ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಹಳಿ ಮೇಲೆ ಗಿರ್ ಅರಣ್ಯದ ಮೂರು ಸಿಂಹಗಳ ಕಳೇಬರ ಪತ್ತೆ

|
Google Oneindia Kannada News

ಅಹ್ಮದಾಬಾದ್ (ಗುಜರಾತ್), ಡಿಸೆಂಬರ್ 18: ಗುಜರಾತ್ ನ ಅಮ್ರೇಲಿ ಜಿಲ್ಲೆಯ ಗಿರ್ ಅರಣ್ಯ ವಲಯದಲ್ಲಿ ಮೂರು ಏಷ್ಯಾಟಿಕ್ ಸಿಂಹಗಳು ಸಾವನ್ನಪ್ಪಿವೆ. ಸೋಮವಾರ ಹಾಗೂ ಮಂಗಳವಾರದ ಕತ್ತಲ ವೇಳೆಯಲ್ಲಿ ರೈಲು ಹರಿದು, ಅವುಗಳು ಮೃತಪಟ್ಟಿವೆ. ರೈಲು ಹಳಿಗಳ ಮೇಲೆ ಸಿಂಹಗಳ ಕಳೇಬರ ಪತ್ತೆಯಾಗಿವೆ.

ಗುಜರಾತ್ ನ ಗಿರ್ ಅರಣ್ಯದಲ್ಲಿ 18 ದಿನದಲ್ಲಿ 31 ಸಿಂಹ ಸಾವುಗುಜರಾತ್ ನ ಗಿರ್ ಅರಣ್ಯದಲ್ಲಿ 18 ದಿನದಲ್ಲಿ 31 ಸಿಂಹ ಸಾವು

ಬೊರಲ ಹಳ್ಳಿಯ ಬಳಿ ರೈಲು ಹಳಿಯ ಮೇಲೆ ಕಳೇಬರ ಪತ್ತೆಯಾಗಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಹೇಳಿದ್ದಾರೆ. ಸರಕು ಸಾಗಣೆ ರೈಲು ಸಂಚರಿಸುವ ವೇಳೆ ಆರು ಸಿಂಹಗಳು ಹಳಿ ದಾಟಲು ಯತ್ನಿಸಿವೆ. ಆ ಪೈಕಿ ಮೂರು ಸಿಂಹಗಳು ರಾತ್ರಿ ಹನ್ನೆರಡೂ ಮುಕ್ಕಾಲರ ವೇಳೆಯಲ್ಲಿ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹುಟ್ಟು ಹಬ್ಬದಂದು ತ್ಯಾವರೆಕೊಪ್ಪದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಿರಿ ಹುಟ್ಟು ಹಬ್ಬದಂದು ತ್ಯಾವರೆಕೊಪ್ಪದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಿರಿ

ಎರಡು ಗಂಡು ಸಿಂಹಗಳು ಹಾಗೂ ಒಂದು ಹೆಣ್ಣು ಸಿಂಹ ಒಂದೂವರೆಯಿಂದ ಎರಡು ವರ್ಷ ಪ್ರಾಯದವು ಅಪಘಾತದಲ್ಲಿ ಮೃತಪಟ್ಟಿವೆ. ಈ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತದೆ. ರೈಲಿನ ವೇಗ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿ ಇತ್ಯಾದಿ ಆಯಾಮಗಳಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.

3 Asiatic lions run over by goods train in Gujarat Gir

ಸೆಪ್ಟೆಂಬರ್ ನಿಂದ ಈಚೆಗೆ ಗಿರ್ ಅರಣ್ಯ ವಲಯದಲ್ಲಿ ಕನಿಷ್ಠ ಮೂವತ್ತು ಸಿಂಹಗಳು ಸಾವನ್ನಪ್ಪಿವೆ. ಮೂವತ್ತಾರು ಸಿಂಹಗಳನ್ನು ಹಿಡಿದು, ಮುಂಜಾಗ್ರತಾ ಕ್ರಮವಾಗಿ ಮೂರು ಸಂರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸೆಪ್ಟೆಂಬರ್ ನಲ್ಲಿ ಮೂರು ವಾರದ ಫಾಸಲೆಯಲ್ಲಿ ಇಪ್ಪತ್ಮೂರು ಸಿಂಹಗಳು ಮೃತಪಟ್ಟಿದ್ದವು.

English summary
Three Asiatic lions were killed in the Gir forest division in Gujarat's Amreli district when a train ran over them on the intervening night of Monday and Tuesday. The lion carcasses were found on the railway tracks in the Borala village early on Tuesday morning, forest officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X