ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತನೊಂದಿಗೆ ನಂಟು; ಪಾಲಿಕೆ ಆಯುಕ್ತರಿಗೆ ಗೃಹ ದಿಗ್ಬಂಧನ!

|
Google Oneindia Kannada News

ಅಹ್ಮದಾಬಾದ್, ಮೇ.05: ನೊವೆಲ್ ಕೊರೊನಾ ವೈರಸ್ ಸೋಂಕಿತರ ಹಾವಳಿಗೆ ಗುಜರಾತ್ ಅಕ್ಷರಶಃ ಬೆಚ್ಚಿ ಬಿದ್ದಿದೆ. ಭಾರತದಲ್ಲೇ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಗುಜರಾತ್ ಎರಡನೇ ಸ್ಥಾನದಲ್ಲಿದೆ.

ರಾಜಧಾನಿ ಅಹ್ಮದಾಬಾದ್ ನಲ್ಲಿ ಮಂಗಳವಾರ ಒಂದೇ ದಿನ 349 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4,425ಕ್ಕೆ ಏರಿಕೆಯಾಗಿದೆ. ಈ ಸೋಂಕಿತರ ಜೊತೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆ ಅಹ್ಮದಾಬಾದ್ ಮಹಾನಗರ ಪಾಲಿಕೆ ಕಮಿಷನರ್ ವಿಜಯ್ ನೆಹ್ರಾ ದಿಗ್ಬಂಧನಕ್ಕೊಳಗಾಗಿದ್ದಾರೆ.

ತರಕಾರಿಗೆ 3 ಗಂಟೆ, ಮದ್ಯಕ್ಕೆ 7 ಗಂಟೆ ಅವಕಾಶ: ಮಹಿಳೆಯರ ಹೋರಾಟ ತರಕಾರಿಗೆ 3 ಗಂಟೆ, ಮದ್ಯಕ್ಕೆ 7 ಗಂಟೆ ಅವಕಾಶ: ಮಹಿಳೆಯರ ಹೋರಾಟ

ಗುಜರಾತ್ ನಲ್ಲಿ ಮಂಗಳವಾರ ಒಂದೇ ದಿನ 441 ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 6,245ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೂ ಮಹಾಮಾರಿಗೆ 368 ಜನರು ಪ್ರಾಣ ಬಿಟ್ಟಿದ್ದಾರೆ.

Ahmedabad Municipal Commissioner Self-Quarantines For 14 Days.

14 ದಿನ ದಿಗ್ಬಂಧನಕ್ಕೆ ತೆರಳುವ ಬಗ್ಗೆ ಟ್ವೀಟ್:

ಅಹ್ಮದಾಬಾದ್ ನಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಇಬ್ಬರು ಕೊರೊನಾ ವೈರಸ್ ಸೋಂಕಿತರ ಜೊತೆಗೆ ಅಚಾನಕ್ಕಾಗಿ ಸಂಪರ್ಕವನ್ನು ಹೊಂದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಸದ್ಯದ ಮಾರ್ಗಸೂಚಿಗಳ ಅನ್ವಯ ಸ್ವಯಂಕೃತವಾಗಿ 14 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿ ಇರುತ್ತೇನೆ. ಆದಷ್ಟು ಬೇಗನೇ ಮತ್ತೆ ಕರ್ತವ್ಯಕ್ಕೆ ಹಾಜರಾಗುವುದಾಗಿ ಮಹಾನಗರ ಪಾಲಿಕೆ ಕಮಿಷನರ್ ವಿಜಯ್ ನೆಹ್ರಾ ಟ್ವೀಟ್ ಮಾಡಿದ್ದಾರೆ. ಇನ್ನು, ಮುಂದಿನ ಎರಡು ವಾರಗಳ ಕಾಲ ಗುಜರಾತ್ ಕಡಲ ಮಂಡಳಿ ಸಿಇಓ ಆಗಿರುವ ಮುಕೇಶ್ ಕುಮಾರ್ ಮಹಾನಗರ ಪಾಲಿಕೆಯ ಇನ್ ಚಾರ್ಜ್ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

English summary
Coronavirus Effect: Ahmedabad Municipal Commissioner Self-Quarantines For 14 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X