ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲಕ್ಕುರುಳಿದ ಐತಿಹಾಸಿಕ ವಿದುರಾಶ್ವತ್ಥ ಮರ

|
Google Oneindia Kannada News

Vidurashwatha
ಚಿಕ್ಕಬಳ್ಳಾಪುರ, ಸೆ.11 : ಗೌರಿಬಿದನೂರು ತಾಲೂಕಿನ ಐತಿಹಾಸ ಪ್ರಸಿದ್ಧ ವಿದುರಾಶ್ವತ್ಥ ಮರ ಧರೆಗುರುಳಿದೆ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣ ಬುಧವಾರ ಬೆಳಗ್ಗೆ ಮರ ನೆಲಕ್ಕುರುಳಿದೆ.

ಗೌರಿ ಬಿದನೂರು ನಗರದಿಂದ ಸುಮಾರು 9 ಕಿ.ಮೀ. ದೂರದಲ್ಲಿ ವಿದುರಾಶ್ವಥ ಕ್ಷೇತ್ರವಿದೆ. ಇಲ್ಲಿ ವಿದುರಾಶ್ವಥ ನಾರಾಯಣ ಸ್ವಾಮಿ ದೇವಸ್ಥಾನವಿದ್ದು, ಇದೊಂದು ಪುಣ್ಯ ಸ್ಥಳವಾಗಿದೆ. ಇಲ್ಲಿನ ವಿದುರ ಮರ ಬುಧವಾರ ಬೆಳಗ್ಗೆ ಭಾರೀ ಮಳೆಯ ಕಾರಣ ಧರೆಗೆ ಉರುಳಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆಸುರಿಯುತ್ತಿದೆ. ಮಂಗಳವಾರ ರಾತ್ರಿಯೂ ಗೌರಿಬಿದನೂರಿನಲ್ಲಿ 5 ಸೆಂ.ಮೀ.ಮಳೆ ಸುರಿದಿತ್ತು. ಇದರಿಂದಾಗಿ ಐತಿಹಾಸಿಕ ಮರ ಧರೆಗುರುಳಿದೆ.

ಪುರಾಣದಂತೆ ವಿದುರ ದೃತರಾಷ್ಟ್ರನ ತಮ್ಮ. ಕೌರವರಿಗೆ ರಾಜ್ಯಭಾರ ಮಾಡಲು ಅವರು ಸಹಾಯ ಮಾಡುತ್ತಿದ್ದರಂತೆ. ಕೌರವರ ದುಷ್ಟ ಬುದ್ದಿಗೆ ಬೇಸತ್ತು, ಮೈತ್ರೆಯೀ ಮುನಿಯ ಆಶ್ರಮಕ್ಕೆ ಬಂದ ವಿದುರ ಅಲ್ಲಿ ವಾಸಿಸುತ್ತಿದ್ದನಂತೆ.

ಋಷಿವರ್ಯರು ವಿದುರನಿಗೆ ಆಶ್ರಮದಲ್ಲಿ ಅಶ್ವಥ ಮರ ನೆಟ್ಟು, ಅದನ್ನು ಬೆಳೆಸಬೇಕೆಂದು ತಿಳಿಸಿ ದೇಶ ಪರ್ಯಟನೆಗೆ ಹೊರಟರಂತೆ. ವಿದುರನು ಆಶ್ವತ ಮರವನ್ನು ಮತ್ತು ಆ ಪ್ರದೇಶ ವನ್ನು ನೋಡಿಕೊಂಡದ್ದರಿಂದ ಈ ಸ್ಥಳ ವಿದುರಾಶ್ವಥ ಎಂದೇ ಪ್ರಸಿದ್ದವಾಗಿದೆ.

ವಿದುರಾಶ್ವತ್ಥವು ದಕ್ಷಿಣ ಭಾರತದ ಜಲಿಯಾನ್ ವಾಲಾ ಬಾಗ್ ಎಂದೂ ಪ್ರಸಿದ್ಧವಾಗಿದೆ. 1938ರಲ್ಲಿ ಹಲವಾರು ಪ್ರತಿಭಟನಾಕಾರರು ಬ್ರಿಟಿಷರ ಗುಂಡೇಟಿಗೆ ಈ ಸ್ಥಳದಲ್ಲಿ ಬಲಿಯಾಗಿದ್ದರು. ಮರದ ಪಕ್ಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮರ "ಶಿಲಾ ಸ್ಮಾರಕ" ಹಾಗೂ "ವೀರ ಸೌಧ"ಗಳಿವೆ.

English summary
Historic Vidurashwatha tree of Gauribidanur taluk of Chikkaballapur district falls on falls on due to rain. on Wednesday, September 11 tree falls downed. heavy rain reported at Chikkaballapur district from Two days. 5 cm rain reported at Gauribidanur taluk on September 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X