ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌: 'ಕೈ'ಯಿಂದ ಸಿಗದ ನೋಟು, ಕಮಲಕ್ಕೆ ಶಾಸಕರ ಓಟು

|
Google Oneindia Kannada News

ಅಹಮದಾಬಾದ್ ಆಗಸ್ಟ್ 16: ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ದೊಡ್ಡ ಹೊಡೆತ ಅನುಭವಿಸುತ್ತಿದೆ. ಗುಜರಾತ್‌ನಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಹಣದ ಕೊರತೆಯನ್ನು ಎದುರಿಸುತ್ತಿದ್ದು ಹೀಗಾಗಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ದೊಡ್ಡ ಕ್ಷೀಣತೆಯನ್ನು ಎದುರಿಸುತ್ತಿದೆ. ಶೀಘ್ರದಲ್ಲೇ ಆರು ಶಾಸಕರು ಕಾಂಗ್ರೆಸ್ ಹಡಗನ್ನು ಜಿಗಿಯಬಹುದು ಎನ್ನಲಾಗುತ್ತಿದೆ.

ಪಕ್ಷ ತೊರೆಯಲು ನಿರ್ಧರಿಸಿರುವ ಈ ಶಾಸಕರು ಚುನಾವಣೆಗೆ ಗಂಭೀರ ಹಣಕಾಸಿನ ನೆರವು ಕೋರಿದ್ದಾರೆ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಮಾಜಿ ಅಧ್ಯಕ್ಷರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ ಸದ್ಯ ಅವರ ಬೇಡಿಕೆಯನ್ನು ಈಡೇರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಹೀಗಾಗಿ ಅವರು ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದಿದ್ದಾರೆ. ಅತೃಪ್ತ ಶಾಸಕರು ಈಗಾಗಲೇ ಬಿಜೆಪಿ ಸೇರುವ ಯೋಜನೆ ಮಾಡಿದ್ದು ಶೀಘ್ರದಲ್ಲೇ ಅವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ

ಬಿಜೆಪಿಯತ್ತ ಕಾಂಗ್ರೆಸ್ ಶಾಸಕರ ಓಟು

ಬಿಜೆಪಿಯತ್ತ ಕಾಂಗ್ರೆಸ್ ಶಾಸಕರ ಓಟು

ಭವೇಶ್ ಕಟಾರ, ಚಿರಾಗ್ ಕಲ್ಗಾರಿಯಾ, ಲಲಿತ್ ವಸೋಯಾ, ಸಂಜಯ್ ಸೋಲಂಕಿ, ಮಹೇಶ್ ಪಟೇಲ್ ಮತ್ತು ಹರ್ಷದ್ ರಿಬಾಡಿಯಾ ಅವರು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಅವರನ್ನು ಭೇಟಿ ಮಾಡಿದ್ದು, ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆರರಲ್ಲಿ ನಾಲ್ವರು ಪಾಟಿದಾರ್ ಆಗಿದ್ದು, ಕಾಂಗ್ರೆಸ್ ಪಕ್ಷವನ್ನು ತೊರೆದು ಹೋಗುವುದು ಗಮನಾರ್ಹವಾಗಿದೆ.

ಹಾರ್ದಿಕ್ ಪಟೇಲ್ ಅವರ ಮಾಜಿ ಆಪ್ತ ಸಹಾಯಕರಾದ ಲಲಿತ್ ವಸೋಯಾ ಅವರು ಪಾಟಿದಾರ್ ಆಂದೋಲನದಿಂದ ಬೆಳಕಿಗೆ ಬಂದರು ಮತ್ತು ಕಾಂಗ್ರೆಸ್‌ನ ಅತ್ಯಂತ ದನಿ ಮತ್ತು ಆಕ್ರಮಣಕಾರಿ ಶಾಸಕರಲ್ಲಿ ಒಬ್ಬರಾಗಿದ್ದರು. ಜೊತೆಗೆ ಇವರು ಸೌರಾಷ್ಟ್ರದಾದ್ಯಂತ ತಳಮಟ್ಟದ ಬೆಂಬಲವನ್ನು ಹೊಂದಿದ್ದಾರೆ.

ಕಾಸಿದ್ದವನೇ ಬಾಸು ಎಂದ- ಕಾಂಗ್ರೆಸ್ ಶಾಸಕರು

ಕಾಸಿದ್ದವನೇ ಬಾಸು ಎಂದ- ಕಾಂಗ್ರೆಸ್ ಶಾಸಕರು

ಹಣದ ಕೊರತೆಯು ವಿವಿಧ ಹಂತಗಳಲ್ಲಿ ಪಕ್ಷಕ್ಕೆ ತೀವ್ರ ಹೊಡೆತ ನೀಡುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ''50,000 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ, ಚುನಾವಣಾ ಪ್ರಕ್ರಿಯೆಯ ಮೇಲೆ ಕಣ್ಣಿಡಲು ನಾವು ಮತದಾನದ ದಿನದಂದು ತಲಾ 5,000 ರೂಪಾಯಿಗಳೊಂದಿಗೆ ಒಬ್ಬ ಏಜೆಂಟರನ್ನು ಹಾಕಿದರೆ, ಅವರಲ್ಲಿ ಅನೇಕರು ನಮ್ಮ ಪ್ರತಿಸ್ಪರ್ಧಿಗಳಿಂದ 10,000 ರೂಪಾಯಿಗಳನ್ನು ಪಡೆದು ನಮಗೆ ವಂಚಿಸುತ್ತಿದ್ದಾರೆ" ಎಂದು ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು. "ಇದು ಸಂಭವಿಸದಂತೆ ಮಾಡಲು ನಮ್ಮ ಬಳಿ ಹಣವಿಲ್ಲ" ಎಂದು ಅವರು ಹೇಳಿದರು. ಇದರಿಂದ ಮುಂದಿನ ಚುನಾವಣೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಬಿಗ್ ಪ್ಲ್ಯಾನ್

ಬಿಜೆಪಿ ಬಿಗ್ ಪ್ಲ್ಯಾನ್

ಗುಜರಾತ್ ರಾಜ್ಯ ಬಿಜೆಪಿಯ ಭದ್ರಕೋಟೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತವರು ರಾಜ್ಯ. ನರೇಂದ್ರ ಮೋದಿ ಗುಜರಾತ್ ಚುನಾವಣೆ ತಯಾರಿ ನಡೆಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ, ಆದರೆ ಈ ಬಾರಿ 2017 ರಂತೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಜೆಪಿ ಸಿದ್ಧವಿಲ್ಲ. 2017ರ ವಿಧಾನಸಭೆ ಚುನಾವಣೆಯ ಕೊನೆಯ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದ ಜವಾಬ್ದಾರಿಯನ್ನು ವಹಿಸದೇ ಇದ್ದಿದ್ದರೆ ಬಿಜೆಪಿ ಮತ್ತೆ ಅಲ್ಲಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಬಾರಿ 2017ರ ರೀತಿ ರಿಸ್ಕ್ ತೆಗೆದುಕೊಳ್ಳಲು ಬಿಜೆಪಿ ಹೈಕಮಾಂಡ್ ಸಿದ್ಧವಿಲ್ಲ ಮತ್ತು ಚುನಾವಣೆಗೆ ಹಲವು ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಹೈಕಮಾಂಡ್ ಈ ಕೆಲಸ ಆರಂಭಿಸಿದೆ. ಮತ್ತೆ ಚುನಾವಣೆಯನ್ನು ಭರ್ಜರಿಯಾಗಿ ಗೆಲ್ಲಲು ಪ್ಲಾನ್ ಮಾಡುತ್ತಿದೆ.

10 ಅಭ್ಯರ್ಥಿಗಳ ಪಟ್ಟಿ ಆಪ್ ಘೋಷಣೆ

10 ಅಭ್ಯರ್ಥಿಗಳ ಪಟ್ಟಿ ಆಪ್ ಘೋಷಣೆ

ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯ ಘೋಷಣೆಯೊಂದಿಗೆ ಆಮ್ ಆದ್ಮಿ ಪಕ್ಷ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಪಕ್ಷವಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕ್ಲೀನ್ ಇಮೇಜ್ ಮತ್ತು ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಆಗಸ್ಟ್ 2ರಂದು ಆಮ್‌ ಆದ್ಮಿ ಪಕ್ಷ ತನ್ನ ಮೊದಲ ಪಟ್ಟಿಯಲ್ಲಿ ಒಟ್ಟು 10 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

Recommended Video

Ravindra Jadeja CSK ಬಿಟ್ಟು ಹೋಗುವುದು ಪಕ್ಕಾ | *Cricket | OneIndia Kannada

English summary
Gujarat Assembly Elections: Congress, which is the main opposition in Gujarat, is facing shortage of funds and six MLAs are said to be ready to leave the Congress and join the BJP soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X