ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 3500 ಪೊಲೀಸರಿಗೆ ಇಬ್ಬರು ಹೆಂಡಿರು!

By Srinath
|
Google Oneindia Kannada News

3500-policemen-in-karnataka-have-two-wives
ಬೆಂಗಳೂರು, ಸೆ.11: ಇದೇನು ರಾಜ್ಯದಲ್ಲಿ ಪೊಲೀಸರ ಸೌಭಾಗ್ಯವೋ ಅಥವಾ ದೌರ್ಭಾಗ್ಯವೋ ಗೊತ್ತಿಲ್ಲ. ಆದರೂ 3500 ಮಂದಿ ಪೊಲೀಸರಿಗೆ ಇಬ್ಬಿಬ್ಬರು ಹೆಂಡಿರು ಇದ್ದಾರೆ.

ಇವರಲ್ಲಿ ಪೇದೆಗಳು, ಹಿರಿಯ ಅಧಿಕಾರಿಗಳು ಎಂಬ ಬೇಧಭಾವವೂ ಇಲ್ಲ! ಆದರೆ ರಾಜ್ಯದಲ್ಲಿ ಪೊಲೀಸರ ಬದುಕು ತುಂಬಾ ದು:ಸ್ಥರವಾಗಿದೆ. ಅವರಿಗೆ ಕಾಲಕಾಲಕ್ಕೆ ನಿದ್ರಾಹಾರಗಳೇ ಇರುವುದಿಲ್ಲ. ಸತತವಾಗಿ ದುಡಿಯಬೇಕು. ಕೊನೆಗೆ ಎಕ್ಸ್ಟ್ ಟ್ರಾ ಒಂದು ಜೊತೆ ಸಮವಸ್ತ್ರವೂ ಇರುವುದಿಲ್ಲ. ಅವರಿಗೆ ಸಂಬಳಗಳು ಸಾಕಾಗುವುದಿಲ್ಲ. ಇನ್ನು ರಜೆ ಎಂಬೋ ಮಾತೇ ಇಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತಿರುತ್ತವೆ.

ಆದರೆ ಈ ಎಲ್ಲಾ ಇಲ್ಲಾ ಗಳ ಮಧ್ಯೆ ಇದೇನಿದು 3,500 ಮಂದಿಗೆ ಈ ಪಾಟಿ ಎಕ್ಸ್ಟ್ ಟ್ರಾಗಳು. ಮೇಲಿನ 'ಇಲ್ಲಾ'ಗಳ ಪೈಕಿ ಅನೇಕವನ್ನು ಹೇಗೂ ನಿಭಾಯಿಸಬಹುದು. ಆದರೆ ಅವುಗಳ ಮಧ್ಯೆಯೂ ಪೊಲೀಸರು ಹೀಗೆ ಇಬ್ಬಿಬ್ಬರು ಹೆಂಡಿರನ್ನು ಅದು ಹೇಗೆ ನಿಭಾಯಿಸುತ್ತಿದ್ದಾರೋ. ಜತೆಗೆ, ಅವರು ಕೆಲಸವನ್ನೂ ನಿಭಾಯಿಸಬೇಕಾಗಿದೆ. ಅಥವಾ ನಿಭಾಯಿಸುತ್ತಿಲ್ಲವೋ ಎಂಬ ಅನುಮಾನಗಳ ಮಹಾಪೂರವೇ ಹರಿಯುತ್ತದೆ.

ಅಂದಹಾಗೆ, 1800 ಮಂದಿ ಪೇದೆಗಳು, 560 ಮುಖ್ಯ ಪೇದೆಗಳು, 180 ಮಂದಿ ಸಹಾಯಕ ಸಬ್ ಇನ್ಸ್ ಪೆಕ್ಟರುಗಳು, 175 ಸರ್ಕಲ್ ಇನ್ಸ್ ಪೆಕ್ಟರುಗಳು, 470 ಮಂದಿ ಪೊಲೀಸ್ ಇನ್ಸ್ ಪೆಕ್ಟರುಗಳು ಮತ್ತು 15 ಮಂದಿ ಡೆಪ್ಯುಟಿ ಎಸ್ಪಿಗಳು ಈ 'ಹೆಗ್ಗಳಿಕೆ'ಗೆ ಪಾತ್ರರಾಗಿದ್ದಾರೆ.

ಇದು ಕಾನೂನುಬದ್ಧವೋ ಎಂಬುದನ್ನು ಇಲಾಖೆಯೇ ಸ್ಪಷ್ಟಪಡಿಸಿಬೇಕು. ಏಕೆಂದರೆ ಸರಕಾರಿ ನೌಕರರು ಕಾನೂನು ಪ್ರಕಾರ ಎರಡೆರಡು ಮದುವೆ ಆಗುವಂತಿಲ್ಲ. ಹಾಗಂತ ಈ 3,500 ಮಂದಿ ಪೊಲೀಸರದ್ದು ವಿವಾಹೇತರ ಸಂಬಂಧವಾ? ಅದನ್ನು ಅವರವರೆ ಹೇಳಬೇಕು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಹೊತ್ತ ಪೊಲೀಸರೇ ಹೀಗೆ ಬೇಲಿ ಹಾರಿರುವಾಗ ಕಡಿವಾಣ ಹಾಕುವುದಾದರೂ ಎಂತು?

English summary
3,500 policemen in Karnataka state have two wives. Altogether there are around 3,500 policemen in the state with two wives. "Among them, 1,800 are constables, 560 head constables, 175 circle inspectors, 470 police inspectors, 15 DySPs and 180 assistant sub-inspectors. By the way, having two wives is against the law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X