ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಅಬ್ಬರಕ್ಕೆ ತತ್ತರಿಸಿದ ಕಾಂಗ್ರೆಸ್

|
Google Oneindia Kannada News

ಅಹಮದಾಬಾದ್, ಮಾರ್ಚ್ 3: ಗುಜರಾತ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಎಲ್ಲ 31 ಕ್ಷೇತ್ರಗಳಲ್ಲಿಯೂ ಕ್ಲೀನ್ ಸ್ವೀಪ್ ಮಾಡುವ ಮೂಲಕ ಕಮಲ ಪಕ್ಷವು ಕಾಂಗ್ರೆಸ್ ಅನ್ನು ದೂಳೀಪಟ ಮಾಡಿದೆ.

ಭಾನುವಾರ 81 ಮುನಿಸಿಪಾಲಿಟಿಗಳು, 31 ಜಿಲ್ಲಾ ಪಂಚಾಯತ್ ಮತ್ತು 231 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಗೆ ಮಂಗಳವಾರ ನಡೆಯಿತು. ಸಂಜೆ ವೇಳೆಗೆ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಎಲ್ಲ 31 ಜಿಲ್ಲಾ ಪಂಚಾಯಿತಿಗಳಲ್ಲಿ ಭರ್ಜರಿ ಮುನ್ನಡೆ ಪಡೆದುಕೊಂಡಿತು.

ಬಿಜೆಪಿಗೆ 'ಜೈ' ಎಂದ ಗುಜರಾತ್ ಜನ: ಪಾಲಿಕೆ ಚುನಾವಣೆಯಲ್ಲಿ ಕಮಲಕ್ಕೆ ಪ್ರಚಂಡ ಗೆಲುವುಬಿಜೆಪಿಗೆ 'ಜೈ' ಎಂದ ಗುಜರಾತ್ ಜನ: ಪಾಲಿಕೆ ಚುನಾವಣೆಯಲ್ಲಿ ಕಮಲಕ್ಕೆ ಪ್ರಚಂಡ ಗೆಲುವು

2015ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 22 ಹಾಗೂ ಕಾಂಗ್ರೆಸ್ ಏಳು ಜಿಲ್ಲಾ ಪಂಚಾಯತಿಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ಎರಡು ಕ್ಷೇತ್ರ ಇತರರ ಪಾಲಾಗಿತ್ತು. ಆದರೆ ಈ ಬಾರಿ ಬಿಜೆಪಿ ಎಲ್ಲ ಸೀಟುಗಳನ್ನೂ ತನ್ನ ವಶಪಡಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳನ್ನು ಅಧಿಕಾರದಿಂದ ಹೊರಹಾಕಿದೆ.

BJP Dominates Against In Gujarat Local Body Polls, Congress Wiped Out In District Panchayat

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ಕಂಡಿದೆ. ಪಂಚಮಹಲ್ ಜಿಲ್ಲೆಯಲ್ಲಿ ಖಾತೆ ತೆರೆಯಲೂ ವಿಫಲವಾಗಿದೆ. 29 ಜಿಲ್ಲೆಗಳಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳ ಸಂಖ್ಯೆ ಎರಡಂಕಿ ತಲುಪುವಲ್ಲಿಯೂ ವಿಫಲವಾಗಿದೆ.

ಕಾಂಗ್ರೆಸ್ ಹಿರಿಯ ಮುಖಂಡರಾದ ಪರೇಶ್ ಧನಾನಿ, ಅಮಿತ್ ಚಾವ್ಡಾ, ಭರತ್ ಸಿಂಗ್ ಸೋಲಂಕಿ, ಅಶ್ವಿನ್ ಕೊಟ್ವಾಲ್, ವಿಕ್ರಮ್ ಮದಮ್ ಮುಂತಾದವರ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಕಳಪೆ ಪ್ರದರ್ಶನ ತೋರಿಸಿದೆ. ಸ್ಥಳೀಯ ಚುನಾವಣೆಗಳಲ್ಲಿನ ಕೆಟ್ಟ ಪ್ರದರ್ಶನದ ಬಳಿಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ ಮತ್ತು ಗುಜರಾತ್ ವಿಧಾನಸಭೆಯಲ್ಲಿನ ವಿರೋಧಪಕ್ಷದ ನಾಯಕ ಪರೇಶ್ ಧನಾನಿ ರಾಜೀನಾಮೆ ಸಲ್ಲಿಸಿದ್ದಾರೆ.

ಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿ

81 ಮುನಿಸಿಪಾಲಿಟಿಗಳಲ್ಲಿ ಬಿಜೆಪಿ 75ರಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಮತ್ತು ಎಎಪಿಗಳು ಕ್ರಮವಾಗಿ ನಾಲ್ಕು ಮತ್ತು ಎರಡು ಕಡೆ ಮುನ್ನಡೆ ಸಾಧಿಸಿವೆ. 231 ತಾಲ್ಲೂಕುಪಂಚಾಯಿತಿಗಳಲ್ಲಿ ಬಿಜೆಪಿ 196ರಲ್ಲಿ, ಕಾಂಗ್ರೆಸ್ 33ರಲ್ಲಿ ಮುನ್ನಡೆ ಪಡೆದಿದೆ.

ಒಟ್ಟು 8,474 ಸೀಟುಗಳ ಪೈಕಿ 8,235 ಸೀಟುಗಳಿಗೆ ಚುನಾವಣೆ ನಡೆದಿತ್ತು. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು.

English summary
BJP has dominated again in Gujarat local body polls by wiping out Congress in all 31 district panchayat seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X