ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನ ಸೌರಾಷ್ಟ್ರದಲ್ಲಿ ಭೂಕಂಪನ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು

|
Google Oneindia Kannada News

ಅಹಮದಾಬಾದ್, ಮೇ 17: ಸೋಮವಾರ ಮುಂಜಾನೆ ಗುಜರಾತ್‌ನಲ್ಲಿ ಭೂಕಂಪನ ಉಂಟಾಗಿದೆ. ಸೌರಾಷ್ಟ್ರ ಭಾಗದಲ್ಲಿ ಭೂಮಿ ಕಂಪಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಇದರ ಅನುಭವ ಉನಾ ಮತ್ತು ರಜುಲಾ ಪ್ರದೇಶದಲ್ಲಿಯೂ ಉಂಟಾಗಿದೆ ಎಂದು ತಿಳಿದು ಬಂದಿದೆ.

ಗಿರ್ ಸೋಮನಾಥ್ ಜಿಲ್ಲೆಯ ಉನಾ ನಗರಕ್ಕಿಂತ 3.5 ಕಿ.ಮೀ ದೂರದಲ್ಲಿ ಸೋಮವಾರ ಮುಂಜಾನೆ 3:37ರ ಸಂದರ್ಭದಲ್ಲಿ ಈ ಭೂಕಂಪನ ಉಂಟಾಗಿದೆ. ಆದರೆ ಅದೃಷ್ಟವಶಾತ್ ಈ ಭೂಕಂಪನದಿಂದ ಯಾವುದೇ ಗಂಭೀರ ಹಾನಿಯುಂಟಾಗಿಲ್ಲ. ಆದರೆ ಕೆಲ ಕಡೆಗಳಲ್ಲಿ ಕಿಟಕಿ ಗಾಜುಗಳು ಪುಡಿಯಾಗಿದ್ದು ಸಣ್ಣ ಪುಟ್ಟ ಹಾನಿಯುಂಟಾಗಿದೆ ಎಂದು ವರದಿಯಾಗಿದೆ.

ಗಿರ್ ಸೋಮ್‌ನಾಥ್ ಜಿಲ್ಲಾಧಿಕಾರಿ ಅಜಯ್ ಪ್ರಕಾಶ್ ಯಾವುದೇ ಹಾನಿ ಉಂಟಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಗುಜರಾತ್‌ನ ರಾಜ್‌ಕೋಟ್ ಸಮೀಪ 4.8 ತೀವ್ರತೆಯ ಭೂಕಂಪನ ಉಂಟಾಗಿತ್ತು.

4.5 magnitude of Earthquake strikes Gujarats Saurashtra region

ಒಂದೆಡೆ ತೌಕ್ತೆ ಚಂಡಮಾರುತ ಪಶ್ಚಿಮ ಕರಾವಳಿ ರಾಜ್ಯಗಳಲ್ಲಿ ಈಗಾಗಲೇ ಸಾಕಷ್ಟು ಹಾನಿಯುಂಟು ಮಾಡಿದೆ. ಕೇರಳ ಕರ್ನಾಟಕ ಸಹಿತ ಗುಜರಾತ್ ರಾಜ್ಯದಲ್ಲಿ ಇದರ ತೀವ್ರತೆಯಿಂದಾಗಿ ಅನೇಕ ಪ್ರಾಣ ಹಾನಿ, ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಇದರ ಮಧ್ಯೆ ಭೂಕಂಪನದ ಅನುಭವ ಈಗ ಗುಜರಾತ್‌ ಜನರ ಆತಂಕ ಹೆಚ್ಚುವಂತೆ ಮಾಡಿದೆ.

ಕಳೆದ ವಾರ ಈಶಾನ್ಯದ ಎರಡು ರಾಜ್ಯಗಳಾದ ನಾಗಲ್ಯಾಂಡ್ ಮತ್ತು ಮಣಿಪುರದಲ್ಲಿ ಭೂಕಂಪನ ಉಂಟಾಗಿತ್ತು.

English summary
An earthquake of magnitude 4.5 on the Richter scale struck Gujarat's Saurashtra region on Monday morning, according to the National Center for Seismology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X