ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಮೆ ಅನಾವರಣದ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ: ಮೋದಿ

|
Google Oneindia Kannada News

ಅಹ್ಮದಾಬಾದ್, ಅಕ್ಟೋಬರ್ 31: ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಮದ್ರ ಮೋದಿಯವರು ಅನಾವರಣಗೊಳಿಸಿದರು

ಗುಜರಾತಿನ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರು ಎದ್ದು ನಿಂತಿರುವ ಈ ಭವ್ಯ ಮೂರ್ತಿ ಭಾರತದ ಏಕತೆಯ ಪ್ರತೀಕವಾಗಿದೆ.

ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್

ಹರಿದುಹಂಚಿ ಹೋಗಿದ್ದ ಭಾರತದ ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸಿ ಏಕತೆಯ ಪರಿಕಲ್ಪನೆ ನೀಡಿದ ಪಟೇಲ್ ಅವರ ಅನನ್ಯ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ಮೂರ್ತಿಯನ್ನು ಅನಾವರಣಗೊಳಿಸಲಾಗುತ್ತಿದೆ.

Ahmedabad: Statue of Unity inauguration: Live updates

'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?

ಅ.31 ರಂದು ಪಟೇಲ್ ಅವರ 143 ನೇ ಜನ್ಮದಿನದ ಸುಸಮಯದಲ್ಲಿ ಈ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ್ದು, ಈ ಅವಿಸ್ಮರಣೀಯ ಘಳಿಗೆಯ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...

Newest FirstOldest First
11:41 AM, 31 Oct

'ನಾವು ಏಕತೆಯ ಪ್ರತಿಮೆಯನ್ನು ಅನಾವರಣಗೊಳಿಸಿದ್ದನ್ನು ಕೆಲವು ರಾಜಕೀಯ ವಿರೋಧಿಗಳು ದೊಡ್ಡ ಅಪರಾಧ ಎಂಬಂತೆ ನೋಡುತ್ತಿದ್ದಾರೆ. ದೇಶದ ಮಹಾನ್ ನಾಯಕನನ್ನು ಹೀಗೆ ನೆನಪಿಸಿಕೊಳ್ಳುವುದು ಅಪರಾಧವೇ?' ನರೇಂದ್ರ ಮೋದಿ
11:11 AM, 31 Oct

ಅಂದು ಸರ್ದಾರ್ ಪಟೇಲ್ ಅಂಥ ನಿರ್ಧಾರ ತೆಗೆದುಕೊಳ್ಳದೆ ಇದ್ದಿದ್ದರೆ ಇಂದು ನಾವು ಗಿರ್ ಅರಣ್ಯಕ್ಕೆ ಹೋಗಿ ಸಿಂಹಗಳನ್ನು ನೋಡುವುದಕ್ಕೂ, ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೂ, ಹೈದರಾಬಾದಿನ ಚಾರ್ಮಿನಾರ್ ನೋಡುವುದಕ್ಕೂ ವೀಸಾ ತೆಗೆದುಕೊಳ್ಳಬೇಕಿತ್ತು- ಪ್ರಧಾನಿ ನರೇಂದ್ರ ಮೋದಿ
11:03 AM, 31 Oct

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
11:01 AM, 31 Oct

ನಾಣು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಈ ಯೋಜನೆಯ ಬಗ್ಗೆ ಯೋಚಿಸಿದ್ದೆ. ಈ ಏಕತೆಯ ಪ್ರತಿಮೆ ನಿರ್ಮಾಣಕ್ಕೆ ಬಾರತದ ಲಕ್ಷಾಂತರ ರೈತರು ಒಟ್ಟಾಗಿ ಬಂದು ಪರಿಕರಗಳನ್ನು ನೀಡಿದ್ದಾರೆ. ಇದೊಂದು ಸಾಮೂಹಿಕ ಆಂದೋಲನವಾಗಿದೆ- ನರೇಂದ್ರ ಮೋದಿ, ಪ್ರಧಾನಿ
10:55 AM, 31 Oct

ಇಂದಿನ ಕಾರ್ಯಕ್ರಮ ನಮ್ಮ ದೇಶದ ಇತಿಹಾಸದಲ್ಲೇ ಬಹಳ ಮುಖ್ಯವಾದುದು. ಇದನ್ನು ಯಾರೂ ಅಳಿಸಿಹಾಕುವುದಕ್ಕೆ ಸಾಧ್ಯವಿಲ್ಲ. ಸರ್ದಾರ್ ಸಾಹೇಬ್ ಅವರ ಪ್ರತಿಮೆಯನ್ನು ಅನಾವರಣ ಮಾಡುವ ಭಾಗ್ಯ ನನಗೆ ಲಭಿಸಿದ್ದು ನನ್ನ ಪುಣ್ಯ: ನರೇಂದ್ರ ಮೋದಿ
10:52 AM, 31 Oct

ಪ್ರತಿಮೆ ಅನಾವರಣದ ನಂತರ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ
10:51 AM, 31 Oct

ಏಕತೆಯ ಪ್ರತಿಮೆಯ ಅನಾವರಣದ ಅಮೋಘ ಘಳಿಗೆಗೆ ಸಾಕ್ಷಿಯಾದ ಸಾವಿರಾರು ಜನ
Advertisement
10:46 AM, 31 Oct

ಏಕತೆಯ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ
10:31 AM, 31 Oct

ಸ್ವಾತಂತ್ರೋತ್ತರ ಸಮಯದಲ್ಲಿ 550 ಕ್ಕೂ ಹೆಚ್ಚು ರಾಜಮನೆತನವನ್ನು ಭಾರತದ ಅಡಿಯಲ್ಲಿ ತರಲು ಶ್ರಮಿಸಿ, ಭಾರತವನ್ನು ಒಗ್ಗೂಡಿಸಿದವರು ಸರ್ದಾರ್ ಪಟೇಲ್. ನಾವು ಅವರನ್ನು ಇಂದು ನೆನಪಿಸಿಕೊಳ್ಳಬೇಕು: ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ
10:19 AM, 31 Oct

ಏಕತೆಯ ಪ್ರತಿಮೆಯ ಚಿತ್ರಗಳನ್ನು ಪ್ರಧಾನಿ ಕಚೇರಿಯ ಟ್ವಿಟ್ಟರ್ ಖಾತೆಯ ಮೂಲಕ ಪೋಸ್ಟ್ ಮಾಡಲಾಗಿದ್ದು, ಪಟೇಲರ ಅತೀ ಎತ್ತರದ ಪ್ರತಿಮೆ ಮನಸೂರೆಗೊಳ್ಳುವಂತಿದೆ.
9:46 AM, 31 Oct

ಅಹ್ಮದಾಬಾದಿನ ಕೆವಾಡಿಯಾದ ಏಕತೆಯ ಪ್ರತಿಮೆಯ ಮುಂದೆ ಸಂಭ್ರಮಾಚರಣೆ
9:43 AM, 31 Oct

ಸರ್ದಾರ್ ವಲ್ಲಭಭಾಯಿ ಅವರ ಪ್ರತಿಮೆಯನ್ನು ಎಂದೋ ನಿರ್ಮಿಸಬೇಕಿತ್ತು. ವಿಶ್ವದ ಅತೀ ಎತ್ತರದ ಪ್ರತಿಮೆ ನಿರ್ಮಿಸಿ ಅವರಿಗೆ ಈ ಸರ್ಕಾರ ಗೌರವ ನೀಡುತ್ತಿದೆ: ರಾಜ್ಯವರ್ಧನ ಸಿಂಗ್ ರಾಠೋಡ್, ಕೇಂದ್ರ ಸಚಿವ
Advertisement
9:42 AM, 31 Oct

ಏಕತೆಯ ಪ್ರತಿಮೆಯಿರುವ ಸ್ಥಳಕ್ಕೆ ಹಾಜರಾದ ಪ್ರಧಾನಿ ನರೇಂದ್ರ ಮೋದಿ. ಇಂದು 11:30 ಕ್ಕೆ ಪ್ರತಿಮೆಯನ್ನು ಉದ್ಘಾಟಿಸಲಿರುವ ಮೋದಿ.
9:41 AM, 31 Oct

ಸರ್ದಾರ್ ವಲ್ಲಭಭಾಯಿ ಪಟೇಲ್ ಒಬ್ಬ ಅದಮ್ಯ ರಾಷ್ಟ್ರವಾದಿ: ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ
9:40 AM, 31 Oct

ಒಟ್ಟು ಯೋಜನಾ ವೆಚ್ಚ 2,063 ಕೋಟಿ ರು ಗೂ ಅಧಿಕ ಎಂದು ಅಂದಿನ ಆನಂದಿ ಬೇನ್ ಅವರ ಗುಜರಾತ್ ಸರ್ಕಾರದ ಅಧಿಕೃತ ವೆಬ್ ತಾಣಗಳು ಈ ಹಿಂದೆ ಘೋಷಿಸಿತ್ತು
9:40 AM, 31 Oct

ಈ ಪ್ರತಿಮೆಗೆ 75 ಸಾವಿರ ಕ್ಯೂಬಿಕ್ ಮೀಟರ್ ಕಾಂಕ್ರಿಟ್, 5700 ಮೆಟ್ರಿಕ್ ಟನ್ ಕಬ್ಬಿಣ, 18,500 ಉಕ್ಕು, 22,500 ಕಂಚು ಸೇರಿದಂತೆ ಮತ್ತಿತರ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. 3400 ನೌಕರರು, 250 ಇಂಜಿನಿಯರ್ ಗಳು ಸಾಧು ಬೇಟ್ ದ್ವೀಪದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
9:38 AM, 31 Oct

ಪಟೇಲ್‌ರ ಈ ಬೃಹತ್ ಪ್ರತಿಮೆಯು 182 ಮೀಟರ್ (ಸುಮಾರು 597 ಅಡಿ) ಎತ್ತರವಿದೆ
9:37 AM, 31 Oct

ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿ ಪಡೆದ ಇದನ್ನು ನಿರ್ಮಿಸಿರುವ ಶಿಲ್ಪಿ ರಾಮ್ ವಾನ್ಜಿ ಸುತಾರ್
9:37 AM, 31 Oct

ಏಕತೆಯ ಪ್ರತಿಮೆ'(statue of unity) ಯನ್ನು ನಿರ್ಮಿಸುವ ಗುತ್ತಿಗೆ ಪಡೆದಿದ್ದು ಲಾರ್ಸನ್ ಅಂಡ್ ಟರ್ಬೋ (ಎಲ್ ಅಂಡ್ ಟಿ) ಕಂಪೆನಿ

English summary
Prime Minister Narendra Modi will inaugurate the Statue of Unity, the 182-metre tall statue of Iron Man Sardar Vallabh Bhai Patel, on Wednesday (October 31) at 11:30 am. October 31 is the birth anniversary of Sardar Patel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X