ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಮಾಲಿನ್ಯ ಹೆಚ್ಚಳ: ತಾಜ್‌ಮಹಲ್‌ ಗೇಟಿನ ಬಳಿ ಗಾಳಿ ಶುದ್ಧೀಕರಣ ಘಟಕ

|
Google Oneindia Kannada News

ಆಗ್ರಾ, ನವೆಂಬರ್ 5: ವಾಯುಮಾಲಿನ್ಯ ಹೆಚ್ಚಾಗಿರುವ ಕಾರಣ ತಾಜ್ ಮಹಲ್ ಬಿಳಿ ಬಣ್ಣ ಹಳದಿಯಾಗಿ ಪರಿವರ್ತನೆಯಾಗಿದೆ.

ಹಾಗೆಯೇ ತಾಜ್ ಮಹಲ್ ಗೇಟ್ ಬಳಿ ಎರಡು ಏರ್‌ ಪ್ಯೂರಿಫೈರ್ ಕೂಡ ಅಳವಡಿಸಲಾಗುತ್ತಿದೆ.ದೆಹಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ವಿಪರೀತಕ್ಕೆ ತಿರುಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ತಾಜ್ ಮಹಲ್ ಬಳಿ ಏರ್ ಪ್ಯೂರಿಫೈರ್ ವಾಹನಗಳನ್ನು ನಿಯೋಜಿಸಿದೆ. ಈಗ ಗೇಟಿನ ಬಳಿ ಎರಡು ಪ್ರತ್ಯೇಕ ಘಟಕವನ್ನೇ ತೆರೆಯಲು ಮುಂದಾಗಿದೆ.

ಹಳದಿ ಬಣ್ಣಕ್ಕೆ ತಾಜ್ ಮಹಲ್? ಪ್ರೇಮಸೌಧಕ್ಕೂ ವ್ಯಾಪಿಸಿದ ದೆಹಲಿ ಮಾಲಿನ್ಯಹಳದಿ ಬಣ್ಣಕ್ಕೆ ತಾಜ್ ಮಹಲ್? ಪ್ರೇಮಸೌಧಕ್ಕೂ ವ್ಯಾಪಿಸಿದ ದೆಹಲಿ ಮಾಲಿನ್ಯ

ಇದು 300 ಮೀಟರ್ ವಿಸ್ತೀರ್ಣದಲ್ಲಿ 8 ಗಂಟೆಗಳ ಅವಧಿಯಲ್ಲಿ 15 ಲಕ್ಷ ಕ್ಯೂಬಿಕ್ ಮೀಟರ್ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಪಡೆದಿದೆ.

Two Air Purifier Installed Near Tajmahal Gate

ತಾಜ್ ಮಹಲ್ ಬಳಿ ವಾಯು ಮಾಲಿನ್ಯ ಮಾಪನ ಕೇಂದ್ರವಿಲ್ಲ. ಹಾಗೆಯೇ ಈಗ ಎಷ್ಟು ಪ್ರಮಾಣದಲ್ಲಿ ಗಾಳಿ ಶುದ್ಧೀಕರಣವಾಗಿದೆ ಎಂದು ಕಂಡುಹಿಡಿಯುವುದು ಕೂಡ ಕಷ್ಟವಾಗಿದೆ.

ದೆಹಲಿ ಸೇರಿದಂತೆ ಹಲವೆಡೆ ವಾಯು ಮಾಲಿನ್ಯ ಹೆಚ್ಚಾಗಿರುವ ಕಾರಣ ಈ ಏರ್ ಪ್ಯೂರಿಫಾಯರ್ ಅಳವಡಿಸಲಾಗಿದೆ. ಕಳೆದ ಒಂದು ವಾರದಿಂದ ಮಾಲಿನ್ಯ ಮಿತಿ ಮೀರಿದೆ. ನಿತ್ಯ ತಾಜ್‌ಮಹಲ್ ಹಾಗು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ.

English summary
The Agra District Administration has installed two air purifier machines at the gates of the Taj Mahal to combat air pollution in the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X