• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೇಜಸ್ ಎಕ್ಸ್‌ಪ್ರೆಸ್; ದೇಶದ 2ನೇ ಖಾಸಗಿ ರೈಲಿಗೆ ಹಸಿರು ನಿಶಾನೆ

|
Google Oneindia Kannada News

ಅಹಮದಾಬಾದ್, ಜನವರಿ 17 : ಎರಡನೇ ಖಾಸಗಿ ರೈಲಿಗೆ ದೇಶದಲ್ಲಿ ಚಾಲನೆ ಸಿಕ್ಕಿದೆ. ಲಕ್ನೋ ಮತ್ತು ದೆಹಲಿ ನಡುವೆ ಮೊದಲ ಖಾಸಗಿ ರೈಲು ಸೇವೆ ಆರಂಭವಾಗಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಲಾಭದ ಹಳಿಯ ಮೇಲೆ ಓಡುತ್ತಿದೆ.

ಗುಜರಾತ್‌ ಮುಖ್ಯಮಂತ್ರಿ ವಿಜಯ್ ರೂಪಾನಿ ಶುಕ್ರವಾರ 2ನೇ ಖಾಸಗಿ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಅಹಮದಾಬಾದ್‌- ಮುಂಬೈ ನಡುವೆ 2ನೇ ಖಾಸಗಿ ರೈಲು ತೇಜಸ್ ಸಂಚಾರ ನಡೆಸಲಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ದೇಶದ ಮೊದಲ ಖಾಸಗಿ ರೈಲು ತೇಜಸ್‌ಗೆ ಮೊದಲ ತಿಂಗಳೇ ಲಾಭದೇಶದ ಮೊದಲ ಖಾಸಗಿ ರೈಲು ತೇಜಸ್‌ಗೆ ಮೊದಲ ತಿಂಗಳೇ ಲಾಭ

ರೈಲು ಸೇವೆಗೆ ಇಂದು ಚಾಲನೆ ಸಿಕ್ಕಿದೆ. ಜನವರಿ 19ರಿಂದ ಅಹಮದಾಬಾದ್-ಮುಂಬೈ ನಡುವೆ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಈ ರೈಲಿನ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಮಾತ್ರ ಬುಕ್ ಮಾಡಬಹುದಾಗಿದೆ.

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಡಿಪಿಆರ್‌ ಸಿದ್ಧಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಡಿಪಿಆರ್‌ ಸಿದ್ಧ

ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಪೇಟಿಎಂ, ಮೇಕ್ ಮೈ ಟ್ರಿಪ್, ಫೋನ್ ಪೇ ಸೇರಿದಂತೆ ವಿವಿಧ ಆನ್‌ಲೈನ್ ತಾಣಗಳ ಮೂಲಕವೂ ಸೀಟು ಕಾಯ್ದಿರಿಸಬಹುದಾಗಿದೆ.

ಫೆಬ್ರವರಿಯಲ್ಲಿ ಬೆಳಗಾವಿ-ಪುಣೆ ರೈಲು ಸಂಚಾರ ಆರಂಭಫೆಬ್ರವರಿಯಲ್ಲಿ ಬೆಳಗಾವಿ-ಪುಣೆ ರೈಲು ಸಂಚಾರ ಆರಂಭ

ವಾರದಲ್ಲಿ ಆರು ದಿನ ಸಂಚಾರ

ವಾರದಲ್ಲಿ ಆರು ದಿನ ಸಂಚಾರ

ಜನವರಿ 19ರಿಂದ ಅಹಮದಾಬಾದ್-ಮುಂಬೈ ನಡುವೆ ತೇಜಸ್ ರೈಲಿನ ಸಂಚಾರ ಆರಂಭವಾಗಲಿದೆ. ರೈಲು ಸಂಖ್ಯೆ 82902/82901 ರೈಲುಗಳು ವಾರದ ಆರು ದಿನಗಳ ಕಾಲ ಸಂಚಾರ ನಡೆಸಲಿವೆ. ಗುರುವಾರ ರೈಲು ಸಂಚಾರ ಇರುವುದಿಲ್ಲ.

ಹವಾನಿಯಂತ್ರಿತ ಬೋಗಿ

ಹವಾನಿಯಂತ್ರಿತ ಬೋಗಿ

ಅಹಮದಾಬಾದ್-ಮುಂಬೈ ನಡುವೆ ಸಂಚಾರ ನಡೆಸುವ ರೈಲಿನ ಎಲ್ಲಾ ಬೋಗಿಗಳು ಸಂಪೂರ್ಣ ಹವಾನಿಯಂತ್ರಿತವಾಗಿವೆ. 2 ಎಕ್ಸಿಕ್ಯುಟೀವ್ ಕ್ಲಾಸ್‌ಗಳಿದ್ದು ಪ್ರತಿಯೊಂದು 56 ಸೀಟುಗಳನ್ನು ಹೊಂದಿದೆ. 78 ಸೀಟುಗಳನ್ನು ಹೊಂದಿರುವ 8 ಬೋಗಿಗಳನ್ನು ರೈಲು ಹೊಂದಿರಲಿದೆ.

ತೇಜಸ್ ರೈಲಿನ ವೇಳಾಪಟ್ಟಿ

ತೇಜಸ್ ರೈಲಿನ ವೇಳಾಪಟ್ಟಿ

736 ಪ್ರಯಾಣಿಕರು ಅಹಮದಾಬಾದ್-ಮುಂಬೈ ನಡುವಿನ ತೇಜಸ್ ರೈಲಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ಅಹಮದಾಬಾದ್‌ನಿಂದ 6.40ಕ್ಕೆ ಹೊರಡುವ ರೈಲು ಮುಂಬೈ ಸೆಂಟ್ರಲ್ ನಿಲ್ದಾಣವನ್ನು 13.10ಕ್ಕೆ ತಲುಪಲಿದೆ. ಮುಂಬೈನಿಂದ 15.40ಕ್ಕೆ ಹೊರಡುವ ರೈಲು ಅಹಮದಾಬಾದ್‌ಗೆ 21.55ಕ್ಕೆ ತಲುಪಲಿದೆ.

ರಿಯಾಯಿತಿ ಇಲ್ಲ

ರಿಯಾಯಿತಿ ಇಲ್ಲ

ತೇಜಸ್ ರೈಲಿನ ದರದಲ್ಲಿ ಯಾವುದೇ ರಿಯಾಯಿತಿ ಇಲ್ಲ. 5ಕ್ಕಿಂತ ಕಡಿಮೆ ವರ್ಷದ ಮಕ್ಕಳ ಸೀಟನ್ನು ಪೋಷಕರ ಜೊತೆಯೇ ಬುಕ್ ಮಾಡಲಾಗುತ್ತದೆ. 5 ವರ್ಷಕ್ಕಿಂತ ಹೆಚ್ಚಿನ ಮಕ್ಕಳಿಗೆ ದರವನ್ನು ವಿಧಿಸಲಾಗುತ್ತದೆ ಮತ್ತು ಚಾರ್ಟ್‌ನಲ್ಲಿ ಅವರ ಹೆಸರು ತೋರಿಸುತ್ತದೆ.

English summary
Ahmedabad-Mumbai Tejas Express the second train to be run by railway subsidiary IRCTC flagged off on January 17, 2020. The commercial run of the train will start from January 19 from Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X