ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ್ರಾದ ಕೇಂದ್ರ ಕಾರಾಗೃಹದಲ್ಲಿ 10 ಕೈದಿಗಳಿಗೆ ಕೊರೊನಾ ಪಾಸಿಟಿವ್

|
Google Oneindia Kannada News

ಆಗ್ರಾ, ಮೇ 13: ಆಗ್ರಾದ ಕೇಂದ್ರ ಕಾರಾಗೃಹದಲ್ಲಿ ಹತ್ತು ಮಂದಿ ಕೈದಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಕಾರಗೃಹ) ಆನಂದ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Recommended Video

ಎಣ್ಣೆಗಾಗಿ ಬಾರ್ ಗಳ‌ ಮುಂದೆ ಕ್ಯೂ ನಿಂತ ಹುಡ್ಗೀರು..ಇವ್ರೆಲ್ಲಾ ನಮ್ಮವರಲ್ವಂತೆ | Liquor Shop

ಮೇ 6 ರಂದು 60 ವರ್ಷದ ಹಿರಿಯ ವ್ಯಕ್ತಿಗೆ ಕೊರೊನಾ ಸೋಂಕು ಖಚಿತವಾಗಿತ್ತು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಆ ವ್ಯಕ್ತಿಯನ್ನು ಎಸ್ ಎನ್ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿತ್ತು. ಶುಕ್ರವಾರ ಆತ ಮೃತಪಟ್ಟಿದ್ದಾನೆ.

ಅಮೆರಿಕಾ ಶ್ವೇತಭವನದಲ್ಲಿ ಮೂವರಿಗೆ ಕೊರೊನಾ ವೈರಸ್ ಪಾಸಿಟಿವ್! ಅಮೆರಿಕಾ ಶ್ವೇತಭವನದಲ್ಲಿ ಮೂವರಿಗೆ ಕೊರೊನಾ ವೈರಸ್ ಪಾಸಿಟಿವ್!

ಆತನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಅವರ ಪೈಕಿ 10 ಕೈದಿಗಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಿ.ಎನ್. ಸಿಂಗ್ ಮಾಹಿತಿ ನೀಡಿದ್ದಾರೆ.

10 Agra Central Jail Inmates Found Corona Positive

ಈ ಹಿನ್ನೆಲೆ ಜೈಲಿನಲ್ಲಿರುವ 1350 ಕೈದಿಗಳು ಹಾಗೂ 112 ಪೊಲೀಸ್ ಸಿಬ್ಬಂದಿಗಳನ್ನು ಕೊರೊನಾ ಪರೀಕ್ಷಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ಮತ್ತು ಹನ್ನೆರಡು ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮಾರ್ಚ್ 18 ರಂದು ಜೈಲಿಗೆ ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕುಟುಂಬಗಳೊಂದಿಗೆ ಕೈದಿಗಳ ಭೇಟಿಯನ್ನು ಸಹ ಸ್ಥಗಿತಗೊಳಿಸಲಾಗಿದೆ. ಆದರೂ, 60 ವರ್ಷದ ವ್ಯಕ್ತಿಗೆ ಮತ್ತು ಇತರ ಕೈದಿಗಳು ಹೇಗೆ ಸೋಂಕಿಗೆ ಒಳಗಾದರು ಎಂಬುದು ಜೈಲಿನ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ಈ ಪ್ರಕರಣದಲ್ಲಿ ವೈರಸ್‌ ಮೂಲಕ ಪತ್ತೆಹಚ್ಚುವುದು ಕಷ್ಟಕರವಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

English summary
An inmate of Agra Central Jail was tested positive for COVID19 on May 6. Now, 10 other inmates, who were in his close contact, have been found positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X