ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕರಣ ಹೆಚ್ಚಳವಾಗುತ್ತಿದ್ದಂತೆ ಕಾಣಿಸಿಕೊಂಡಿದೆ ಆಂಟಿಫಂಗಸ್‌ ಔಷಧಿ ಕೊರತೆ

|
Google Oneindia Kannada News

ಗುಜರಾತ್‌, ಮೇ 19: ಕೊರೊನಾ ಸೋಂಕು ದೇಶದಲ್ಲಿ ಹೆಚ್ಚಳವಾಗುತ್ತಿರುವ ನಡುವೆ ಕಾಣಿಸಿಕೊಂಡಿರುವ ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ಬಳಸಲಾಗುವ ಆಂಟಿ ಫಂಗಲ್‌ ಔಷಧಿ ಆಂಫೊಟೆರಿಸಿನ್-ಬಿ ಯ ಕೊರತೆಯು ಗುಜರಾತ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ.

ಗುಜರಾತ್‌ನ ಐದು ನಗರಗಳಲ್ಲಿ ಎಂಟು ಪ್ರಮುಖ ಆಸ್ಪತ್ರೆಗಳಲ್ಲಿ, ಪ್ರಸ್ತುತ ಕನಿಷ್ಠ 1,163 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಔಷಧಿ ಕೊರತೆ ಕಾಣಿಸಕೊಂಡಿರುವುದು ಆತಂಕ ಮೂಡಿಸಿದೆ.

ಗುಜರಾತ್‌ನಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕರಣ ದಿನೇ ದಿನೇ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆ ಆರಂಭದಲ್ಲೇ ಸೋಂಕಿತರನ್ನು ಪತ್ತೆಹಚ್ಚುವುದು ಚೇತರಿಕೆ ಪ್ರಮಾಣ ಹೆಚ್ಚಿಸಲಿದೆ ಎಂದು ವೈದ್ಯರು ಹೇಳುತ್ತಾರೆ.

Antifungal drug in short supply as black fungus cases rise in Gujarat

ಸೋಮವಾರ, ಕೊರೊನಾ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್, ಬ್ಲ್ಯಾಕ್‌ ಫಂಗಸ್‌ ಪ್ರಕರಣ ಏರಿಕೆಯ ಬಗ್ಗೆ ಉಲ್ಲೇಖಿಸಿ ಇದು "ಅತ್ಯಂತ ಗಂಭೀರ ವಿಷಯ" ಎಂದು ಹೇಳಿದೆ. ಹಾಗೆಯೇ ಈ ಬಗ್ಗೆ ರಾಜ್ಯ ಸರ್ಕಾರ ವರದಿ ನೀಡುವಂತೆ ಆದೇಶಿಸಿದೆ. ಈ ಪ್ರಕರಣ ಏರಿಕೆ ನಡುವೆ ಔಷಧಿಗಳ ಸಂಗ್ರಹ ಸಾಕಷ್ಟು ಇದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಜರಾತ್ ವೈದ್ಯಕೀಯ ಶಿಕ್ಷಣ ಹಾಗೂ ಗೋತ್ರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಂಶೋಧನಾ ಸಂಸ್ಥೆಯ ಅಧೀಕ್ಷಕರು ಡಾ. ವಿಶಾಲ ಪಾಂಡ್ಯ, ನಮಗೆ ಗುಜರಾತ್ ವೈದ್ಯಕೀಯ ಸೇವೆಗಳ ನಿಗಮದಿಂದ ಆಂಫೊಟೆರಿಸಿನ್ ಬಿ ಔಷಧಿ ಲಭಿಸುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಸೋಂಕಿತ ರೋಗಿಗಳ ಸಂಖ್ಯೆ ಹೆಚ್ಚಾದರೆ ಈ ಔಷಧಿ ಸಾಕಾಗುವುದಿಲ್ಲ. ಬ್ಲ್ಯಾಕ್‌ ಫಂಗಸ್‌ ಸೋಂಕು ಇರುವ ರೋಗಿಗಳಿಗೆ ಉಚಿತವಾಗಿ ಲಭ್ಯವಿರುವ ಲಿಯೋಫಿಲೈಸ್ಡ್ ಪೌಡರ್ ರೂಪದ ಔಷಧಿ ನೀಡಲಾಗುವುದಿಲ್ಲ. ಓರ್ವ ರೋಗಿಗೆ ಅಧಿಕವೆಂದರೆ 120 ಚುಚ್ಚುಮದ್ದಿನ ಅವಶ್ಯಕತೆ ಉಂಟಾಗುತ್ತದೆ ಎಂದು ವಿವರಿಸಿದ್ದಾರೆ.

ಇನ್ನು ಸರ್ಕಾರದ ಪರ ವಕೀಲ ಎಜಿ ತ್ರಿವೇದಿ ಕೋರ್ಟ್‌ಗೆ, ಲಿಪೊಸೋಮಲ್ ಮತ್ತು ಲೈಫೈಲೈಸ್ಡ್ ರೂಪದಲ್ಲಿ ಆಂಫೊಟೆರಿಸಿನ್ ಬಿ ಯ 1,24,430 ಬಾಟಲುಗಳನ್ನು ಒದಗಿಸಲು ಸರ್ಕಾರ ಈಗಾಗಲೇ ಬೇಡಿಕೆ ಸಲ್ಲಿಸಿದೆ. ಅದರಲ್ಲಿ 26,000 ಆದ್ಯತೆಯ ಲಿಪೊಸೋಮಲ್ ಆಗಿದೆ. ಅಂದಾಜು 15 ಕೋಟಿ ರೂ.ಗಳ ವೆಚ್ಚವನ್ನು ರಾಜ್ಯ ಭರಿಸಲಿದೆ ಎಂದು ಹೇಳಿದ್ದರು.

ಹಾಗೆಯೇ ನಮ್ಮಲ್ಲಿ ಸಾಕಷ್ಟು ಔಷಧಿ ದಾಸ್ತಾನು ಇದೆ. ಆದರೆ ಉತ್ಪಾದಕರ ಸಂಖ್ಯೆ ಕಡಿಮೆ ಇರುವುದರಿಂದ ಚುಚ್ಚುಮದ್ದು ಸುಲಭವಾಗಿ ಲಭ್ಯವಾಗುತ್ತಿಲ್ಲ. ರೆಮ್‌ಸಿಡಿವಿರ್‌ ಕೊರತೆಯೊಂದಿಗೆ ಈಗ ಆಂಫೊಟೆರಿಸಿನ್-ಬಿ ಕೊರತೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೂಡಾ ತಿಳಿಸಿದ್ದರು.

ಇನ್ನು ಸರ್ಕಾರ ಮೇ 26 ರಂದು ನಿಗದಿಯಾಗುವ ಮುಂದಿನ ವಿಚಾರಣೆಯ ಮೊದಲು ಆಂಟಿಫಗಲ್‌ ಔಷಧಿಗಳ ಬಗ್ಗೆ ವಿವಿರಣೆ ನೀಡಿ ಅಫಿಡವಿಟ್ ಸಲ್ಲಿಸಬೇಕು ಎಂದು ಗುಜರಾತ್ ಹೈಕೋರ್ಟ್ ಆದೇಶಿಸಿದೆ.

ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯಲ್ಲಿ ಪ್ರಸ್ತುತ 400 ಮಂದಿ ರೋಗಿಗಳಿದ್ದಾರೆ. ಅವರಲ್ಲಿ ಹೆಚ್ಚಿನವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಆದರೆ ಕೆಲವು ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಆಂಫೊಟೆರಿಸಿನ್-ಬಿ ಪಡೆಯಲು ಈ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಡಾ. ತ್ರಿವೇದಿ ಹೇಳಿದ್ದಾರೆ.

English summary
Lack of antifungal drug amphotericin-B, which is used to treat black fungus patient, caused to Anxiety in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X