ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್ ಪತ್ತೆ ಪ್ರಕರಣ: ಈ ರಾಷ್ಟ್ರಗಳ ಸರಕು ಸಾಗಣೆ ನಿಷೇಧಿಸಿದ ಅದಾನಿ ಬಂದರು

|
Google Oneindia Kannada News

ಅಹಮದಾಬಾದ್, ಅಕ್ಟೋಬರ್ 12: ದೇಶದ ಅತಿದೊಡ್ಡ ಸರಕು ಸಾಗಾಣಿಕೆಗಳಲ್ಲಿ ಒಂದಾದ ಗುಜರಾತ್‌ನ ಅದಾನಿ ಬಂದರು, ಮುಂದಿನ ತಿಂಗಳಿನಿಂದ ಇರಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ರಾಷ್ಟ್ರಗಳ ಯಾವುದೇ ಕಂಟೇನರ್ ಸರಕುಗಳನ್ನು ಸಾಗಿಸುವುದಿಲ್ಲ ಎಂದು ಘೋಷಿಸಿದೆ.

ಗುಜರಾತಿನ ಕಚ್ ಪ್ರದೇಶದ ಮುಂದ್ರಾ ಬಂದರಿನಲ್ಲಿ ಕಳೆದ ತಿಂಗಳು ಬರೋಬ್ಬರಿ 3 ಸಾವಿರ ಕೆ.ಜಿ. ಹೆರಾಯಿನ್ ಡ್ರಗ್‌ಗಳು ಪತ್ತೆಯಾಗಿದ್ದು, ಈ ಹಿನ್ನೆಲೆ ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರತ್ ತ್ರಿಪಾಠಿ, "ಅದಾನಿ ಬಂದರಿಗೆ ಸಂಬಂಧಿಸಿದ ಕಾರ್ಗೋ ಶಿಪ್‌ಗಳು ನ.15ರಿಂದ ಇರಾನ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಿಂದ ಯಾವುದೇ ಕಂಟೇನರ್‌ಗಳನ್ನು ಸಾಗಿಸುವುದಿಲ್ಲ. ಈ ನಿಯಮ ಅದಾನಿ ವಲಯಕ್ಕೆ ಸೇರಿದ ಎಲ್ಲಾ ಟರ್ಮಿನಲ್‌ಗಳಿಗೂ ಅನ್ವಯವಾಗಲಿದೆ," ಎಂದಿದ್ದಾರೆ.

Adani Ports Will Not Handle Cargo From Iran, Afghanistan And Pakistan Starting November 15

2020ರಲ್ಲಿ ವಹಿವಾಟು ಹೇಗಿತ್ತು?
ಇರಾನ್‌ನಿಂದ ಭಾರತದ ಪ್ರಮುಖ ವಾಣಿಜ್ಯ ಸರಕುಗಳ ಅತಿದೊಡ್ಡ ಹ್ಯಾಂಡ್ಲರ್‌ಗಳಲ್ಲಿ ಒಂದಾಗಿದ್ದು, ಅವುಗಳಲ್ಲಿ ಪಿಸ್ತಾ, ಖರ್ಜೂರ, ಬಾದಾಮಿ ಮತ್ತು ರಾಸಾಯನಿಕಗಳು. 2020ರಲ್ಲಿ ಇರಾನ್‌ನಿಂದ ಭಾರತದ ಒಟ್ಟು 1,397 ಮಿಲಿಯನ್ ಡಾಲರ್ ನಷ್ಟು ಆಮದು ಮಾಡಿಕೊಳ್ಳಲಾಗಿದೆ.

ಅಫ್ಘಾನಿಸ್ತಾನದಲ್ಲಿ ಭಾರತೀಯ ಕಂಪನಿಗಳು ಅಂಜೂರ, ಖರ್ಜೂರ, ಕಲ್ಲಂಗಡಿ ಬೀಜಗಳು ಮತ್ತು ಒಣದ್ರಾಕ್ಷಿಗಳನ್ನು ಆಮದು ಮಾಡಿಕೊಳ್ಳುವ ಮೂಲಕ 2020ರಲ್ಲಿ ಅಫ್ಘಾನಿಸ್ತಾನದಿಂದ ಭಾರತ ಒಟ್ಟು 435 ಮಿಲಿಯನ್ ಡಾಲರ್‌ನಷ್ಟು ಆಮದು ಮಾಡಿಕೊಂಡಿದೆ.

ಪಾಕಿಸ್ತಾನದಿಂದ ಕಲ್ಲುಪ್ಪು, ಖರ್ಜೂಗಳನ್ನು ಪಡೆಯುತ್ತಿದ್ದು, ಭಾರತ ಕೇವಲ 14 ಮಿಲಿಯನ್ ಡಾಲರ್ ಮಾತ್ರ ಆಮದು ಮಾಡಿಕೊಂಡಿದೆ. ಇರಾನ್‌ಗೆ ಭಾರತ ಸುಮಾರು 3,374 ಮಿಲಿಯನ್ ಡಾಲರ್‌ನಷ್ಟು ರಫ್ತು ಮಾಡಿದ್ದು, ಇದರಲ್ಲಿ ಕೃಷಿ ಉತ್ಪನ್ನಗಳಾದ ಸಿರಿಧಾನ್ಯಗಳು, ಚಹಾ, ಕಾಫಿ ಮತ್ತು ಮಸಾಲೆಗಳು ಮತ್ತು ಸಾವಯವ ರಾಸಾಯನಿಕಗಳು, ತೈಲ ಮತ್ತು ಇತರ ರಾಸಾಯನಿಕಗಳನ್ನು ಕಳುಹಿಸಲಾಗಿದೆ.

English summary
After Rs 20,000-Crore Gujarat Drug Haul, Adani Ports will not handle cargo from Iran, Afghanistan and Pakistan starting November 15. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X