ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಪಾವಾವ್ ಬಂದರಿನಲ್ಲಿ 450 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ

|
Google Oneindia Kannada News

ಅಹಮದಾಬಾದ್ ಏಪ್ರಿಲ್ 30: ಗುಜರಾತ್‌ನಲ್ಲಿ ಮತ್ತೊಮ್ಮೆ ಭಾರೀ ಪ್ರಮಾಣದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಗುಜರಾತ್ ಎಟಿಎಸ್ ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಜಂಟಿ ಕಾರ್ಯಾಚರಣೆಯಡಿ, ಅಮ್ರೇಲಿ ಜಿಲ್ಲೆಯ ಪಿಪಾವಾವ್ ಬಂದರಿನಲ್ಲಿ ಸುಮಾರು 90 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 450 ಕೋಟಿ ಎಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ ಈ ಬಂದರಿಗೆ ಆಗಮಿಸಿದ ಹಡಗು ಕಂಟೈನರ್‌ನಿಂದ ಈ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಗುಜರಾತ್ ಡಿಜಿಪಿ ಆಶಿಶ್ ಭಾಟಿಯಾ, ಹೆರಾಯಿನ್ ವಶಪಡಿಸಿಕೊಂಡಿರುವ ಶಿಪ್‌ಪಿಂಟ್ ಕಂಟೈನರ್ ಇರಾನ್‌ನಿಂದ ತರಲಾಗಿದೆ ಎಂದು ಹೇಳಿದ್ದಾರೆ. ಈ ಕಂಟೈನರ್ ಆಗಮನದ ಬಗ್ಗೆ ನಮಗೆ ಗುಪ್ತಚರ ಮಾಹಿತಿ ದೊರೆತಿತ್ತು. ನಂತರ ನಾವು ಅಲರ್ಟ್ ಆಗಿದ್ದೇವೆ ಎಂದು ಅವರು ಹೇಳಿದರು.

''ಇಷ್ಟು ದೊಡ್ಡ ಪ್ರಮಾಣದ ಡ್ರಗ್ಸ್ ಅನ್ನು ಭಾರತಕ್ಕೆ ತರಲು ಹಡಗು ಮಾರ್ಗ ಬಳಸಲಾಗುತ್ತದೆ. ಡಿಜಿಪಿ ಪ್ರಕಾರ, ಕಳ್ಳಸಾಗಣೆದಾರರು ಹೆರಾಯಿನ್ ಅನ್ನು ದಪ್ಪ ಹಗ್ಗದಲ್ಲಿ ಕಟ್ಟಿ ಬಚ್ಚಿಟ್ಟಿದ್ದರು. ಈ ಒಣಗಿದ್ದ ಹೆರಾಯಿನ್ಅನ್ನು ಪ್ಯಾಕ್ ಮಾಡಿ ರಫ್ತಿಗೆ ಕಳುಹಿಸಲಾಗಿದೆ. ಸುಮಾರು 395 ಕೆಜಿ ತೂಕದ ದಾರಗಳನ್ನು ಹೊಂದಿರುವ ನಾಲ್ಕು ಅನುಮಾನಾಸ್ಪದ ಚೀಲಗಳನ್ನು ಬಳಸಲಾಗಿದೆ. ಇದರಲ್ಲಿ ದಾರದ ಎಳೆಗಳನ್ನು ಹೆರಾಯಿನ್ ಹೊಂದಿರುವ ದ್ರಾವಣದಲ್ಲಿ ನೆನೆಸಿ ನಂತರ ಅದನ್ನು ಒಣಗಿಸಿ ಉಂಡೆಗಳನ್ನಾಗಿ ಮಾಡಿ ರಫ್ತು ಮಾಡಲು ಚೀಲಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ,'' ಎಂದು ಗುಜರಾತ್ ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ ಹೇಳಿದ್ದಾರೆ.

450 crore worth of heroin found in Gujarats Pipavav port

''ನಂತರ ಅನುಮಾನ ಬಂದಾಗ ತನಿಖೆ ನಡೆಸಿದೆವು. ಈ ವೇಳೆ 395 ಕೆಜಿ ಹಗ್ಗದ ಮೂಟೆಗಳಲ್ಲಿ ಸುಮಾರು 90 ಕೆಜಿ ಹೆರಾಯಿನ್ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಆರಂಭದಲ್ಲಿ, ಹಗ್ಗಗಳು ಇದ್ದವು ಎಂದು ಪೊಲೀಸರು ಅನುಮಾನಿಸಲಿಲ್ಲ. ಈ ಕ್ರಮದ ನಂತರ, ತನಿಖಾ ಸಂಸ್ಥೆಗಳು ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ,'' ಎಂದು ಭಾಟಿಯಾ ಹೇಳಿದ್ದಾರೆ.

ಇಲ್ಲಿಯವರೆಗೆ ಮಾದಕ ದ್ರವ್ಯ ಕಳ್ಳಸಾಗಣೆದಾರರ ಕಣ್ಣು ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾರ್ಗಗಳ ಮೇಲಿತ್ತು. ಆದರೆ ಈಗ ಅದು ಗುಜರಾತ್ ಮೂಲಕ ಕಳ್ಳಸಾಗಣೆಯಾಗುತ್ತಿದೆ. ಆದರೆ, ಇದು ಗುಜರಾತ್‌ನ ಸಮುದ್ರ ಪ್ರದೇಶಗಳಲ್ಲಿ ತನಿಖಾ ಸಂಸ್ಥೆಗಳ ಕ್ರಮ ಹೊಸದೇನಲ್ಲ. ಇದಕ್ಕೂ ಮುನ್ನ ಗುಜರಾತ್ ಕರಾವಳಿಯಲ್ಲಿ ಕೆಲ ದಿನಗಳಿಂದ ಭಾರೀ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

"ಈ ಪ್ರಕರಣದ ವಿಧಾನದಲ್ಲಿ ಥ್ರೆಡ್‌ಗಳಲ್ಲಿ ಬೆರೆಸಿದ ಹೆರಾಯಿನ್ ಅನ್ನು ಹೊರತೆಗೆಯುವ ಅಗತ್ಯವಿತ್ತು. NDPS ಕಾಯಿದೆ, 1985 ರ ನಿಬಂಧನೆಗಳ ಅಡಿಯಲ್ಲಿ DRI ಯಿಂದ ಪರೀಕ್ಷೆ ಮತ್ತು ವಶಪಡಿಸಿಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ" ಎಂದು ಪ್ರಕಟಣೆ ತಿಳಿಸಿದೆ.

English summary
Around 450 crore worth of heroin found in Gujarat's Pipawav harbor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X