ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ್ರಾ: ಗಂಡು ಮಗುವಿನಾಸೆಗೆ 7 ಮಕ್ಕಳ ತಂದೆಯಾದ ಆಟೋ ಡ್ರೈವರ್

|
Google Oneindia Kannada News

ಆಗ್ರಾ ಜೂನ್ 29: ಆಟೋ ಚಾಲಕನೊಬ್ಬ ಗಂಡು ಮಗುವಿನ ಆಸೆಗೆ 7 ಮಕ್ಕಳ ತಂದೆಯಾದ ಪ್ರಕರಣ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದಿದೆ. ಒಬ್ಬ ಆಟೋ ಡ್ರೈವರ್‌ಗೆ ಮೂವರು ಹೆಣ್ಣು ಮಕ್ಕಳಿದ್ದರು, ಆದರೆ ಅವರಿಗೆ ಒಬ್ಬ ಗಂಡು ಮಗ ಬೇಕಿತ್ತು. ಮಗನ ಆಸೆ ಈಡೇರಿದ್ದು, ಈ ವಿಚಾರದಲ್ಲಿ ಆಟೋ ಚಾಲಕ ಏಳು ಮಕ್ಕಳ ತಂದೆಯಾಗಿದ್ದಾರೆ. ಆತನ ಹೆಂಡತಿ ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅವರಿಗೆ ಬೇಕಿದ್ದ ಒಂದು ಗಂಡು ಮಗು ಆದರೆ ಆತನ ಪತ್ನಿ ಒಂದು ಗಂಡು ಮಗುವಿನೊಂದಿಗೆ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೆಣ್ಣು ಮಕ್ಕಳು ವಿದ್ಯಾಭ್ಯಾಸದಿಂದ ಹಿಡಿದು ವ್ಯಾಪಾರ ಮತ್ತು ರಾಜಕೀಯದವರೆಗೆ ಅಗ್ರಸ್ಥಾನದಲ್ಲಿದ್ದಾರೆ. ಇಂದು ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಬಾವುಟವನ್ನು ಹಾರಿಸಿದ್ದಾರೆ. ಹೀಗಿದ್ದರೂ ಇಂದಿಗೂ ಕೆಲವರು ಮಗನ ಆಸೆಗೆ ಬೀಳುತ್ತಾರೆ.

ಆಗ್ರಾದ ಠಾಣಾ ಎತ್ಮದ್ದೌಲದ ಪ್ರಕಾಶ್ ನಗರದ ನಿವಾಸಿ ಮನೋಜ್ ಕುಮಾರ್ ಅವರ ಪತ್ನಿ ಖುಷ್ಬೂ ಅವರನ್ನು ಕೆಲವು ದಿನಗಳ ಹಿಂದೆ ಆಗ್ರಾ ಟ್ರಾನ್ಸ್ ಯಮುನಾ ಕಾಲೋನಿ ರಾಂಬಾಗ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈಕೆ 3 ಹೆಣ್ಣು ಮತ್ತು 1 ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ ಮಹಿಳೆ ನರಕವನ್ನೇ ಅನುಭವಿಸಿದ್ದಾಳೆ. ಅವಧಿಪೂರ್ವ ಹೆರಿಗೆಯಿಂದಾಗಿ ಮಕ್ಕಳು ಪೂರ್ಣವಾಗಿ ಬೆಳವಣಿಗೆ ಹೊಂದಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Agra: Auto driver father of 7 children to desire of a male child

ಈ ಮಕ್ಕಳ ತಂದೆ ಮನೋಜ್ ಕುಮಾರ್ ಆಟೋ ಚಾಲಕ. ಹೆರಿಗೆ ನೋವಿನಿಂದ ಪತ್ನಿಯನ್ನು ಯಮುನಾಪರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮನೋಜ್ ತಿಳಿಸಿದ್ದಾರೆ. ಇಲ್ಲಿ ಅಲ್ಟ್ರಾಸೌಂಡ್ ಮಾಡಿದಾಗ, ವೈದ್ಯರು ಗರ್ಭದಲ್ಲಿ ನಾಲ್ಕು ಮಕ್ಕಳಿವೆ ಎಂದು ಹೇಳಿದರು. ಮನೋಜ್‌ಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದು, ಮತ್ತೆ ಮೂವರು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ. ಜೊತೆಗೆ ಗಂಡು ಮಗುವಿನ ಆಸೆ ಕೂಡ ಈಡೇರಿದೆ.

Agra: Auto driver father of 7 children to desire of a male child

Recommended Video

ಭಾರತ ತಂಡಕ್ಕೆ ಸವಾಲ್ ಹಾಕಿದ ಬೆನ್ ಸ್ಟ್ರೋಕ್ !! | *Cricket | Oneindia Kannada

ಮಾಧ್ಯಮ ವರದಿಗಳ ಪ್ರಕಾರ, ಆಸ್ಪತ್ರೆಯ ನಿರ್ದೇಶಕ ಮಹೇಶ್ ಚೌಧರಿ ಅವರು 10 ವರ್ಷಗಳಿಂದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ ಇಲ್ಲಿಯವರೆಗೆ ಅಂತಹ ಪವಾಡವನ್ನು ನೋಡಿಲ್ಲ. ಈ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ಕುಟುಂಬಕ್ಕೆ ಯಾವುದೇ ಆರ್ಥಿಕ ಸಹಾಯ ಬೇಕಾದರೆ ನೀಡಲು ಸಿದ್ಧ ಎಂದಿದ್ದಾರೆ. ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

English summary
Auto driver is the father of 7 children with the desire of a male child. case took place in Agra district of Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X