ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್ ಮಹಲ್ ಸೌಂದರ್ಯಕ್ಕೆ ಧಕ್ಕೆ, ಸೊಳ್ಳೆಗೆ ಬೆಚ್ಚಿದ ಪ್ರೇಮಸೌಧ!

|
Google Oneindia Kannada News

ನವದೆಹಲಿ, ಜುಲೈ 25: ಪರಿಶುದ್ಧ ಬಿಳುಪನ್ನು ಕಾಯ್ದುಕೊಳ್ಳಲು ಹೆಣಗುತ್ತಿರುವ ಪ್ರೇಮ ಸೌಧ ತಾಜ್ ಮಹಲ್ ಗೆ ಮತ್ತೊಮ್ಮೆ ಮಾಲಿನ್ಯ ಜೊತೆ ಹೋರಾಟ ಮುಂದುವರೆಸಿದೆ. ಸೊಳ್ಳೆ, ಸಣ್ಣ ಕೀಟಗಳ ಮಲಮೂತ್ರಗಳ ಕಲೆಯಿಂದ ತಾಜ್ ಮಹಲ್ ನ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದೆ. 1653ರಲ್ಲಿ ಕಟ್ಟಲ್ಪಟ್ಟ ತಾಜ್ ಮಹಲ್ ನ ಮಾರ್ಬಲ್ ಗೆ ಬಿಳುಪು ಬಣ್ಣದಿಂದ ಹಸಿರು, ಕಪ್ಪು ಬಣ್ಣಕ್ಕೆ ತಿರುಗಿಬಿಟ್ಟಿದೆ ಎಂದು ವರದಿ ಬಂದಿದೆ.

ವಾಯುಮಾಲಿನ್ಯ ವಿಪರೀತದಿಂದಾಗಿ ತಾಜ್ ಮಹಲ್ ಶಿಲೆಗಳು ತನ್ನ ನೈಜ ಬಣ್ಣ ಕಳೆದುಕೊಳ್ಳುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುವ ಪ್ರೇಮ ಸೌಧ ಮಂಕಾಗಿದೆ. ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ (ಎಸ್‌ಎಸ್‌ಐ) ತಾಜ್‌ಮಹಲ್‌ಗೆ ಮುಲ್ತಾನಿನ ಮಣ್ಣು ಬಳಿಯಲು ಯೋಜಿಸಲಾಗಿತ್ತು.

ಈ ಹಿಂದೆ ತಾಜ್ ಮಹಲ್ ಸುತ್ತ ಮುತ್ತಲಿನ ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ವಾತಾವರಣ ಶುದ್ಧಿಗೊಳಿಸಲು ಪವಿತ್ರ ಸಸ್ಯ ಎನಿಸಿರುವ ತುಳಸಿಯನ್ನು ಬಳಸಲಾಗಿತ್ತು.

ಯಮುನಾ ನದಿಯ ಮಾಲಿನ್ಯದಿಂದ ಕೂಡಾ ತಾಜ್ ಮಹಲ್ ಹಾಗೂ ಸುತ್ತ ಮುತ್ತಲ ಪರಿಸರ ತೀವ್ರ ಹಾನಿಗೊಳಗಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ದೂರಿದೆ.

ಬಿಳಿ ಗೋಡೆಗಳ ಮೇಲಿನ ಹಸಿರು ಪಾಚಿ

ಬಿಳಿ ಗೋಡೆಗಳ ಮೇಲಿನ ಹಸಿರು ಪಾಚಿ

"ತಾಜ್ ಮಹಲ್ ಬಿಳಿ ಗೋಡೆಗಳ ಮೇಲಿನ ಹಸಿರು ಪಾಚಿ ನಿಜಕ್ಕೂ ಮಾಲಿನ್ಯದಿಂದ ಮಾತ್ರವಲ್ಲ, ಕೀಟಗಳ ಮಲಮೂತ್ರದಿಂದ ಉಂಟಾದ ಕಲೆಯಾಗಿದೆ. ಇದು ತೀವ್ರವಾಗಿ ಕಟ್ಟಡವನ್ನು ಬಾಧಿಸಬಹುದು" ಎಂದು ಪರಿಸರವಾದಿಗಳು ಹೇಳಿದ್ದಾರೆ.

ಯುನೆಸ್ಕೋ ಪಾರಂಪರಿಕ ಕಟ್ಟಡ ವ್ಯಾಪ್ತಿಗೆ ಸೇರುವ ತಾಜ್ ಮಹಲ್ -ಪ್ರೇಮ ಸೌಧವಾಗಿ ಗುರುತಿಸಿಕೊಂಡಿದೆ. ಮೊಘಲರ ದೊರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಸ್ಮರಣೆಯಲ್ಲಿ ನಿರ್ಮಿಸಿದ ಭವ್ಯ ಸೌಧ ಇದಾಗಿದೆ.

ಪಾಕಿಸ್ತಾನದಲ್ಲಿರುವ ಮುಲ್ತಾನ್ ಊರಿನ ಮಣ್ಣು

ಪಾಕಿಸ್ತಾನದಲ್ಲಿರುವ ಮುಲ್ತಾನ್ ಊರಿನ ಮಣ್ಣು

ಪಾಕಿಸ್ತಾನದಲ್ಲಿರುವ ಮುಲ್ತಾನ್ ಊರಿನಲ್ಲಿ ಸಿಗುವ ಮಣ್ಣಿನಲ್ಲಿ ಸುಣ್ಣದಂಶವಿದ್ದು ಇದು ಮುಖದ ಸೌಂದರ್ಯ ಕಾಪಾಡುತ್ತದೆ. ಭಾರತ ಸೇರಿದಂತೆ ಅನೇಕ ಕಡೆ ಮುಲ್ತಾನಿ ಮಿಟ್ಟಿ ಮಹಿಳೆಯ ಫೇಸ್ ಪ್ಯಾಕ್ ಪದಾರ್ಥವಾಗಿ ಬಳಕೆಯಾಗುತ್ತಿದೆ. ಈಗ ತಾಜಮಹಲ್ ನ ಗೋಡೆಗಳಲ್ಲಿರುವ ಹಳದಿ ಬಣ್ಣವನ್ನು ಹೋಗಲಾಡಿಸಲು ಮುಲ್ತಾನಿ ಮಿಟ್ಟಿ ಹಚ್ಚಲು ನಿರ್ಧರಿಸಲಾಗಿದೆ. ಬಳಿಕ ಡಿಸ್ಟಿಲ್ಡ್‌ ವಾಟರ್‌ನಿಂದ ಪ್ರೇಮಸೌಧದ ಗೋಡೆಯನ್ನು ತೊಳೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಮುಲ್ತಾನಿ ಮಿಟ್ಟಿ ಹಚ್ಚಲು ಸಿದ್ಧತೆ ಆರಂಭಗೊಂಡಿವೆ ಎಂಬ ಸುದ್ದಿಯಿದೆ.

ಮಲ್ತಾನಿ ಮಿಟ್ಟಿ ಚಿಕಿತ್ಸೆ ಈ ಹಿಂದೆಯೂ ನಡೆದಿತ್ತು

ಮಲ್ತಾನಿ ಮಿಟ್ಟಿ ಚಿಕಿತ್ಸೆ ಈ ಹಿಂದೆಯೂ ನಡೆದಿತ್ತು

1994, 2001 ಮತ್ತು 2008ರಲ್ಲೂ ತಾಜ್‌ಮಹಲ್‌ಗೆ ಇದೇ ಮಾದರಿಯ ಮಲ್ತಾನಿ ಮಿಟ್ಟಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇದು ಶಾಶ್ವತ ಪರಿಹಾರವಾಗುವ ಸಾಧ್ಯತೆ ಕಡಿಮೆ. ಸುಪ್ರೀಂಕೋರ್ಟ್ ಈ ಹಿಂದೆ ಸುಮಾರು 200 ಕ್ಕೂ ಅಧಿಕ ಕೈಗರಿಕಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ಪರಿಸರ ಮಾಲಿನ್ಯ ಮಾಡದಂತೆ ಎಚ್ಚರಿಕೆ ನೀಡಿತ್ತು. ಅದರೆ, ಆಗ್ರಾದಲ್ಲಿ ಯುಮುನಾ ನದಿಯನ್ನು ಚರಂಡಿ ನೀರಿನಂತೆ ಕಲುಷಿತ ಮಾಡುವಲ್ಲಿ ಕೈಗಾರಿಕೆಗಳು ಯಶ ಕಂಡಿವೆ. ಮಾಲಿನ್ಯ ನಿಯಂತ್ರಣವಾಗದ ಹೊರತು ತಾಜ್ ಮಹಲ್ ಜತೆಗೆ ಸುತ್ತಲಿನ ಪರಿಸರವೂ ಕಷ್ಟದ ಪರಿಸ್ಥಿತಿಯಲ್ಲಿ ಹೆಣಗಬೇಕಾಗುತ್ತದೆ.

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ತಾಜ್ ಮಹಲ್ ಗೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಖರ್ಚು ಸುಮಾರು 10.4 ಲಕ್ಷ ರು ಎಂದು ಹೇಳಲಾಗಿದೆ. 12ಕ್ಕೂ ಅಧಿಕ ಆರ್ಕ್ಟಿಟೆಕ್ಟ್ ಗಳು, ಸುಮಾರು ಆರು ತಿಂಗಳುಗಳ ಕಾಲ ಈ ಚಿಕಿತ್ಸೆ ನೀಡಲಿದ್ದಾರೆ. ಪ್ರವಾಸಿಗರಿಗೆ ಇದರಿಂದ ಏನು ತೊಂದರೆಯಾಗುವುದಿಲ್ಲ ಎಂದು ಎಎಸ್ಐ ತಂಡ ಹೇಳಿದೆ. ಉತ್ತರಪ್ರದೇಶದ ತಾಜ್ ಮಹಲ್ ಸಂರಕ್ಷಣಾ ಸಮಿತಿ ಕೂಡಾ ತಂಡದ ಜತೆ ಕಾರ್ಯನಿರ್ವಹಿಸುತ್ತಿದೆ.

English summary
Insects’ excreta damage Taj Mahal, leaves marble with green, black stains.Taj Mahal beauty is under threat from a tiny mosquito-like insect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X