ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ, ರೂಪದರ್ಶಿ ಪಾಯಲ್ ಪಟೇಲ್- ಅತಿ ಕಿರಿಯ ಕಾರ್ಪೊರೇಟರ್

|
Google Oneindia Kannada News

ಸೂರತ್, ಫೆಬ್ರವರಿ 24: ಗುಜರಾತಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಮೂಲಕ ಅಮೋಘ ಪದಾರ್ಪಣೆ ಮಾಡಿ, ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ಶಕ್ತಿಯಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷ ಹೊರಹೊಮ್ಮಿದೆ ಎಂದು ಪಕ್ಷದ ವಕ್ತಾರರು ಸಾಧನೆಯ ಸಂಭ್ರಮದಲ್ಲಿ ಹೇಳಿದ್ದಾರೆ.

ಈ ನಡುವೆ ಸೂರತ್ ಮುನ್ಸಿಪಾಲ್ ಕಾರ್ಪೊರೇಷನ್(ಎಸ್ ಎಂಸಿ) ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ನಟಿ ಕಮ್ ರೂಪದರ್ಶಿ ಪಾಯಲ್ ಪಟೇಲ್ ಅವರು ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಸೂರತ್ 16ನೇ ವಾರ್ಡಿನ ಕಾರ್ಪೊರೇಟರ್ ಆಗಿ ಹೊರ ಹೊಮ್ಮಿದ್ದಾರೆ. 22 ವರ್ಷ ವಯಸ್ಸಿನ ಪಾಯಲ್ ಅವರು ಅತಿ ಕಿರಿಯ ಕಾರ್ಪೊರೇಟರ್ ಎಂದೆನಿಸಿದ್ದಾರೆ.

ಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿ

ಅಮ್ರೇಲಿಯಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಪಾಯಲ್ ಅವರು ವಾರ್ಡ್ 16 ಪೂರ್ಣ(ಪಶ್ಚಿಮ) ಕ್ಷೇತ್ರದಲ್ಲಿ ಬಿಜೆಪಿ ಪ್ರತಿಸ್ಪರ್ಧಿಯನ್ನು 12,000ಕ್ಕೂ ಅಧಿಕ ಅಂತರದಿಂದ ಸೋಲಿಸಿದ್ದಾರೆ.

AAPs Payal Patel becomes youngest corporator of Surat in Gujarat

"ಜನ ಸೇವೆ ಮಾಡಬೇಕು ಎಂದು ಎಎಪಿ ಮೂಲಕ ಸ್ಪರ್ಧೆಗಿಳಿದೆ. ಗೆಲುವು ಲಭಿಸಿರುವುದು ಜನರು ಮಾಡಿರುವ ಆಶೀರ್ವಾದ, ಆದರೆ, ಹಾಲಿ ಕಾರ್ಪೊರೇಟರ್ ಎದುರು ಭಾರಿ ಅಂತರದ ಗೆಲುವು ಖಂಡಿತಾ ನಿರೀಕ್ಷಿಸಿರಲಿಲ್ಲ'' ಎಂದು ಗೆಲುವಿನ ಸಂಭ್ರಮದಲ್ಲಿ ಪಾಯಲ್ ಪ್ರತಿಕ್ರಿಯಿಸಿದ್ದಾರೆ.

ತಾರಿ ಮಾರಿ ದೋಸ್ತಿ ಎಂಬ ಚಿತ್ರದಲ್ಲಿ ನಟಿಸಿರುವ ಪಾಯಲ್ ಅವರು 50ಕ್ಕೂ ಅಧಿಕ ವಿಡಿಯೋ ಸಾಂಗ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಗುಜರಾತ್ ಅಲ್ಲದೆ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ಮಾತನಾಡಿ, ದೆಹಲಿ, ಪಂಜಾಬಿಗೆ ಮಾತ್ರ ಸೀಮಿತವಾಗಿದ್ದ ನಮ್ಮ ಪಕ್ಷ, ಇಂದು ಹರಿಯಾಣ, ಜಾರ್ಕಂಡ್, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗೋವಾ, ಈಗ ಗುಜರಾತ್ ಮುಂದೆ ಕರ್ನಾಟಕ ಅಲ್ಲದೇ ಇಡೀ ದೇಶದ ಚುಕ್ಕಾಣಿ ಹಿಡಿಯುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.

English summary
The 22-year-old model and actor by profession, Payal Patel on Tuesday registered an emphatic win in the Surat Municipal Corporation (SMC) elections. It can be seen that the Aam Aadmi Party (AAP) leader has now become the youngest corporator of Ward 16 in Surat, Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X