ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋರಿಸ್- ಮೋದಿ ಭೇಟಿ ವಿಶ್ವದ ಗಮನ ಸೆಳೆಯುತ್ತಿರುವುದು ಯಾಕೆ?

|
Google Oneindia Kannada News

ಅಹಮದಾಬಾದ್‌, ಏಪ್ರಿಲ್‌ 21: ಎರಡು ದಿನಗಳ ಭಾರತ ಪ್ರವಾಸವನ್ನು ಕೈಗೊಂಡಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಇಂದು ಬೆಳಗ್ಗೆ ಅಹಮದಾಬಾದ್‌ ನಗರಕ್ಕೆ ಆಗಮಿಸಿದ್ದಾರೆ. ಬೋರಿಸ್‌ ದೇಶದ ಉದ್ಯಮಿಗಳೊಂದಿಗೆ ವಾಣಿಜ್ಯ- ವ್ಯವಹಾರಗಳ ಸಭೆ ನಡೆಸಲಿದ್ದಾರೆ.

ಬಳಿಕ ಪ್ರಧಾನಿ ಮೋದಿಯವರನ್ನು ನಾಳೆ ಶುಕ್ರವಾರ ನವದೆಹಲಿಯಲ್ಲಿ ಪರಸ್ಪರ ಭೇಟಿಯಾಗಲಿದ್ದು ಭಾರತ ಹಾಗೂ ಯುಕೆಯ ವೀಸಾ ಹಾಗೂ ರಕ್ಷಣಾ ಒಪ್ಪಂದಗಳು ಕುರಿತಂತೆ ಸುದೀರ್ಘ ಮಾತುಕತೆ ಮತ್ತು ಎರಡು ದೇಶಗಳ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ.

Breaking; ಅಹಮದಾಬಾದ್‌ಗೆ ಆಗಮಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್Breaking; ಅಹಮದಾಬಾದ್‌ಗೆ ಆಗಮಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

ಸಾಕಷ್ಟು ಚರ್ಚೆಯಲ್ಲಿರುವ ಬ್ರಿಟನ್‌ ಪ್ರಧಾನಿಯ ಭಾರತ ಪ್ರವಾಸ ಹಾಗೂ ರಷ್ಯಾ ಉಕ್ರೇನ್‌ ಯುದ್ಧದ ನಡುವೆಯೇ ಬ್ರಿಟನ್‌ ಪ್ರಧಾನಿ ಭಾರತಕ್ಕೆ ಭೇಟಿ ನೀಡಿರುವುದು ವಿಶ್ವದ ಗಮನ ಸೆಳದಿದ್ದು, ರಷ್ಯಾ ದೇಶವನ್ನು ಬಹಿರಂಗವಾಗಿಯೇ ಟೀಕಿಸಿರುವ ಬ್ರಿಟನ್‌, ಉಕ್ರೇನ್‌ ದೇಶಕ್ಕೆ ಮಿಲಿಟರಿ ಸಹಾಯಕರನ್ನು ಕಳುಹಿಸಿದೆ. ಪ್ರಧಾನಿ ಜಾನ್ಸನ್ ಸ್ವತಃ ಯುದ್ಧ ಪೀಡಿತ ದೇಶಕ್ಕೆ ಭೇಟಿ ನೀಡಿದ್ದಾರೆ ಇನ್ನು ಈ ವಿಚಾರವಾಗಿ ಭಾರತವು ಇಲ್ಲಿಯವರೆಗೆ ತಟಸ್ಥವಾಗಿದ್ದು ಯುದ್ಧವನ್ನು ನಿಲ್ಲಿಸುವುದು ರಾಜತಾಂತ್ರಿಕತೆಯ ಪ್ರಮುಖ ಪರಿಹಾರಗಳಿಗೆ ಪ್ರಮುಖ ಬೆಳವಣಿಗೆಯಾಗಿದೆ ಎಂದು ಬೇರೆ ಯಾವ ದೇಶಗಳ ಪರಸ್ಪರ ವಿರೋಧವನ್ನು ಕಟ್ಟಿಕೊಳ್ಳದೇ ಭಾರತ ಒಳ್ಳೆಯ ಹೆಜ್ಜೆ ಹಾಕಿದೆ ಎನ್ನಲಾಗಿದೆ.

Boris Johnson to arrived in Ahmadabad,British Pm hold in-depth talks with PM Modi

ಇಂದು ಸಂಜೆ ದೆಹಲಿಗೆ ತೆರಳಿರುವ ಬ್ರಿಟನ್‌ ಪ್ರಧಾನಿ ನಾಳೆ ಮೋದಿಯೊಂದಿಗೆ ನಡೆಯಲಿರುವ ಚರ್ಚೆಗಳು ವಿಶ್ವದ ಗಮನ ಸೆಳೆದಿದ್ದು ದಬ್ಬಾಳಿಕೆಯನ್ನು ವಿರೋಧಿಸಿರುವ ಬ್ರಿಟನ್‌ ಭಾರತದಲ್ಲಿ ರಕ್ಷಣಾ ಕ್ಷೇತ್ರವನ್ನು ಗಮನ ಸೆಳೆಯಲಿದ್ದು ಭಾರತ ದೇಶವು ರಕ್ಷಣಾ ಉತ್ಪಾದನೆಯ ಕೇಂದ್ರವಾಗಿ ಬಿಂಬಿಸುವ ಗುರಿಗೆ ಯುಕೆ ಸಹಕಾರ ವಿಸ್ತರಿಸಲು ಸಿದ್ಧವಾಗಿದೆ ಹಾಗೂ ಯುಕೆ ಮಿಲಿಟರಿ ತಂತ್ರಜ್ಞಾನಗಳನ್ನು ಭಾರತಕ್ಕೆ ವರ್ಗಾವಣೆ ಮಾಡಲು ಬ್ರಿಟನ್‌ ದೇಶ ಸಿದ್ಧವಾಗಿದೆ ಎನ್ನಲಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಇವರ ಭೇಟಿಯ ನಂತರ ಬ್ರಿಟನ್‌ ಪ್ರಧಾನಿ ಮೋದಿ ಭೇಟಿಗಾಗಿ ಭಾರತಕ್ಕೆ ಬಂದಿರುವುದು ರಷ್ಯಾ ದೇಶದ ಅಕ್ರಮನಕ್ಕೆ ಪ್ರತಿಕ್ರಿಯೆ ಕುರಿತು ಭಾರತಕ್ಕೆ ಬಂದಿದ್ದಾರೆ ಈ ಮೂಲಕ ವಿಶ್ವಕ್ಕೆ ಯಾವ ಸಂದೇಶ ನೀಡಲಿದ್ದಾರೆ ಎಂಬುವುದು ತುಂಬಾ ಕೂತಹಲ ಮೂಡಿಸಿದೆ.

Boris Johnson to arrived in Ahmadabad,British Pm hold in-depth talks with PM Modi

ಇನ್ನು ಭಾರತವು ವೀಸಾಗಳನ್ನು ನೀಡುವ ವಿಷಯದಲ್ಲಿ ಯುಕೆಗೆ ಜಾಗತಿಕವಾಗಿ ಭಾರತವು ಮೊದಲ ಸ್ಥಾನದಲ್ಲಿದ್ದು, ವೀಸಾ ಪಡೆಯುವ ನುರಿತ ಭಾರತೀಯರ ಪಾಲು ಶೇಕಡಾ 40 ರಷ್ಟಿದೆ.

ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾನ್ಸನ್ ಅವರ ಭೇಟಿ ಹಾಗೂ ಚರ್ಚೆಗಳು ವ್ಯಾಪಕವಾದ ಪ್ರಮುಖ ದ್ವಿಪಕ್ಷೀಯ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಗಮನಹರಿಸಲಿವೆ ಎನ್ನಲಾಗಿದ್ದು ಬ್ರಿಟನ್‌ ಪ್ರಧಾನಿಯ ನಾಳೆಯ ಪ್ರಧಾನಿಯೊಂದಿಗಿನ ಭೇಟಿಯ ಮಾತಕತೆಗಳು ವಿಶ್ವದ ಗಮನ ಸೆಳೆದಿವೆ.

English summary
British the first Prime Minister Boris Johnson will visit India from April 21, the first time he will visit Gujarat. Why The British The First Prime Minister Boris Johnson will visit in India?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X