಹೆಜ್ಜೆ ನಮ್ಮದು ಎಲ್ಲರಿಗೂ ಆದಷ್ಟು ಶೀಘ್ರದಲ್ಲಿ ಲಸಿಕೆ ತಲುಪಿಸುವುದಾಗಿದೆ ಎಂದರು. ಅವರು ಎರಡು ದಿನಗಳ ಅಹಮದಾಬಾದ್ ಭೇಟಿ ಕೈಗೊಂಡಿದ್ದಾರೆ.
ಗುಜರಾತ್‌ನ ಅಹದಾಬಾಸ್‌ನಲ್ಲಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರೆಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಮಾಡಿದ್ದು, ನಮ್ಮ ಈ ಕಾರ್ಯದಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ'' ಎಂದರು.

''ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಲಸಿಕೆ ನೀಡುವ ಕಾರ್ಯವನ್ನು ತ್ವರಿತಗೊಳಿಸಲಿದ್ದೇವೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಒಂದು ಮಹತ್ವದ ಪ್ರಯಾಣ ಆರಂಭವಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆಲ್ಲಾ ಉಚಿತ ಲಸಿಕೆ ನೀಡುವ ಮಹತ್ವದ ಕಾರ್ಯ ಇಂದು ಆರಂಭವಾಗಿದೆ'' ಎಂದರು.

English summary
Union Home Minister Amit Shah on Monday said the central government has decided to increase the pace of vaccination against COVID-19 in July and August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X