ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳ್ಳೇ ಸುದ್ದಿ: ಆಗ್ರಾದಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

|
Google Oneindia Kannada News

ಆಗ್ರಾ, ಏಪ್ರಿಲ್ 27: 28 ವರ್ಷದ ಕೊರೊನಾ ವೈರಸ್ ಸೋಂಕಿತೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ (ಏಪ್ರಿಲ್ 26) ಎಸ್.ಎನ್.ಮೆಡಿಕಲ್ ಕಾಲೇಜಿನಲ್ಲಿ ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಲಾಗಿದ್ದು, ಸೋಂಕಿಲ್ಲದ ಮಗುವನ್ನು ಕುಟುಂಬಸ್ಥರ ಸುಪರ್ದಿಗೆ ನೀಡಲಾಗಿದೆ. ಭಾನುವಾರ ಬೆಳಗ್ಗೆ ಹೆರಿಗೆಗಾಗಿ ಎಸ್.ಎನ್.ಮೆಡಿಕಲ್ ಕಾಲೇಜಿಗೆ ಗರ್ಭಿಣಿ ಮಹಿಳೆ ದಾಖಲಾಗಿದ್ದರು.

ಕೊರೊನಾ ಭೀತಿಯಿಂದ ಅಡ್ಮಿಟ್ ಮಾಡಿಕೊಳ್ಳದ ಸಿಬ್ಬಂದಿ: ಆಸ್ಪತ್ರೆ ಮುಂಭಾಗವೇ ಹೆರಿಗೆ!ಕೊರೊನಾ ಭೀತಿಯಿಂದ ಅಡ್ಮಿಟ್ ಮಾಡಿಕೊಳ್ಳದ ಸಿಬ್ಬಂದಿ: ಆಸ್ಪತ್ರೆ ಮುಂಭಾಗವೇ ಹೆರಿಗೆ!

ಈ ಹಿಂದೆ ಏಪ್ರಿಲ್ 20 ರಂದು, 24 ವರ್ಷದ ಕೊರೊನಾ ಸೋಂಕಿತೆ ಆರೋಗ್ಯವಂತ ಮಗುವಿಗೆ ತಾಯಿ ಆಗಿದ್ದರು. ಏಪ್ರಿಲ್ 25 ರಂದು, ಫಿರೋಝಾಬಾದ್ ಮೂಲದ 25 ವರ್ಷದ ಸೋಂಕಿತೆ ಕೂಡ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದರು.

Covid-19 Patient Delivers Healthy Baby In Agra

''ಏಪ್ರಿಲ್ 20 ರಿಂದ 26 ರವರೆಗೂ ಮೂವರು ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿದ್ದೇವೆ. ಮೂರೂ ಮಕ್ಕಳು ಆರೋಗ್ಯವಾಗಿವೆ. ಮಕ್ಕಳಿಗೆ ಸೋಂಕು ತಾಕದಂತೆ ಎಚ್ಚರ ವಹಿಸಿ ತಾಯಿಯಿಂದ ಬೇರ್ಪಡಿಸಲಾಗಿದೆ. ಅವರವರ ಕುಟುಂಬಸ್ಥರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ'' ಎಂದು ಡಾ.ಅಖಿಲ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

English summary
Covid-19 patient delivers healthy baby in Agra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X