ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಕಷ್ಟ ಹೇಳಲು ಬಂದ ಮಹಿಳೆಯ ನಡುರಸ್ತೆಯಲ್ಲಿ ಒದ್ದ ಬಿಜೆಪಿ ಶಾಸಕ

|
Google Oneindia Kannada News

ಅಹ್ಮದಾಬಾದ್, ಮೇ 03: ತಮಗೆ ಸರಿಯಾಗಿ ನೀರು ಸಿಗುತ್ತಲ್ಲವೆಂದು ತನ್ನ ಕಷ್ಟ ಹೇಳಿಕೊಳ್ಳಲು ಬಂದಿದ್ದ ಮಹಿಳೆಯನ್ನು ನಡುರಸ್ತೆಯಲ್ಲಿ ಶಾಸಕನೋರ್ವ ಕಾಲಿಂದ ಒದ್ದು ಘಾಸಿಗೊಳಿಸಿದ್ದಾನೆ. ಶಾಸಕ ಅಧಿಕಾರದ ದರ್ಪ ತೋರುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಗುಜರಾತ್‌ನ ನರೋಡ ಕ್ಷೇತ್ರದ ಬಿಜೆಪಿ ಶಾಸಕ ಬಲರಾಮ್ ತವಾನಿ ಎಂಬಾತ ಈ ಹೀನ ಕೃತ್ಯ ಎಸಗಿದ್ದು, ತಮ್ಮ ಏರಿಯಾಗೆ ನೀರು ಸರಬರಾಜು ಆಗುತ್ತಿಲ್ಲವೆಂದು ಶಾಸಕರನ್ನು ಕೇಳಲು ಹೋಗಿದ್ದ ಮಹಿಳೆಯ ಮೇಲೆ ಶಾಸಕ ಮತ್ತು ಆತನ ಸಗಂಡಿಗರು ನಡು ರಸ್ತೆಯಲ್ಲಿಯೇ ಹಲ್ಲೆ ಮಾಡಿದ್ದಾರೆ.

ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಮೂವರ ಬಂಧನ ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಮೂವರ ಬಂಧನ

ಶಾಸಕ ಬಲರಾಮ್ ತವಾನಿ ಕಾಲಿನಿಂದ ಮಹಿಳೆಯನ್ನು ಒದೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಶಾಸಕನ ಜೊತೆಗೆ ಆತನ ಸಂಗಡಿಗರೂ ಮಹಿಳೆಯ ಮೇಲೆ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ವಿಡಿಯೋವನ್ನು ಸಾರ್ವಜನಿಕರು ಚಿತ್ರೀಕರಿಸಿದ್ದು, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೋದಿ ಸಂಪುಟದಲ್ಲಿ 6 ಮಹಿಳೆಯರಿಗೆ ಸಚಿವ ಸ್ಥಾನ, ಮೂವರಿಗೆ ಸಂಪುಟ ದರ್ಜೆ ಮೋದಿ ಸಂಪುಟದಲ್ಲಿ 6 ಮಹಿಳೆಯರಿಗೆ ಸಚಿವ ಸ್ಥಾನ, ಮೂವರಿಗೆ ಸಂಪುಟ ದರ್ಜೆ

ವಾರ್ಡ್‌ನ ನೀರಿನ ಸಮಸ್ಯೆ ಬಗ್ಗೆ ಹೇಳಲು ಹೋಗಿದ್ದರು

ಹಲ್ಲೆಗೆ ಒಳಗಾದ ಮಹಿಳೆ ಎನ್‌ಸಿಪಿ ಪಕ್ಷದ ಸಣ್ಣ ಮಟ್ಟದ ಮುಖಂಡೆ ಎನ್ನಲಾಗುತ್ತಿದ್ದು, ತಮ್ಮ ವಾರ್ಡ್‌ನಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಶಾಸಕರ ಗಮನ ಸೆಳೆಯಲು ಮಹಿಳೆಯರೊಂದಿಗೆ ಶಾಸಕರ ಭೇಟಿಗೆಂದು ಕಚೇರಿಗೆ ತೆರಳಿದ್ದರು, ನೀರಿನ ಕುರಿತು ಶಾಸಕರನ್ನು ಪ್ರಶ್ನೆ ಮಾಡಿದಾಗ ಕೆರಳಿದ ಶಾಸಕರು ಕಚೇರಿ ಬಿಟ್ಟು ಹೊರಗೆ ಬಂದಿದ್ದಾರೆ. ಅವರ ಹಿಂದೆಯೇ ಮಹಿಳೆಯು ಬಂದಿದ್ದಾರೆ ಹೊರಗೆ ಬಂದ ಕೂಡಲೇ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ.

ಮಹಿಳೆಯ ಪತಿಯ ಮೇಲೆಯೂ ಹಲ್ಲೆ

ಮಹಿಳೆಯ ಪತಿಯ ಮೇಲೆಯೂ ಹಲ್ಲೆ

ಆಕೆಯ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಯಲು ಬಂದ ಪತಿಯ ಮೇಲೆಯೂ ಶಾಸಕ ಮತ್ತು ಆತನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಮಹಿಳೆಯು ಶಾಸಕರ ವಿರುದ್ಧ ದೂರು ದಾಖಲಿಸಿದ್ದಾರೆ. 'ಭೇಟಿ ಬಚಾವ್ ಭೇಟಿ ಪಡಾವೋ' ಘೋಷಣೆ ನೀಡಿದ ಮೋದಿ ಅವರ ಪಕ್ಷಕ್ಕೆ ಸೇರಿದ ವ್ಯಕ್ತಿಯೇ ಮಹಿಳೆಯ ಮೇಲೆ ಮಾಡಿರುವ ಹಲ್ಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ಸ್ವರಕ್ಷಣೆಗಾಗಿ ಹಲ್ಲೆ ನಡೆಸಿದ್ದೇನೆ: ಶಾಸಕ

ಸ್ವರಕ್ಷಣೆಗಾಗಿ ಹಲ್ಲೆ ನಡೆಸಿದ್ದೇನೆ: ಶಾಸಕ

ಆದರೆ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಲರಾಮ್ ತವಾನಿ, ನನ್ನ ಮೇಲೆ ಮಹಿಳೆಯು ಮೊದಲಿಗೆ ಹಲ್ಲೆ ನಡೆಸಿದರು, ಆದ್ದರಿಂದ ಸ್ವರಕ್ಷಣೆಗಾಗಿ ನಾನು ಆಕೆಯ ಮೇಲೆ ಹಲ್ಲೆ ಮಾಡಿದೆ. ಆದರೆ ಘಟನೆ ಆಗಿ ಹೋಗಿದೆ ನಾನು ಕ್ಷಮಾಪಣೆ ಕೇಳಲು ತಯಾರಿದ್ದೇನೆ ಎಂದು ಹೇಳಿದ್ದಾರೆ.

ಸಂಧಾನಕ್ಕೆ ಒಪ್ಪದ ಮಹಿಳೆ

ಸಂಧಾನಕ್ಕೆ ಒಪ್ಪದ ಮಹಿಳೆ

ಆದರೆ ವಿಡಿಯೋದಲ್ಲಿ ಕಂಡು ಬಂದಂತೆ, ಶಾಸಕನ ಬೆಂಬಲಿಗ ಮತ್ತು ಶಾಸಕ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದಂತೆ ತೋರುತ್ತಿದೆ. ನಿನ್ನೆ ನರೋಡಾ ಪೊಲೀಸ್ ಠಾಣೆಯಲ್ಲಿ ಶಾಸಕ ಮತ್ತು ಮಹಿಳೆ ನಡುವೆ ಸಂಧಾನ ಮಾಡಿಸಲು ಪೊಲೀಸರು ಯತ್ನ ಮಾಡಿದ್ದಾರೆ. ಆದರೆ ಮಹಿಳೆಯು ಸಂಧಾನಕ್ಕೆ ಒಪ್ಪಿಲ್ಲವೆನ್ನಲಾಗುತ್ತಿದೆ.

English summary
BJP MLA Balram Thawani kicks a woman publicly, video of the incident went viral. woman met went to MLA's office to ask him about the water problem of her ward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X