ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರಾ ಎಂದು ಕಾಲೇಜಿನಲ್ಲಿ ಒಳ ಉಡುಪು ಬಿಚ್ಚಿ ನೋಡ್ತಾರೆ

|
Google Oneindia Kannada News

ಅಹಮದಾಬಾದ್, ಫೆಬ್ರವರಿ 15: ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರಾ ಎಂದು ಖಚಿತಪಡಿಸಿಕೊಳ್ಳಲು ಬಲವಂತವಾಗಿ ಒಳ ಉಡುಪುಗಳನ್ನು ತೆಗೆಸಿ ಅವಮಾನ ಮಾಡಿರುವ ಘಟನೆ ಗುಜರಾತ್‌ನ ಕಾಲೇಜಿನಲ್ಲಿ ನಡೆದಿದೆ.

ಭುಜ್‌ನ ಶ್ರೀ ಸಹಜಾನಂದ ಬಾಲಕಿಯರ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಕೆಲ ವಿದ್ಯಾರ್ಥಿಗಳು ಸಂಸ್ಥೆಯ ಧಾರ್ಮಿಕ ನಿಯಮ ಉಲ್ಲಂಘಿಸಿದ್ದಾರೆ ಎಂದು ಹಾಸ್ಟೆಲ್‌ನ ಮುಖ್ಯಸ್ಥರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿತ್ತು.

ದುಷ್ಕರ್ಮಿ ಹಚ್ಚಿದ್ದ ಬೆಂಕಿಯಲ್ಲಿ ಬೆಂದು ಹೋಗಿದ್ದ ಉಪನ್ಯಾಸಕಿ ಸಾವುದುಷ್ಕರ್ಮಿ ಹಚ್ಚಿದ್ದ ಬೆಂಕಿಯಲ್ಲಿ ಬೆಂದು ಹೋಗಿದ್ದ ಉಪನ್ಯಾಸಕಿ ಸಾವು

ಹಾಸ್ಟೆಲ್‌ನಲ್ಲಿ ಇರುವ ಯುವತಿಯರು ಒಂದು ವೇಳೆ ಋತುಮತಿಯಾದ್ರೆ, ಅವರು ದೇಗುಲಕ್ಕೆ ಹಾಗೂ ಅಡುಗೆ ಕೋಣೆಗೆ ಪ್ರವೇಶ ನೀಡುವಂತಿಲ್ಲ. ಇತರ ವಿದ್ಯಾರ್ಥಿನಿಯರನ್ನು ಮುಟ್ಟುವಂತಿಲ್ಲ.

Bhuj College Girls Forced To Remove Underwear As Proof Of Periods

ಇಂಥಾ ನಿಯಮಗಳ ನಡುವೆಯೂ, ಹಾಸ್ಟೆಲ್‌ನ ಯುವತಿಯರು ಮುಟ್ಟಾಗಿದ್ದರೂ ಸಂಪ್ರದಾಯ ಪಾಲನೆ ಮಾಡುತ್ತಿಲ್ಲ ಎಂದು ಕಾಲೇಜ್‌ನ ಪ್ರಾಂಶುಪಾಲೆ ರೀಟಾ ಅವರಿಗೆ ಹಾಸ್ಟೆಲ್‌ನ ಆಡಳಿತ ಮಂಡಳಿ ದೂರು ನೀಡಿತ್ತು. ಇದರಿಂದ ಸಿಟ್ಟಿಗೆದ್ದ ಪ್ರಿನ್ಸಿಪಾಲ್ ಕಠಿಣ ಕ್ರಮಕ್ಕೆ ಮುಂದಾದರು.

ಶಿಕ್ಷಕಿಯರು 60 ಮಂದಿಯನ್ನು ವಾಷ್‌ ರೂಂಗೆ ಕರೆದೊಯ್ದು ಪರಿಶೀಲಿಸಿದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಕೋಲಾಹಲ ಎಬ್ಬಿಸಿದ ಈ ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ಯಾನಿಟರ್ ಪ್ಯಾಡ್ ಕಂಡು ಬಂದ ಕಾರಣ ವಿದ್ಯಾರ್ಥಿನಿಯರನ್ನು ಈ ರೀತಿ ಪರೀಕ್ಷೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಮ್ಮನ್ನ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಪ್ರಿನ್ಸಿಪಾಲ್ ಸೇರಿದಂತೆ ನಾಲ್ವರು ಶಿಕ್ಷಕಿಯರು ಬಲವಂತವಾಗಿ ನಮ್ಮ ಒಳಉಡುಪುಗಳನ್ನು ಬಿಚ್ಚಿಸಿದ್ದಾರೆ.

ಪ್ರತಿಭಟನೆ ನಡೆಸಿದರೆ ಹಾಸ್ಟಲ್‍ನಿಂದ ಹೊರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿಯರು ಅಳಲು ತೊಡಿಕೊಂಡಿದ್ದಾರೆ.

English summary
Gujarat's Bhuj, A college principal forced 68 female students and hostel residents to take off their undergarments in the washroom to prove they weren’t on their period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X