ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್: ಕೇಜ್ರಿವಾಲ್ ಭರವಸೆ

|
Google Oneindia Kannada News

ಡಿಸೆಂಬರ್‌ನಲ್ಲಿ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್‌ನಲ್ಲಿ ಅಧಿಕಾರ ಹಿಡಿಯಲು ಆಮ್ ಆದ್ಮಿ ಪಕ್ಷ (ಎಎಪಿ) ಸಾಕಷ್ಟು ಕಸರತ್ತು ನಡೆಸುತ್ತಿದೆ. ದೆಹಲಿಯಲ್ಲಿ ಭದ್ರವಾಗಿರುವ ಆಪ್ ನಂತರ ಪಂಜಾಬ್‌ನಲ್ಲಿ ಅಧಿಕಾರ ಹಿಡಿದಿದೆ, ಇನ್ನು ಮಧ್ಯಪ್ರದೇಶದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಸಿಂಗ್ರೌಲಿ ಮೇಯರ್ ಸ್ಥಾನವನ್ನು ಗೆದ್ದುಕೊಂಡಿದೆ. ಇದು ಆಪ್ ಉತ್ಸಾವನ್ನು ಇಮ್ಮಡಿಗೊಳಿಸಿದ್ದು, ಗುಜರಾತ್ ರಾಜ್ಯದ ಮತದಾರರಿಗೆ ಆಪ್ ಬಂಪರ್ ಆಫರ್ ನೀಡಿದೆ.

ಗುಜರಾತ್‌ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ ತಿಂಗಳಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವುದಲ್ಲದೆ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡುವುದಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್ ಘೋಷಿಸಿದ್ದಾರೆ. ಸೂರತ್‌ನಲ್ಲಿ ನಡೆದ ಟೌನ್‌ಹಾಲ್‌ ಸಭೆಯೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಗುಜರಾತ್‌ ಜನತೆಗೆ ಈ ಆಫರ್ ನೀಡಿದ್ದಾರೆ.

ದ್ರೌಪದಿಗೆ ಗೌರವ, ಸಿನ್ಹಾಗೆ ಬೆಂಬಲ- ಎಎಪಿ ಬ್ಯಾಲೆನ್ಸ್ ರಾಜಕಾರಣದ್ರೌಪದಿಗೆ ಗೌರವ, ಸಿನ್ಹಾಗೆ ಬೆಂಬಲ- ಎಎಪಿ ಬ್ಯಾಲೆನ್ಸ್ ರಾಜಕಾರಣ

"ನಾನು ನಿಮಗೆ ಗ್ಯಾರಂಟಿ ನೀಡುತ್ತಿದ್ದೇನೆ, ಮಾತಿಗೆ ತಪ್ಪಿದರೆ ಮುಂದಿನ ಚುನಾವಣೆಯಲ್ಲಿ ಎಎಪಿಗೆ ನೀವು ಮತ ನೀಡಬೇಡಿ. ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಚುನಾವಣೆ ವೇಳೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

 ವಿದ್ಯುತ್ ಬಿಲ್ ಕೂಡ ಮನ್ನಾ!

ವಿದ್ಯುತ್ ಬಿಲ್ ಕೂಡ ಮನ್ನಾ!

ಉಚಿತ ವಿದ್ಯುತ್ ನೀಡುವುದು ಮಾತ್ರವಲ್ಲದೆ, ಡಿಸೆಂಬರ್ 31, 2021 ರ ಮೊದಲು ಎಲ್ಲಾ ಬಾಕಿ ಇರುವ ವಿದ್ಯುತ್ ಬಿಲ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು. ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದರೆ ಏನೆಲ್ಲಾ ಕೊಡುಗೆ ನೀಡಲಿದೆ ಎನ್ನುವುದನ್ನು ಮುಂಬರುವ ವಾರಗಳಲ್ಲಿ ರಾಜ್ಯದ ನಾಗರಿಕರೊಂದಿಗೆ ತನ್ನ ಕಾರ್ಯಸೂಚಿಯಲ್ಲಿ ಹಂಚಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

"ದೆಹಲಿ ಮಾದರಿ"ಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿದರೆ ಗುಜರಾತ್‌ಗೆ ಉಚಿತ ವಿದ್ಯುತ್ ಸಿಗಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಮತದಾನ ನಡೆಯಲಿರುವ ಗುಜರಾತ್‌ನಲ್ಲಿ ಉಚಿತ ವಿದ್ಯುತ್ ಪ್ರಮುಖ ಚುನಾವಣಾ ವಿಷಯವಾಗುವ ಸಾಧ್ಯತೆ ಇದೆ.

 ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ ಡೆನ್ಮಾರ್ಕ್ ಭೇಟಿಗೂ ಸಿಕ್ಕಿಲ್ಲ ಅನುಮತಿ, ಈಗ ಸಿಂಗಾಪುರ ಭೇಟಿಗೂ ಭಾಗ್ಯವಿಲ್ಲ; ಯಾಕೆ? ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ ಡೆನ್ಮಾರ್ಕ್ ಭೇಟಿಗೂ ಸಿಕ್ಕಿಲ್ಲ ಅನುಮತಿ, ಈಗ ಸಿಂಗಾಪುರ ಭೇಟಿಗೂ ಭಾಗ್ಯವಿಲ್ಲ; ಯಾಕೆ?

 ಬಿಜೆಪಿ ಆಡಳಿತದಿಂದ ಜನ ಬೇಸತ್ತಿದ್ದಾರೆ

ಬಿಜೆಪಿ ಆಡಳಿತದಿಂದ ಜನ ಬೇಸತ್ತಿದ್ದಾರೆ

"ಇತ್ತೀಚೆಗೆ ನಾನು ಗುಜರಾತ್‌ಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ ಮತ್ತು ರಾಜ್ಯದ ಜನರು ಸಾಕಷ್ಟು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಗುಜರಾತ್‌ನ ಜನರು 27 ವರ್ಷಗಳ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ ಈಗ ಬದಲಾವಣೆಯನ್ನು ಬಯಸಿದ್ದಾರೆ" ಎಂದು ಸೂರತ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಕೇಜ್ರಿವಾಲ್ ಹೇಳಿದರು.

"ನಾವು ಸಾರ್ವಜನಿಕರ ಜೊತೆ ಅವರಿಗೆ ಏನು ಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡುತ್ತೇವೆ, ನಮ್ಮ ಅಜೆಂಡಾ ಏನು ಎನ್ನುವುದರ ಕುರಿತು ಮುಂದಿನ ಕೆಲವು ವಾರಗಳಲ್ಲಿ ಜನತೆಯ ಮುಂದೆ ಇಡುತ್ತೇವೆ" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

 ಉಚಿತ ಕೊಡುಗೆಗಳನ್ನು ಖಂಡಿಸಿದ ಬಿಜೆಪಿ

ಉಚಿತ ಕೊಡುಗೆಗಳನ್ನು ಖಂಡಿಸಿದ ಬಿಜೆಪಿ

ಕೇಜ್ರಿವಾಲ್ ರಾಜ್ಯಕ್ಕೆ ಭೇಟಿ ನೀಡುವ ಮುನ್ನ, ಬಿಜೆಪಿ ಗುಜರಾತ್ ಘಟಕದ ಮುಖ್ಯಸ್ಥ ಸಿ.ಆರ್. ಪಾಟೀಲ್ ಅವರು ಉಚಿತ ಕೊಡುಗೆಗೆಳ "ರೇವಡಿ ಸಂಸ್ಕೃತಿ" ಯಿಂದ ಜನರು ದಾರಿ ತಪ್ಪಬಾರದು ಎಂದು ಎಚ್ಚರಿಕೆ ನೀಡಿದ್ದರು. ಉಚಿತ ಕೊಡುಗೆಗಳು ಅಂತಿಮವಾಗಿ ರಾಜ್ಯ ಮತ್ತು ಭಾರತವನ್ನು ಆರ್ಥಿಕ ಬಿಕ್ಕಟ್ಟಿನ ಪೀಡಿತ ಶ್ರೀಲಂಕಾ ದೇಶದಂತೆ ಮಾಡಬಹುದು ಎಂದು ಹೇಳಿದ್ದರು.
ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಎಪಿ ಮುಖ್ಯಸ್ಥ ಕೇಜ್ರಿವಾಲ್, "ಕೆಲವರು 'ರೇವಡಿ' (ಸಿಹಿ) ಬಗ್ಗೆ ಮಾತನಾಡುತ್ತಿದ್ದಾರೆ, 'ರೇವಡಿ'ಯನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದಾಗ ಅದನ್ನು 'ಪ್ರಸಾದ' (ಭಕ್ತಿಯ ಅರ್ಪಣೆ) ಎಂದು ಕರೆಯಲಾಗುತ್ತದೆ. ಆದರೆ ಅದನ್ನು ನಿಮ್ಮ ಸ್ವಂತ ಸ್ನೇಹಿತರಿಗೆ, ಮಂತ್ರಿಗಳಿಗೆ ಉಚಿತವಾಗಿ ನೀಡಿದಾಗ, ಆಗ ಅದು 'ಪಾಪ'" ಎಂದು ಬಿಜೆಪಿಗೆ ತಿರುಗೇಟು ನೀಡಿದರು.
'ರೇವಡಿ' ಉತ್ತರ ಭಾರತದಲ್ಲಿ ಹಬ್ಬಗಳ ಸಂದರ್ಭದಲ್ಲಿ ವಿಶೇಷವಾಗಿ ವಿತರಿಸುವ ಜನಪ್ರಿಯ ಸಿಹಿಯಾಗಿದೆ.

 ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕುತ್ತಿದ್ದೇವೆ

ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕುತ್ತಿದ್ದೇವೆ

ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ, ಉಚಿತ ಕೊಡುಗೆಗಳನ್ನು "ರೇವಡಿ ಸಂಸ್ಕೃತಿ" ಎಂದು ಕರೆದು, ಅದರ ವಿರುದ್ಧ ಜನರಿಗೆ, ವಿಶೇಷವಾಗಿ ಯುವಕರಿಗೆ ಎಚ್ಚರಿಕೆ ನೀಡಿದ್ದರು ಮತ್ತು ಉಚಿತ ಕೊಡುಗೆಗಳ ಅಡಿಯಲ್ಲಿ ಉಚಿತ ಭರವಸೆಗಳ ಮೂಲಕ ಮತಗಳನ್ನು ಕೇಳುವುದು ದೇಶದ ಅಭಿವೃದ್ಧಿಗೆ "ಅತ್ಯಂತ ಅಪಾಯಕಾರಿ" ಎಂದು ಹೇಳಿದರು.

ಇದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದ್ದ ಆಪ್ ಮುಖ್ಯಸ್ಥ ಕೇಜ್ರಿವಾಲ್, "ತಮ್ಮ ಸರ್ಕಾರ ಉಚಿತ ಕೊಡುಗೆಗಳನ್ನು ನೀಡುತ್ತಿಲ್ಲ. ಆದರೆ ಉಚಿತ ಶಿಕ್ಷಣ, ವಿದ್ಯುತ್, ಆರೋಗ್ಯವನ್ನು ಒದಗಿಸುವ ಮೂಲಕ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕುತ್ತಿದ್ದೇವೆ ಎಂದು" ಹೇಳಿದ್ದರು. ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವುದು ರೇವಡಿ ಸಂಸ್ಕೃತಿಯಲ್ಲ, ಆದರೆ ಸ್ನೇಹಿತರ ಸಾಲವನ್ನು ಮನ್ನಾ ಮಾಡುವುದು ರೇವಡಿ ಸಂಸ್ಕೃತಿ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು.

Recommended Video

ಮಿನಿ IPL ಸ್ಟಾರ್ಟ್: ಎಲ್ಲಿ ನಡೆಯುತ್ತೆ? ಇದರ ವಿಶೇಷತೆ ಏನು ಗೊತ್ತಾ? | *Cricket | OneIndia Kannada

English summary
The Aam Admi Party National convener Arvind Kejriwal Promised Gujarat People, If AAP won the election in Gujarat this year, free electricity up to 300 units per month would be provided and declared that all outstanding electricity bills from before December 31, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X