• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ಸೋಂಕಿತರಿಗೆ 3 ಸಾವಿರ ಕೆಜಿ ಸೇಬು ಹಂಚಿಕೆ!

|

ಅಹಮದಾಬಾದ್, ಅಕ್ಟೋಬರ್ 13: ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ಕೋವಿಡ್ ರೋಗಿಗಳಿಗೆ 3 ಸಾವಿರ ಕೆಜಿ ಸೇಬು ವಿತರಣೆ ಮಾಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,52,764.

ಅಹಮದಾಬಾದ್‌ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ಮಂದಿರದಲ್ಲಿ ಮಂಗಳವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ದೇವಾಲಯವನ್ನು ಮುಚ್ಚಲಾಗಿತ್ತು.

ಜಮ್ಮು ಕಾಶ್ಮೀರದಿಂದ ನೇರವಾಗಿ ಸೇಬು ಖರೀದಿಗೆ ಮುಂದಾದ ಕೇಂದ್ರ ಸರ್ಕಾರ

ಮೊದಲ ದಿನ ದೇವರಿಗೆ 3 ಸಾವಿರ ಕೆಜಿ ಸೇಬು ಹಣ್ಣಿನ ನೈವೇದ್ಯವನ್ನು ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಹಣ್ಣಗಳನ್ನು ಜೋಡಿಸಿ ಇಡಲಾಗಿದೆ. ಈ ಹಣ್ಣುಗಳನ್ನು ಕೋವಿಡ್ ರೋಗಿ, ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ.

ಬಡವರಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆಶ್ರಯ ಕೊಟ್ಟ ಉದ್ಯಮಿ!

"ಪೂಜೆಯ ಬಳಿಕ ಸೇಬು ಹಣ್ಣುಗಳನ್ನು ಕೋವಿಡ್ ರೋಗಿಗಳು, ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಭಕ್ತರು ಸಹ ಸಾಮಾಜಿಕ ಅಂತರ ಕಾಪಾಡಿಕೊಂಡು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ" ಎಂದು ಅರ್ಚಕರು ಹೇಳಿದ್ದಾರೆ.

ಚುನಾವಣಾ ಪ್ರಚಾರದ ಚಿತ್ರಣ ಬದಲಿಸಿದ ಕೋವಿಡ್ ಸೋಂಕು!

ಗುಜರಾತ್ ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,52,764. ಸಕ್ರಿಯ ಪ್ರಕರಣಗಳು 15,335. ಇದುರೆಗೂ ರಾಜ್ಯದಲ್ಲಿ 3,577 ಜನರು ಮೃತಪಟ್ಟಿದ್ದಾರೆ. ರಾಜಧಾನಿ ಅಹಮದಾಬಾದ್‌ನಲ್ಲಿಯೇ 39,110 ಪ್ರಕರಣಗಳಿವೆ.

   AB DE Villiers ಆಟಕ್ಕೆ ಭಾರತದ ಕೋಚ್ ಫುಲ್ ಫಿದಾ | Oneindia Kannada

   English summary
   3000 kgs of apple will distributed to COVID 19 patients and healthcare staff at Ahmedabad, Gujarat. Apple put for puja at Shree Swaminarayan Mandir which re-opened for devotees on October 13.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X