ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಮದಾಬಾದ್; ಕೊರೊನಾ ತಡೆಯಲು ಎಲ್ಲಾ ಅಂಗಡಿಗಳಿಗೆ ಬೀಗ

|
Google Oneindia Kannada News

ಅಹಮದಾಬಾದ್, ಮೇ 07 : ಕೊರೊನಾ ಹರಡದಂತೆ ತಡೆಯಲು ಗುಜರಾತ್‌ನ ಅಹಮದಾಬಾದ್‌ನಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ. ನಗರದಲ್ಲಿ ಇದುವರೆಗೂ 4716 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ.

ಗುರುವಾರದಿಂದ ಮೇ 15ರ ಮಧ್ಯರಾತ್ರಿ ತನಕ ಅಹಮದಾಬಾದ್ ನಗರದಲ್ಲಿ ಎಲ್ಲಾ ಅಂಗಡಿಗಳು ಮುಚ್ಚಿರುತ್ತದೆ. ಹಾಲು ಮತ್ತು ಮೆಡಿಕಲ್ ಶಾಪ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಒಂದು ವಾರಗಳ ಕಾಲ ಈ ಆದೇಶ ಕಟ್ಟುನಿಟ್ಟಾಗಿ ಜಾರಿಯಲ್ಲಿ ಇರುತ್ತದೆ.

ದಾವಣಗೆರೆಯ ಕೊರೊನಾ ಸೋಂಕಿಗೆ ಗುಜರಾತ್ ನಂಟು?ದಾವಣಗೆರೆಯ ಕೊರೊನಾ ಸೋಂಕಿಗೆ ಗುಜರಾತ್ ನಂಟು?

ಸೂಪರ್ ಮಾರ್ಕೆಟ್, ದಿನಸಿ ಅಂಗಡಿ, ತರಕಾರಿ ಅಂಗಡಿಗಳು ಸೋಂಕು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದ್ದರಿಂದ, ಸಾಮಾಜಿಕ ಅಂತರ ಕಾಪಾಡಲು ಏಳು ದಿನ ಎಲ್ಲಾಅಂಗಡಿಗಳನ್ನು ಮುಚ್ಚಲಾಗುತ್ತದೆ ಎಂದು ನಗರಸಭೆ ಹೇಳಿದೆ.

ಸೋಂಕಿತ ಬಿಎಸ್ಎಫ್ ಯೋಧರ ಸಂಪರ್ಕದಿಂದ 22 ಮಂದಿಗೆ ಕೊರೊನಾ! ಸೋಂಕಿತ ಬಿಎಸ್ಎಫ್ ಯೋಧರ ಸಂಪರ್ಕದಿಂದ 22 ಮಂದಿಗೆ ಕೊರೊನಾ!

ಗುಜರಾತ್ ರಾಜ್ಯದಲ್ಲಿ ಇದುವರೆಗೂ 6, 625 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 4, 716 ಅಹಮದಾಬಾದ್, 754 ಸೂರತ್‌, 421 ವಡೋದರ, ಗಾಂಧಿನಗರದಲ್ಲಿ 83 ಪ್ರಕರಣಗಳು ದಾಖಲಾಗಿದೆ.

ಗುಜರಾತ್ ಸಿಎಂ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರಿಗೆ ಕೊರೊನಾ ದೃಢಗುಜರಾತ್ ಸಿಎಂ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರಿಗೆ ಕೊರೊನಾ ದೃಢ

ಯಾವುದಕ್ಕೆ ವಿನಾಯಿತಿ

ಯಾವುದಕ್ಕೆ ವಿನಾಯಿತಿ

ಅಹಮದಾಬಾದ್ ನಗರದಲ್ಲಿ ಮೇ 7ರಿಂದ 15ರ ಮಧ್ಯರಾತ್ರಿ ತನಕ ಹಾಲು, ಔಷಧಿ ಮತ್ತು ಆಸ್ಪತ್ರೆ ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ. ಆಹಾರ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸಹ ಒಂದು ವಾರ ನಿಷೇಧಿಸಲಾಗಿದೆ.

ಅಂಗಡಿಗಳ ಮುಂದೆ ದೊಡ್ಡ ಸಾಲು

ಅಂಗಡಿಗಳ ಮುಂದೆ ದೊಡ್ಡ ಸಾಲು

ನಗರದಲ್ಲಿ ತರಕಾರಿ ಮತ್ತು ದಿನಸಿ ಅಂಗಡಿಗಳ ಮುಂದೆ ದೊಡ್ಡ ಸಾಲು ಬುಧವಾರ ಕಂಡು ಬಂದಿತು. ಸಾಮಾಜಿಕ ಅಂತರದ ನಿಯಮವನ್ನು ಜನರು ಗಾಳಿಗೆ ತೂರಿದ್ದರು. ಲಾಕ್ ಡೌನ್ ನಿಯಮಗಳ ಪಾಲನೆ ಆಗುತ್ತಿರಲಿಲ್ಲ. ಗುರುವಾರದಿಂದ ಎಲ್ಲಾ ಅಂಗಡಿ ಬಂದ್ ಆಗಿದೆ. ಪೊಲೀಸರು ರಾತ್ರಿಯೂ ಸಹ ಗಸ್ತು ತಿರುಗಲಿದ್ದು, ನಿಯಮ ಪಾಲನೆಗೆ ಗಮನ ಕೊಡಲಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಮನವಿ

ಕೇಂದ್ರ ಸರ್ಕಾರಕ್ಕೆ ಮನವಿ

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ನಗರದಲ್ಲಿನ ಸಂಕಷ್ಟದ ಪರಿಸ್ಥಿತಿ ಎದುರಿಸಲು ವೈದ್ಯಕೀಯ ತಂಡವನ್ನು ಕಳುಹಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಅಹಮದಾಬಾದ್ ನಗರ ಸಭೆಯ ಆಯುಕ್ತರೇ ಕೋವಿಡ್ - 19 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದು ಕ್ವಾರಂಟೈನ್‌ನಲ್ಲಿದ್ದಾರೆ.

ಆಹಾರ ಸೇವೆಯೂ ಸ್ಥಗಿತ

ಆಹಾರ ಸೇವೆಯೂ ಸ್ಥಗಿತ

ಸ್ವಿಗ್ಗಿ, ಝೋಮ್ಯಾಟೋ ಸೇರಿದಂತೆ ಆಹಾರ ಡೆಲಿವರಿ ಮಾಡುವ ಮೂಲಕವೂ ಸೋಂಕು ಹಬ್ಬುತ್ತಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ. ಆದ್ದರಿಂದ, 7 ದಿನಗಳ ಕಾಲ ಹೋಂ ಡೆಲಿವರಿಯನ್ನು ಸಹ ಬಂದ್ ಮಾಡಲಾಗಿದೆ.

English summary
All shops closed except medicine and milk stores in Ahmedabad, Gujarat. From May 7 to May 15 midnight shop closed to implement social distancing effectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X