ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಸೋಂಕಿತರ ಚಿಕಿತ್ಸಾ ವೆಚ್ಚ ಹೆಚ್ಚಾಗುವುದರ ಹಿಂದಿನ ರಹಸ್ಯ?

|
Google Oneindia Kannada News

ಅಹ್ಮದಾಬಾದ್, ಆಗಸ್ಟ್.25: ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆರೋಗ್ಯ ರಕ್ಷಣೆ ಮೌಲ್ಯ ಜನರ ಅರಿವಿಗೆ ಬರುತ್ತಿದೆ. ಇದರ ನಡುವೆ ಗುಜರಾತ್ ನಲ್ಲಿ ಶೇ.85ರಷ್ಟು ಜನರಿಗೆ ಆರೋಗ್ಯ ರಕ್ಷಣೆಯೇ ಇಲ್ಲ ಎಂಬ ಅಂಶ ಬಯಲಾಗಿದೆ.

Recommended Video

Annamalai IPS : ಕಮಲ ಹಿಡಿದು ಕಮಾಲ್ ಮಾಡ್ತಾರ ಸಿಂಗಂ | Oneindia Kannada

ದೇಶದಲ್ಲಿ 2017-18ನೇ ಸಾಲಿನಲ್ಲಿ ನಡೆಸಿದ ರಾಷ್ಟ್ರೀಯ ಮಾದರಿ ಸಮೀಕ್ಷೆ ವರದಿಗೆ ಸಂಬಂಧಿಸಿದಂತೆ ಭಾರತೀಯ ಅಂಕಿ-ಅಂಶಗಳ ಕಚೇರಿಯು ಮಾಹಿತಿ ನೀಡಿದೆ. ಅದರ ಪ್ರಕಾರ, ಗುಜರಾತ್ ನಗರ ಪ್ರದೇಶದ ಶೇ.85.30 ರಷ್ಟು ಹಾಗೂ ಗ್ರಾಮೀಣ ಪ್ರದೇಶದ ಶೇ.87.30ರಷ್ಟು ಜನರಿಗೆ ಆರೋಗ್ಯ ರಕ್ಷಣೆಯೇ ಇಲ್ಲ ಎನ್ನುವುದು ಗೊತ್ತಾಗಿದೆ. ಇದರಿಂದ ಚಿಕಿತ್ಸಾ ವೆಚ್ಚವನ್ನು ಭರಿಸುವುದೇ ದೊಡ್ಡ ಸವಾಲಿನ ರೀತಿ ಆಗುತ್ತಿದೆ.

ಕೊರೊನಾವೈರಸ್ ಸೋಂಕಿತರ ಆಸ್ಪತ್ರೆ ಶುಲ್ಕ ಹೆಚ್ಚಾಗುತ್ತಿರುವುದು ಏಕೆ?ಕೊರೊನಾವೈರಸ್ ಸೋಂಕಿತರ ಆಸ್ಪತ್ರೆ ಶುಲ್ಕ ಹೆಚ್ಚಾಗುತ್ತಿರುವುದು ಏಕೆ?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಸಾರ್ವಜನಿಕರ ವೈದ್ಯಕೀಯ ವೆಚ್ಚದ ಪ್ರಮಾಣವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಅಹ್ಮದಾಬಾದ್, ಸೂರತ್ ನಂತಾ ನಗರದಲ್ಲಿ ಪ್ರತಿನಿತ್ಯ ನೂರಾರು ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗೆ ದಾಖಲಾಗುತ್ತಿರುವ ಸೋಂಕಿತರ ಚಿಕಿತ್ಸಾ ವೆಚ್ಚ ಹೆಚ್ಚಾಗುವುದಕ್ಕೆ ಕಾರಣ ಏನು ಎನ್ನುವುದರ ಹಿಂದಿನ ರಹಸ್ಯ ಇಲ್ಲಿದೆ ನೋಡಿ.

ಕೊವಿಡ್-19 ಸೋಂಕಿತರಿಗೆ ಚಿಕಿತ್ಸಾ ವೆಚ್ಚ ಹೇಗೆ?

ಕೊವಿಡ್-19 ಸೋಂಕಿತರಿಗೆ ಚಿಕಿತ್ಸಾ ವೆಚ್ಚ ಹೇಗೆ?

ಗುಜರಾತ್ ನಗರ ಪ್ರದೇಶಗಳಲ್ಲಿ ಶೇ.4.1ರಷ್ಟು ಕೊರೊನಾವೈರಸ್ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ವಹಿಸಿಕೊಂಡಿದೆ. ಅಂದರೆ ಸರ್ಕಾರದ ಯೋಜನೆಗಳ ಅಡಿಯಲ್ಲಿ ಅನುದಾನವನ್ನು ನೀಡಲಾಗುತ್ತಿದೆ. ಶೇ.3.5ರಷ್ಟು ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಅವರು ಉದ್ಯೋಗ ಮಾಡುವ ಖಾಸಗಿ ಕಂಪನಿಗಳೇ ಭರಿಸುತ್ತಿವೆ. ಕೇವಲ ಶೇ.7.1ರಷ್ಟು ಜನರು ಮಾತ್ರ ವಿಮಾ ಕಂಪನಿಗಳಿಂದ ತಮ್ಮ ಚಿಕಿತ್ಸಾ ವೆಚ್ಚವನ್ನು ಪಡೆದುಕೊಂಡು ಆರೋಗ್ಯ ರಕ್ಷಣೆಯನ್ನು ಹೊಂದಿದ್ದಾರೆ. ಇನ್ನು, ಗ್ರಾಮೀಣ ಪ್ರದೇಶದಲ್ಲಿ ಶೇ.11.20ರಷ್ಟು ಸೋಂಕಿತರಿಗೆ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಅನುದಾನವನ್ನು ನೀಡಿ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ಶೇ.07ರಷ್ಟು ಜನರು ಖಾಸಗಿ ಕಂಪನಿಗಳಿಂದ ಮತ್ತು ಶೇ.0.8ರಷ್ಟು ಜನರು ವಿಮಾ ಕಂಪನಿಗಳಿಂದ ಆರೋಗ್ಯ ರಕ್ಷಣೆಯನ್ನು ಪಡೆದುಕೊಂಡಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲೇ ಅತಿಹೆಚ್ಚು ಸೋಂಕಿತರು ದಾಖಲು

ಖಾಸಗಿ ಆಸ್ಪತ್ರೆಗಳಲ್ಲೇ ಅತಿಹೆಚ್ಚು ಸೋಂಕಿತರು ದಾಖಲು

ಗುಜರಾತ್ ನ ನಗರ ಪ್ರದೇಶಗಳಲ್ಲಿ ಶೇ.70.30ರಷ್ಟು ಕೊರೊನಾವೈರಸ್ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿನ ಕೊವಿಡ್-19 ಸೋಂಕಿತರ ಪೈಕಿ ಶೇ.53.60ರಷ್ಟು ಜನರು ಸಹ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಯಸುವವರ ಪ್ರಮಾಣ ತೀರಾ ಕಡಿಮೆಯಾಗಿದೆ. ರಾಜ್ಯದ ನಗರ ಪ್ರದೇಶಗಳಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಪ್ರಮಾಣ ಶೇ. 21.30ರಷ್ಟಿದೆ. ಇನ್ನು, ಗ್ರಾಮೀಣ ಪ್ರದೇಶಗಳಲ್ಲಿ ಶೇ.40.10ರಷ್ಟು ಸೋಂಕಿತರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಮುಂದಾಗುತ್ತಾರೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ.

ಗುಜರಾತ್ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ

ಗುಜರಾತ್ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ

ಭಾರತದಲ್ಲಿ ಪತ್ತೆಯಾಗುತ್ತಿರುವ ಕೊವಿಡ್-19 ಸೋಂಕಿತರು ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಹೀಗೆ ಅತಿಹೆಚ್ಚು ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾದ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಐದನೇ ಸ್ಥಾನದಲ್ಲಿದೆ. ಗುಜರಾತ್ ನಲ್ಲಿ ಶೇ.70.30ರಷ್ಟು ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಮಾಣವು ರಾಷ್ಟ್ರೀಯ ಸರಾಸರಿಯು ಶೇ.61.40ರಷ್ಟಿದೆ. ಒಟ್ಟಾರೆಯಾಗಿ ಶೇ.62ರಷ್ಟು ರೋಗಿಗಳು ಖಾಸಗಿ ಆಸ್ಪತ್ರೆ, ಶೇ.31.10ರಷ್ಟು ಜನ ಸರ್ಕಾರಿ ಆಸ್ಪತ್ರೆ ಮತ್ತು ಶೇ.7.30ರಷ್ಟು ಚಾರಿಟಿ ಮತ್ತು ಟ್ರಸ್ಟ್ ಚಾಲಿತ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.

ದಾಖಲಾತಿಯ ಸರಾಸರಿ ಚಿಕಿತ್ಸಾ ವೆಚ್ಚವೆಷ್ಟು?

ದಾಖಲಾತಿಯ ಸರಾಸರಿ ಚಿಕಿತ್ಸಾ ವೆಚ್ಚವೆಷ್ಟು?

ಇನ್ನು, ಸಮೀಕ್ಷೆಯ ಪ್ರಕಾರ ಶೇ.22.20ರಷ್ಟು ಜನರು ಉಚಿತವಾಗಿ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಚಿಕಿತ್ಸಾ ವೆಚ್ಚವು 25027 ರೂಪಾಯಿ ಆಗಿದ್ದರೆ, ನಗರ ಪ್ರದೇಶಗಳಲ್ಲಿ 29,281 ರೂಪಾಯಿಯಷ್ಟಿದೆ. ಕಳೆದ ಐದು ವರ್ಷಗಳಲ್ಲಿ ಗುಜರಾತ್ ನಲ್ಲಿ ಆರೋಗ್ಯ ವಿಮೆ ಮಾಡಿಸಿಕೊಳ್ಳುವವರ ಸಂಖ್ಯೆಯು ತೀರಾ ಕಡಿಮೆಯಾಗಿದೆ. ಇದರಿಂದ ಜನರಿಗೆ ಆರೋಗ್ಯ ಸಂಬಂಧಿತ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಕಷ್ಟಸಾಧ್ಯವಾಗುತ್ತಿದೆ ಎಂದು ಅಹ್ಮದಾಬಾದ್ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ ಅಧ್ಯಕ್ಷ ಡಾ.ಭರತ್ ಘದ್ವಿ ತಿಳಿಸಿದ್ದಾರೆ.

English summary
Amid Coronavirus 85% Peoples dont Have Health Cover. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X