• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೊಣ್ಣೆಯಲ್ಲಿ ಬಡಿದಾಡಿದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು

|

ವಡೋದರ, ಫೆಬ್ರವರಿ 19: ಗುಜರಾತ್‌ನ ವಡೋದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಶುಕ್ರವಾರ ಚುನಾವಣಾ ಪ್ರಚಾರದ ವೇಳೆ ಎರಡೂ ಪಕ್ಷಗಳ ತಂಡಗಳು ಮುಖಾಮುಖಿಯಾದ ಸಂದರ್ಭದಲ್ಲಿ ಈ ಘರ್ಷಣೆ ನಡೆದಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಕೋಲು, ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ.

ಡೇಟಿಂಗ್‌ಗಾಗಿ ಕಾಫಿ ಶಾಪ್: ಇದು ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ!

ಬಿಜೆಪಿ ಮತ್ತು ಕಾಂಗ್ರೆಸ್ ವಡೋದರದಲ್ಲಿ ಭರದಿಂದ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಪ್ರತ್ಯೇಕವಾಗಿ ಸಾಗುತ್ತಿದ್ದ ಎರಡು ಗುಂಪುಗಳು ಒಂದೇ ರಸ್ತೆಗೆ ಇಳಿದಿವೆ. ಆಗ ಪರಸ್ಪರ ಮುಖಾಮುಖಿಯಾಗಿವೆ. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಕೂಡಲೇ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಕೈಗೆ ಸಿಕ್ಕಿದ ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು.

ಇದಕ್ಕೂ ಮುನ್ನ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ವಿವಾದದ ಕಾವು ಸೃಷ್ಟಿಸಿತ್ತು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದರೆ ಯುವಜನರಿಗಾಗಿ ಮುಕ್ತವಾದ ಡೇಟಿಂಗ್ ತಾಣವಾಗಿ ಕಾಫಿಶಾಪ್‌ಗಳನ್ನು ತೆರೆಯುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

ಭಾರತೀಯ ಮೌಲ್ಯಗಳನ್ನು ಗೌರವಿಸದ ಕಾಂಗ್ರೆಸ್ ನೀಡಿರುವ ಡೇಟಿಂಗ್ ಸ್ಥಳದ ಭರವಸೆಯು ಲವ್ ಜಿಹಾದ್‌ಗೆ ಪ್ರಚೋದನೆ ನಡಿದಂತೆ ಆಗಲಿದೆ ಎಂದು ಬಿಜೆಪಿ ಆರೋಪಿಸಿದೆ.

English summary
BJP and Congress workers attacks each other with sticks in Vadodara, Gujarat during civic poll campaign,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X