• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರತಿಭಟನೆ; ಬಾಂಬೆ ಹೈಕೋರ್ಟ್​ ನ್ಯಾಯಾಧೀಶೆಗೆ ಕಾಂಡೋಮ್ ರವಾನೆ!

|

ಅಹಮದಾಬಾದ್, ಫೆಬ್ರವರಿ 17; ಬಾಂಬೆ ಹೈಕೋರ್ಟ್​ ನ್ಯಾಯಾಧೀಶೆ ಪುಷ್ಪಾ ಗಣದೇವಾಲಾ ಅವರಿಗೆ 150 ಕಾಂಡೋಮ್‌ಗಳನ್ನು ಕಳಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ಪೋಕ್ಸೋ ಕಾಯ್ದೆಯ ಅಡಿ ನ್ಯಾಯಾಧೀಶೆ ನೀಡಿರುವ ಆದೇಶಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ.

ಅಹಮದಾಬಾದ್ ಮೂಲದ ದೇವಶ್ರೀ ತ್ರಿವೇದಿ ಎಂಬುವವರು ನ್ಯಾಯಾಧೀಶರ 12 ವಿಳಾಸಗಳಿಗೆ ಕಾಂಡೋಮ್‌ಗಳನ್ನು ಕಳಿಸಿರುವುದಾಗಿ ಹೇಳಿದ್ದಾರೆ. ರಾಜಕೀಯ ವಿಶ್ಲೇಷಕರಾದ ಮಹಿಳೆ ನ್ಯಾಯಾಧೀಶರು ಇತ್ತೀಚೆಗೆ ನೀಡಿರುವ ತೀರ್ಪುಗಳಿಗೆ ಪ್ರತಿಭಟನೆಯಾಗಿ ಕಾಂಡೋಮ್ ಕಳಿಸಿದ್ದಾಗಿ ಹೇಳಿದ್ದಾರೆ.

ಪ್ಯಾಂಟ್ ಜಿಪ್ ತೆರೆಯುವುದು ಪೋಕ್ಸೋ ಅಡಿ 'ಲೈಂಗಿಕ ದೌರ್ಜನ್ಯ'ವಲ್ಲ: ಮತ್ತೊಂದು ವಿವಾದಾತ್ಮಕ ತೀರ್ಪು

"ನ್ಯಾಯಧೀಶೆ ಪುಷ್ಪಾ ಗಣದೇವಾಲಾ ಅವರು ನೀಡಿರುವ ಇತ್ತೀಚಿನ ತೀರ್ಪುಗಳಿಂದ ಅಪ್ರಾಪ್ತ ಬಾಲಕಿಗೆ ನ್ಯಾಯ ಪಡೆಯಲು ಸಾಧ್ಯವಿಲ್ಲ. ನ್ಯಾಯಾಧೀಶೆಯನ್ನು ಅಮಾನತು ಮಾಡಬೇಕು" ಎಂದು ಸಹ ಮಹಿಳೆ ಆಗ್ರಹಿಸಿದ್ದಾರೆ.

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಬಾಂಬೆ ಹೈಕೋರ್ಟ್ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ತಡೆ

ಬಾಲಕಿನ ಸ್ತನಗಳನ್ನು ಆಕೆಯ ಉಡುಪುಗಳ ಮೇಲಿನಿಂದ ಸ್ಪರ್ಶಿಸಿದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ. ಚರ್ಮದಿಂದ ಚರ್ಮದ ಸ್ಪರ್ಶವಾಗಿದ್ದರೆ ಮಾತ್ರ ಪೋಕ್ಸೋ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಪುಷ್ಪಾ ಗಣದೇವಾಲಾ ತೀರ್ಪು ನೀಡಿದ್ದರು.

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪು

ಈ ತೀರ್ಪಿನ ಅನ್ವಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ವ್ಯಕ್ತಿಯೊಬ್ಬ ಖುಲಾಸೆಗೊಂಡಿದ್ದ. ಬಾಂಬೆ ಹೈಕೋರ್ಟ್ ನೀಡಿದ್ದ ಈ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿತ್ತು.

"ಈ ತೀರ್ಪಿನ ಬಳಿಕ ಫೆಬ್ರವರಿ 9ರಂದು ಕಾಂಡೋಮ್‌ಗಳನ್ನು ಕಳಿಸಿದ್ದೇನೆ. ಹಲವು ಅವರನ್ನು ತಲುಪಿರುವ ಬಗ್ಗೆ ನನಗೆ ಮಾಹಿತಿ ಇದೆ. ಮಹಿಳೆಯಾಗಿ ನಾನೇನು ತಪ್ಪು ಮಾಡಿಲ್ಲ. ನನ್ನ ಕಾರ್ಯದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ" ಎಂದು ದೇವಶ್ರೀ ತ್ರಿವೇದಿ ಹೇಳಿದ್ದಾರೆ.

ಪುಷ್ಪಾ ಗಣದೇವಾಲಾ ಅವರು ಅಪ್ರಾಪ್ತೆ ಕೈ ಹಿಡಿದು ಜಿಪ್ ತೆಗೆಯುವುದು ಸಹ ಲೈಂಗಿಕ ದೌರ್ಜನ್ಯವಲ್ಲ ಎಂದು ಮತ್ತೊಂದು ತೀರ್ಪು ನೀಡಿದ್ದರು. ಫೋಕ್ಸೋ ಕಾಯ್ದೆಯಡಿ ಅವರು ನೀಡಿರುವ ತೀರ್ಪಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

English summary
Devshri Trivedi woman from Ahmedabad sent 150 condoms to Bombay High Court additional judge Justice Pushpa V. Ganediwala as a mark of protest against her controversial verdicts under the POCSO act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X