ಗುಜರಾತ್ ನಲ್ಲಿ ಅತ್ಯಾಚಾರ ಎಸಗಿ 12ರ ಬಾಲಕಿ ಶಿರಚ್ಛೇದಿಸಿದ ಸಂಬಂಧಿ
ಅಹ್ಮದಾಬಾದ್,
ಅಕ್ಟೋಬರ್.18:
ಗುಜರಾತ್
ಬನಸ್ಕಾಂತ್
ಜಿಲ್ಲೆಯಲ್ಲಿ
ಮಾನವೀಯ
ಸಮಾಜವೇ
ತಲೆ
ತಗ್ಗಿಸುವಂತಾ
ಘಟನೆಯೊಂದು
ತಡವಾಗಿ
ಬೆಳಕಿಗೆ
ಬಂದಿದೆ.
12
ವರ್ಷದ
ಬಾಲಕಿ
ಮೇಲೆ
ಅತ್ಯಾಚಾರ
ನಡೆಸಿದ್ದು,
ನಂತರ
ಆಕೆ
ಶಿರಚ್ಛೇದ
ಮಾಡಿರುವ
ಬಗ್ಗೆ
ವರದಿಯಾಗಿದೆ.
ಬನಸ್ಕಾಂತ್
ಜಿಲ್ಲೆಯ
ದೀಸಾ
ಪ್ರದೇಶದಲ್ಲಿ
ಇಂಥದೊಂದು
ಅಮಾನುಷ
ಘಟನೆ
ನಡೆದಿದೆ.
ಶುಕ್ರವಾರ
ನಾಪತ್ತೆಯಾಗಿದ್ದ
ಬಾಲಕಿ
ಮರುದಿನವೇ
ಶವವಾಗಿ
ಪತ್ತೆಯಾಗಿದ್ದಾಳೆ.
ಪೊಲೀಸರು
ತನಿಖೆ
ಆರಂಭಿಸಿದ್ದು,
ಬಾಲಕಿಯ
ಕೊಲೆಗೂ
ಮೊದಲು
ಆಕೆ
ಮೇಲೆ
ಅತ್ಯಾಚಾರ
ನಡೆದಿರುವ
ಬಗ್ಗೆ
ಸ್ಪಷ್ಟಪಡಿಸಿದ್ದಾರೆ.
ಆ
ಫೋಟೊ
ಹತ್ರಾಸ್
ಸಂತ್ರಸ್ತೆಯದ್ದಲ್ಲ
ನನ್ನ
ಪತ್ನಿಯದ್ದು:
ಹೈಕೋರ್ಟ್
ಮೆಟ್ಟಿಲೇರಿದ
ವ್ಯಕ್ತಿ
ಇನ್ನು,
ಘಟನೆಗೆ
ಸಂಬಂಧಿಸಿದಂತೆ
ಬಾಲಕಿಯ
ಸಂಬಂಧಿಕನೇ
ಎಂದು
ಗುರುತಿಸಲಾದ
ಆರೋಪಿಯೊಬ್ಬನನ್ನು
ಪೊಲೀಸರು
ವಶಕ್ಕೆ
ಪಡೆದು
ವಿಚಾರಣೆ
ನಡೆಸುತ್ತಿದ್ದಾರೆ.
ಕಳೆದ
ಶುಕ್ರವಾರ
ಆರೋಪಿಯು
ಬಾಲಕಿಯನ್ನು
ಬೈಕ್
ನಲ್ಲಿ
ಕರೆದುಕೊಂಡು
ಹೋಗುತ್ತಿದ್ದರು
ಎಂದು
ತಿಳಿದು
ಬಂದಿದೆ.
ಶನಿವಾರ
ಬಾಲಕಿಯ
ಮೃತದೇಹ
ಪತ್ತೆ:
ಕಳೆದ
ಅಕ್ಟೋಬರ್.16ರಂದು
ಮನೆಯಿಂದ
ನಾಪತ್ತೆಯಾಗಿದ್ದ
12
ವರ್ಷದ
ಬಾಲಕಿಯ
ಮೃತದೇಹವನ್ನು
ದಾಂತೇವಾಡ
ತಾಲೂಕಿನ
ಮೋತಿ
ಭಾಖರ್
ಪ್ರದೇಶದಲ್ಲಿ
ಪತ್ತೆಯಾಗಿತ್ತು.
ಪ್ರಕರಣಕ್ಕೆ
ಸಂಬಂಧಿಸಿದಂತೆ
ಒಬ್ಬ
ಆರೋಪಿಯನ್ನು
ವಶಕ್ಕೆ
ಪಡೆಯಲಾಗಿದ್ದು,
ಈತ
ಬಾಲಕಿಯ
ಸಂಬಂಧಿ
ಎಂದು
ತಿಳಿದು
ಬಂದಿದೆ.
ಬಾಲಕಿ
ಕೊಲೆಗೂ
ಮೊದಲು
ಅತ್ಯಾಚಾರ
ನಡೆಸಿದ್ದು,
ಮೃತದೇಹವನ್ನು
ಮರಣೋತ್ತರ
ಪರೀಕ್ಷೆಗೆ
ಕಳುಹಿಸಿ
ಕೊಡಲಾಗಿದೆ.
ವರದಿ
ಬಂದ
ಬಳಿಕ
ಈ
ಬಗ್ಗೆ
ಸ್ಪಷ್ಟತೆ
ಸಿಗಲಿದೆ
ಎಂದು
ಡೆಪ್ಯುಟಿ
ಸೂಪರಿಟೆಂಡೆಂಟ್
ಆಫ್
ಪೊಲೀಸ್
ಕುಶಾಲ್
ಓಜಾ
ತಿಳಿಸಿದ್ದಾರೆ.