ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ : ಜಸ್‌ಧನ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯ

|
Google Oneindia Kannada News

ಅಹಮದಾಬಾದ್, ಡಿಸೆಂಬರ್ 23 : ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಂಪುಟದ ಸಚಿವ, ಬಿಜೆಪಿ ನಾಯಕ ಕುನ್ವರಾಜೀ ಬಾವಾಲಿಯಾ ಅವರು ಜಸ್‌ಧನ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿದರು.

ಗುಜರಾತ್‌ನ ಜಸ್‌ಧನ್ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಯಿತು. ಬಿಜೆಪಿಯ ಕುನ್ವರಾಜೀ ಬಾವಾಲಿಯಾ ಅವರು 19,985 ಮತಗಳ ಅಂತರಿಂದ ಕಾಂಗ್ರೆಸ್‌ನ ಅವಸಾರ್ ನಖೀಯಾ ಅವರನ್ನು ಸೋಲಿಸಿದರು.

ಗುಜರಾತ್ : ಜಸ್‌ಧನ್ ಕ್ಷೇತ್ರದ ಉಪ ಚುನಾವಣೆ, ಬಿಜೆಪಿ ಮುನ್ನಡೆ ಗುಜರಾತ್ : ಜಸ್‌ಧನ್ ಕ್ಷೇತ್ರದ ಉಪ ಚುನಾವಣೆ, ಬಿಜೆಪಿ ಮುನ್ನಡೆ

ಜಸ್‌ಧನ್ ಕ್ಷೇತ್ರದಲ್ಲಿ ಕುನ್ವರಾಜೀ ಬಾವಾಲಿಯಾ ಅವರು ಕಾಂಗ್ರೆಸ್‌ನಿಂದ ಕಳೆದ ಚುನಾವಣೆಯಲ್ಲಿ ಗೆದ್ದಿದ್ದರು. ಜುಲೈ ತಿಂಗಳಿನಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಆದ್ದರಿಂದ, ಉಪ ಚುನಾವಣೆ ಎದುರಾಗಿತ್ತು.

ಬಿಹಾರದಿಂದ ಲೋಕಸಭೆಗೆ : ಎಲ್ ಜೆಪಿ ಬೇಡಿಕೆಗೆ ಅಸ್ತು ಎಂದ ಬಿಜೆಪಿಬಿಹಾರದಿಂದ ಲೋಕಸಭೆಗೆ : ಎಲ್ ಜೆಪಿ ಬೇಡಿಕೆಗೆ ಅಸ್ತು ಎಂದ ಬಿಜೆಪಿ

BJPs Kunvarji Bavaliya wins Jasdan by-election

ಜಸ್‌ಧನ್ ಕ್ಷೇತ್ರದಲ್ಲಿ ಬಾವಾಲಿಯಾ ಅವರು 1995, 1998, 2002, 2007 ಮತ್ತು 2017ರ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಕೋಲಿ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕ ಬಾವಾಲಿಯಾ ಅವರು ಬಿಜೆಪಿ ಸೇರಿದ ಬಳಿಕ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು.

ಬಿಜೆಪಿಗೆ ತಲೆನೋವು, ಪಾಸ್ವಾನ್ ರಿಂದ ಸೀಟು ಪಾಲಿಟಿಕ್ಸ್ ದಾಳಬಿಜೆಪಿಗೆ ತಲೆನೋವು, ಪಾಸ್ವಾನ್ ರಿಂದ ಸೀಟು ಪಾಲಿಟಿಕ್ಸ್ ದಾಳ

ಸಂಪುಟ ಸೇರಿದ 6 ತಿಂಗಳವೊಳಗೆ ಚುನಾವಣೆಯಲ್ಲಿ ಅವರು ಜಯಗಳಿಸಬೇಕಾಗಿತ್ತು. ಜಸ್‌ಧನ್ ಕ್ಷೇತ್ರದಿಂದಲೇ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದಾರೆ.

ಕುನ್ವರಾಜೀ ಬಾವಾಲಿಯಾ ಅವರ ಎದುರಾಳಿ ಕಾಂಗ್ರೆಸ್‌ನ ಅವಸಾರ್ ನಖೀಯಾ ಅವರು 20 ವರ್ಷಗಳ ಕಾಲ ಬಾಲಾಲಿಯಾ ಅವರ ಆಪ್ತರಾಗಿದ್ದರು. ಬಾವಾಲಿಯಾ ಅವರು ಕಾಂಗ್ರೆಸ್ ತೊರೆದ ಬಳಿಕ ಎದುರಾದ ಚುನಾವಣೆಯಲ್ಲಿ ಇಬ್ಬರು ನಾಯಕರು ಮುಖಾಮುಖಿಯಾಗಿದ್ದರು.

English summary
BJP leader Kunvarji Bavaliya a minister in Chief Minister Vijay Rupani's cabinet on Sunday won the by-poll in Gujarat's Jasdan assembly seat by defeating Congress Avsar Nakiya by a massive margin of 19,985 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X