ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲೂ ಹೋಗದ 14 ತಿಂಗಳ ಕಂದಮ್ಮನಿಗೆ ಕೊರೊನಾ ಬಂದಿದ್ದು ಹೇಗೆ.?

|
Google Oneindia Kannada News

ಗಾಂಧಿನಗರ, ಏಪ್ರಿಲ್ 6: ಅತ್ತ ವಿದೇಶಗಳಿಂದ ಬಂದವರು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದರೆ, ಇತ್ತ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿರದ 14 ತಿಂಗಳ ಪುಟ್ಟ ಮಗುವಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಉತ್ತರ ಪ್ರದೇಶ ಮೂಲದವರಾದರೂ, ಗುಜರಾತಿನಲ್ಲಿ ಕೂಲಿ ಕೆಲಸ ಮಾಡುವ ದಂಪತಿಯ 14 ತಿಂಗಳ ಗಂಡು ಮಗುವಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಕೋವಿಡ್-19: ಜೀವ ಉಳಿಸುತ್ತಾ ವೆಂಟಿಲೇಟರ್? ಇದಕ್ಕೇಕೆ ಅಷ್ಟೊಂದು ಹಾಹಾಕಾರ?ಕೋವಿಡ್-19: ಜೀವ ಉಳಿಸುತ್ತಾ ವೆಂಟಿಲೇಟರ್? ಇದಕ್ಕೇಕೆ ಅಷ್ಟೊಂದು ಹಾಹಾಕಾರ?

ಮಗು ಮತ್ತು ತಂದೆ-ತಾಯಿ ಎಲ್ಲೂ ಪ್ರಯಾಣ ಮಾಡಿಲ್ಲ. ಅಸಲಿಗೆ, ಗುಜರಾತಿನ ಜಾಮ್ ನಗರದಲ್ಲಿ ಮೊಟ್ಟ ಮೊದಲ ಕೋವಿಡ್-19 ಪಾಸಿಟಿವ್ ಕೇಸ್ ಇದೇ ಆಗಿದ್ದು, ಮಗುವಿಗೆ ಸೋಂಕು ತಗುಲಿದ್ದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

14 Month old baby tests positive for Coronavirus in Gujarat

ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಬಳಿಕ, ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ಕಂಡುಬಂದಿದ್ದು, ಸದ್ಯ ಕಂದಮ್ಮನನ್ನ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಮಗುವಿನ ತಂದೆ-ತಾಯಿಗೆ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆ ನಡೆಸಿ, ಅವರಿಗೆ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ.

English summary
14 Month old baby tests positive for Coronavirus in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X