ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿರ್ ಅರಣ್ಯದಲ್ಲಿ ಮೂರು ತಿಂಗಳ ಅಂತರದಲ್ಲಿ 23 ಸಿಂಹಗಳ ಸಾವು

|
Google Oneindia Kannada News

ಅಹಮದಾಬಾದ್, ಮೇ 8: ಇಲ್ಲಿನ ಗಿರ್ ಅರಣ್ಯದಲ್ಲಿ ಮೂರು ತಿಂಗಳ ಅಂತರದಲ್ಲಿ 23 ಸಿಂಹಗಳು ಮೃತಪಟ್ಟಿವೆ.

Recommended Video

ನಿಜವಾದ ಸೂಪರ್ ಕಾಪ್ ಅಂದ್ರೆ ಇವ್ರೆ ನೋಡಿ..? | Indian Police | Feedding cow

ಸರಣಿ ಸಿಂಹಗಳ ಸಾವಿಗೆ ಬೆಬಿಸಿಯಾ(ಬೆಬಿಸಿಯೋಸಿಸ್ ರೋಗ) ವೈರಸ್ ಕಾರಣ ಎಂದು ವನ್ಯಜೀವಿ ತಜ್ಞರು ಪತ್ತೆ ಹಚ್ಚಿದ್ದಾರೆ. ಇದು ಒಂದು ಮಾದರಿಯ ಜ್ವರವಾಗಿದೆ. ಸತ್ತ ಹಲವು ಸಿಂಹಗಳ ದೇಹದಲ್ಲಿ ಈ ವೈರಾಣು ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿ(ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ(ಎನ್‍ಐವಿ) ಹೇಳಿದೆ. ಈ ಸಂಸ್ಥೆಗಳು ಸತ್ತ ಸಿಂಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದವು.

ಹಾಗೆಯೇ ಈ ಹಿಂದೆ ಕ್ಯಾನಿನ್ ಡಿಸ್ಟೆಂಪರ್ ಎಂಬ ವೈರಸ್ (ಸಿಡಿವಿ) ಪೂರ್ವ ಆಫ್ರಿಕಾದಲ್ಲಿ ಸಹ ಈ ವೈರಾಣು ವನ್ಯಜೀವಿಗಳಿಗೆ ಭಾರಿ ಹಾನಿ ಮಾಡಿತ್ತು. ಕೇವಲ ಸಿಂಹಗಳನ್ನಷ್ಟೆ ಅಲ್ಲ ಎಲ್ಲ ರೀತಿಯ ವನ್ಯಜೀವಿಗಳನ್ನು ಕಾಡುವ ಈ ವೈರಾಣು ಪೂರ್ಣ ಆಫ್ರಿಕಾದಲ್ಲಿ ಶೇ 30% ವನ್ಯಜೀವಿಗಳ ಜೀವಕ್ಕೆ ಎರವಾಗಿತ್ತು.

Babesiosis Outbreak In Gujarat’s Gir Causes Death Of 23 Asiatic Lions

ಅಮೆರಿಕದಿಂದ ತಂದಿರುವ ಚುಚ್ಚುಮದ್ದನ್ನು ಕೂಡಲೇ ಗಿರ್ ಅರಣ್ಯ ಪ್ರದೇಶದ ಸಿಂಹಗಳಿಗೆ ಮತ್ತು ಅಲ್ಲಿನ ಇತರ ವನ್ಯಜೀವಿಗಳಿಗೆ ನೀಡಲಾಗಿತ್ತು .

ಗುಜರಾತ್ ನ ಗಿರ್ ಅರಣ್ಯದಲ್ಲಿ 18 ದಿನದಲ್ಲಿ 31 ಸಿಂಹ ಸಾವುಗುಜರಾತ್ ನ ಗಿರ್ ಅರಣ್ಯದಲ್ಲಿ 18 ದಿನದಲ್ಲಿ 31 ಸಿಂಹ ಸಾವು

ಗಿರ್‌ ಪ್ರದೇಶದಲ್ಲಿ ಸತತವಾಗಿ ಅಸುನೀಗಿದ ಸಿಂಹಗಳು ರಾಷ್ಟ್ರದ ಗಮನ ಸೆಳೆದಿದ್ದವು. ಪ್ರಾಣಿ ಪ್ರಿಯರು ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಸಿಂಹಗಳ ನಡುವೆ ಬೇಟೆ ಪ್ರದೇಶ ಹಂಚಿಕೆಗಾಗಿ ಯುದ್ಧ ನಡೆದು ಸಿಂಹಗಳು ಸಾಯುತ್ತಿವೆ ಎಂದು ಮೊದಲ ನಂಬಲಾಗಿತ್ತು. ಆದರೆ ಅದು ಸುಳ್ಳೆಂದು ಈಗ ತಿಳಿದುಬಂದಿದೆ.

ಹಾಗೆಯೇ 2018ರಲ್ಲಿ 21 ಸಿಂಹಗಳು ಇದೇ ಅರಣ್ಯದಲ್ಲಿ ಮೃತಪಟ್ಟಿದ್ದವು. ಸೋಂಕಿನಿಂದ ಬಳಲುತ್ತಿರುವ ಸಿಂಹಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 18 ಸಿಂಹಗಳಿಗೆ ಸೋಂಕು ತಗುಲಿದೆ. ಅದರಲ್ಲಿ ಆರು ಸಿಂಹಗಳು ಗುಣಮುಖವಾಗಿವೆ. ಈ ಬೆಬಿಸಿಯಾ ವೈರಸ್‌ಗಳು ನೇರವಾಗಿ ಕೆಂಪು ರಕ್ತ ಕಣಗಳ ಮೇಲೆ ದಾಳಿ ಮಾಡುತ್ತವೆ. ಇದರಿಂದ ಸಿಂಹಗಳು ಅನೇಮಿಯಾಗೆ ತುತ್ತಾಗುತ್ತವೆ.

English summary
An outbreak of Babesiosis caused by a protozoan parasite has reportedly caused the death of several lions in India’s only wild abode for Asiatic lions in Gujarat’s Gir National Park, in the last three months, officials said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X