ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಭೇಟಿ: ವಿಮಾನ ನಿಲ್ದಾಣ ಮಾರ್ಗದ ಪಾನ್ ಶಾಪ್ ಬಂದ್

|
Google Oneindia Kannada News

ಅಹಮದಾಬಾದ್, ಫೆಬ್ರವರಿ 18: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಣ್ಣಿಗೆ ಸ್ಲಂಗಳು ಕಾಣದಂತೆ ಅಹಮದಾಬಾದ್ ನಗರಸಭೆ ಗೋಡೆಯನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತಿರಬಹುದು. ಈಗ ಗೋಡೆಗಳ ಸೌಂದರ್ಯ ಕಾಪಾಡಲು ವಿಮಾನ ನಿಲ್ದಾಣ ಮಾರ್ಗದಲ್ಲಿದ್ದ ಪಾನ್ ಶಾಪ್ ಗಳನ್ನು ಬಂದ್ ಮಾಡಲು ಅಹಮದಾಬಾದ್ ನಗರಸಭೆ ಮುಂದಾಗಿದೆ.

ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ-ಇಂದಿರಾ ಬ್ರಿಡ್ಜ್ ತನಕ ಸಾಗುವ ಮಾರ್ಗದಲ್ಲಿ ಗೋಡೆ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಪಾನ್ ಅಂಗಡಿ ಇದ್ದರೆ, ಸ್ವಚ್ಛತೆ ಕಾಪಾಡಲು ಕಷ್ಟ ಎಂಬ ಕಾರಣದಿಂದ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಆದೇಶ ಉಲ್ಲಂಘಿಸಿ ಅಂಗಡಿ ಬಾಗಿಲು ತೆರೆದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪಾಲಿಕೆ ಹೇಳಿದೆ.

ಟ್ರಂಪ್ ಖುಷಿಪಡಿಸಲು ಬೈಕಿನ ಸುಂಕ ತಗ್ಗಿಸಲು ಮುಂದಾದ ಮೋದಿ? ಟ್ರಂಪ್ ಖುಷಿಪಡಿಸಲು ಬೈಕಿನ ಸುಂಕ ತಗ್ಗಿಸಲು ಮುಂದಾದ ಮೋದಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್‌ಗೆ ಅವರು ಭೇಟಿ ನೀಡಲಿದ್ದು, ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ಭಾಷಣ ಮಾಡಲಿದ್ದಾರೆ.

Ahead of Donald Trump’s Ahmedabad Visit Paan Shops Sealed

ರೋಡ್ ಶೋ ವೇಳೆ ಸ್ಲಂ ಕಾಣದಂತೆ ಸುಮಾರು ಅರ್ಧ ಕಿಲೋಮೀಟರ್ ಉದ್ದದ ಗೋಡೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಗಾಂಧಿನಗರ ಮತ್ತು ಅಹಮದಾಬಾದ್ ನಡುವಿನ ಮಾರ್ಗವನ್ನು ಸುಂದರಗೊಳಿಸಲು ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ದೇವ್ ಸರನ್ ಎಂದು ಕರೆಯಲಾಗುವ ಸ್ಲಂನಲ್ಲಿ ಸುಮಾರು 500 ಮನೆಗಳಿದ್ದು, 2500 ಜನರು ದಶಕಗಳಿಂದ ವಾಸವಾಗಿದ್ದಾರೆ.

English summary
After a wall that is being built in the Ahmedabad city to keep a slum cluster out of sight of the US president, now health department of the Ahmedabad Municipal Corporation has sealed three paan shops at the airport circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X