ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಥೂರಾಂ ಗೋಡ್ಸೆ ಜನ್ಮ ವರ್ಷಾಚರಣೆ; ಹಿಂದೂ ಮಹಾಸಭಾದ ಎಂಟು ಮಂದಿ ಬಂಧನ

|
Google Oneindia Kannada News

ಸೂರತ್ (ಗುಜರಾತ್), ಮೇ 20 : ಮಹಾತ್ಮ ಗಾಂಧಿ ಅವರ ಹಂತಕ ನಾಥೂರಾಂ ಗೋಡ್ಸೆಯ ಜನ್ಮ ವರ್ಷಾಚರಣೆ ಆಚರಿಸುತ್ತಿದ್ದ ಎಂಟು ಮಂದಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಅಖಿಲ ಹಿಂದೂ ಮಹಾಸಭಾದ ಸದಸ್ಯರು ಎನ್ನಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ. ಗಾಂಧೀಜಿ ನಾಡು ಗುಜರಾತ್ ನಲ್ಲಿ ಗೋಡ್ಸೆ ದಿನಾಚರಣೆ ಆಚರಿಸುವುದನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಸಚಿವ ಪ್ರದೀಪ್ ಸಿಂಗ್ ಜಡೇಜಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಹಾತ್ಮ ಗಾಂಧಿಯ ಹಂತಕರ ದಿನಾಚರಣೆ ಮಾಡುವಂಥ ಕೆಲಸದ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸಲು ಯಾರೇ ಯತ್ನಿಸಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ನಾಥೂರಾಂ ಗೋಡ್ಸೆ ಮೇ 19, 1910ರಲ್ಲಿ ಮಹಾರಾಷ್ಟ್ರದ ಆಗಿನ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಜನಿಸಿದವನು.

All India Hindu maha sabha 8 members arrested for celebrating Godse birth anniversary in Surat

ಸೂರತ್ ನಲ್ಲಿರುವ ಲಿಂಬಾಯತ್ ನ ಸೂರ್ಯಮುಖಿ ಹನುಮ ದೇವಾಲಯದಲ್ಲಿ ಗೋಡ್ಸೆ ಜನ್ಮ ವರ್ಷಾಚರಣೆಯಲ್ಲಿ ಹಿಂದೂ ಮಹಾಸಭಾ ಕಾರ್ಯಕರ್ತರು ಆಯೋಜಿಸಿದ್ದರು. ಆ ನಂತರ ಅವರನ್ನೆಲ್ಲ ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 153 153A 153B ಅಡಿಯಲ್ಲಿ ಬಂಧಿಸಲಾಗಿದೆ.

English summary
All India Hindu maha sabha 8 members arrested for celebrating Mahatma Gandhis murderer Nathuram Godse birth anniversary in Surat on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X