ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕರರ ಪ್ರತಿಭಟನೆಗೆ ಮಣಿದ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಸೆ.11 : ವೋಲ್ವೋ ಬಸ್ ನೌಕರರ ಪ್ರತಿಭಟನೆಗೆ ಮಣಿದಿರುವ ಬಿಎಂಟಿಸಿ ಅವರ ಬೇಡಿಕೆಗಳನ್ನು ಈಡೇರಿಲಸಲು ಮುಂದಾಗಿದೆ. ಮೊದಲ ಹಂತದಲ್ಲಿ ಮೆಜೆಸ್ಟಿಕ್ ಮತ್ತು ಕಾಡುಗೋಡಿ ನಡುವೆ ಬಸ್ ಸಂಚರಿಸುವ ಸಮಯಾವಕಾಶ ತಿಳಿಯಲು ಸಮೀಕ್ಷೆ ನಡೆಸಲು ಮುಂದಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಮೆಜೆಸ್ಟಿಕ್ ನಿಂದ ಕಾಡುಗೋಡಿಗೆ 355 ನಂಬರ್ ವೋಲ್ವೋ ಸಂಚರಿಸುತ್ತದೆ. ಈ ಮಾರ್ಗದ ವೈಜ್ಞಾನಿಕ ಸಮೀಕ್ಷೆ ನಡೆಸಲಾಗುವುದು ಎಂದರು.

Volvo

ಮೆಜೆಸ್ಟಿಕ್ ನಿಂದ ಕಾಡುಗೋಡಿಗೆ ಬಸ್ ಹೋಗಿ ಬರಲು ಎಷ್ಟು ಸಮಯ ಬೇಕಾಗುತ್ತದೆ ಎಂದು ಸಮೀಕ್ಷೆಯಿಂದ ತಿಳಿಯಲಿದೆ. ಬೆಳಗ್ಗೆ, ರಾತ್ರಿ ಹೀಗೆ ವಿವಿಧ ಕಾಲಮಾನದಲ್ಲಿ ಸಮೀಕ್ಷೆ ನಡೆಸಿ ವರದಿ ತಯಾರಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಮಾರ್ಗದಲ್ಲಿ 96 ವಜ್ರ ಬಸ್ ಗಳು ಸಂಚರಿಸುತ್ತವೆ. ಟ್ರಾಫಿಕ್ ಕಂಟ್ರೋಲ್ ಕಾರ್ಪೋರೇಷನ್ ನಿಂದ ಸಮೀಕ್ಷೆ ನಡೆಸಲಾಗುವುದು ಎಂದರು. ಸದ್ಯ ಚಾಲಕರು 12 ಗಂಟೆಯಲ್ಲಿ ಈ ಮಾರ್ಗದಲ್ಲಿ 8 ಟ್ರಿಪ್ ಗಳನ್ನು ಮುಗಿಸಲು ಸಾಧ್ಯವಾಗುತ್ತಿಲ್ಲ. (ಸಿಬ್ಬಂದಿ ಪ್ರತಿಭಟನೆ, ವೋಲ್ವೋ ಬಸ್ ಸಂಚಾರವಿಲ್ಲ)

ಸಮೀಕ್ಷೆಯ ವರದಿ ಆಧರಿಸಿ ಮಾರ್ಗದಲ್ಲಿ ಸಂಚರಿಸುವ ಬಸ್ ಸಮಯಗಳನ್ನು ಪರಿಷ್ಕರಿಸಲಾಗುವುದು ಎಂದು ತಿಳಿಸಿದರು. ನಿಗದಿ ಪಡಿಸಿದ ಟ್ರಿಪ್ ಗಿಂತ ಹೆಚ್ಚಿನ ಕೆಲಸ ಮಾಡಿ ಎಂದು ಚಾಲಕರಿಗೆ ಸಂಸ್ಥೆ ಯಾವುದೇ ಒತ್ತಡ ಹಾಕುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

12 ಗಂಟೆಗಳ ನಿಗದಿತ ಅವಧಿಯಲ್ಲಿ ಕೆಲವು ಚಾಲಕರು 8 ಟ್ರಿಪ್ ಮುಗಿಸುತ್ತಿದ್ದಾರೆ. ಕೆಲವರು 7 ಮತ್ತು 6 ಟ್ರಿಪ್ ಗಳನ್ನು ಮಾತ್ರ ಮುಗಿಸಲು ಸಾಧ್ಯವಾಗುತ್ತಿದೆ. ಆದ್ದರಿಂದ ಸಮೀಕ್ಷೆ ನಡೆಸಿ ಕಾಲಮಿತಿಯನ್ನು ಪರಿಷ್ಕರಣೆ ಮಾಡಲಾಗುವುದು ಎಂದರು.

ಸಾಮಾನ್ಯ ಪಾಳಿಯಲ್ಲಿ ಕೆಲಸ ಮಾಡುವ ಚಾಲಕರು ಎರಡು ಪೀಕ್ ಆವರ್ಸ್ ಎದುರಿಸಬೇಕಾಗುತ್ತದೆ. ಆದ್ದರಿಂದ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಆದ್ದರಿಂದ ಬಿಎಂಟಿಸಿ ಮೂರು ಶಿಫ್ಟ್ ಗಳನ್ನು ಪರಿಚಯಿಸಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

English summary
The Bangalore Metropolitan Transport Corporation (BMTC) has decided to conduct a physical survey of the time taken by its Vajra (Volvo) services between Kempegowda Bus station (KBS) and Kadugodi from Wednesday in the wake of Tuesday’s snap protest by the Vajra crew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X