ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸಂಜಾತ ಪಾಕಿಸ್ತಾನದ ರಾಷ್ಟ್ರಪತಿ

By Mahesh
|
Google Oneindia Kannada News

ಇಸ್ಲಾಮಾಬಾದ್, ಸೆ.10: ಭಾರತದ ಆಗ್ರಾ ಸಂಜಾತ ಮಮ್ನೂನ್ ಹುಸೇನ್ ಪಾಕಿಸ್ತಾನದ 12ನೇ ರಾಷ್ಟ್ರಾಧ್ಯಕ್ಷರಾಗಿ ಸೋಮವಾರ ಮುಖ್ಯ ನ್ಯಾಯಾಧೀಶ ಇಫ್ತಿಕಾರ್ ಮಹಮದ್ ಚೌಧುರಿ ಅವರಿಂದ ಪ್ರಮಾಣವಚನ ಸ್ವೀಕರಿಸಿ ಅಧಿಕಾರವಹಿಸಿಕೊಂಡಿದ್ದಾರೆ.

ಪಾಕಿಸ್ತಾನದ ಇತಿಹಾಸದಲ್ಲಿಎ ಮೊದಲ ಚುನಾಯಿತ ಅಧ್ಯಕ್ಷ ಹಾಗೂ ಪೂರ್ಣಾವಧಿ ಪೂರೈಸಿದ ಮೊದಲ ಮತ್ತು ಏಕೈಕ ರಾಷ್ಟ್ರಪತಿ ಎಂಬ ಹೆಗ್ಗಳಿಕೆಯೊಂದಿಗೆ ಅಸಿಫ್ ಅಲಿ ಜರ್ದಾರಿ ಅವರು ಭಾನುವಾರ ಅವರ ಅಧಿಕಾರಾವಧಿ ಪೂರ್ಣಗೊಳಿಸಿದ್ದರು.

73ರ ಹರೆಯದ ಹುಸೇನ್ 1940ರಲ್ಲಿ ಆಗ್ರಾದಲ್ಲಿ ಜನಿಸಿದ್ದು, ಈ ಹಿಂದೆ ಸಿಂಧ್ ನ ಗವರ್ನರ್ ಆಗಿದ್ದರು. ಕರಾಚಿ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿಯ ಮುಖ್ಯಸ್ಥರೂ ಆಗಿದ್ದರು. ಪ್ರಧಾನಿ ನವಾಜ್ ಶರೀಫ್ ಅವರ ಆಪ್ತರಲ್ಲೊಬ್ಬರಾಗಿರುವ ಅವರಿಗೆ ಜವಳಿ ಉದ್ಯಮವೂ ಇದೆ. ದೇಶ ವಿಭಜನೆಯಾದ 2 ವರ್ಷಗಳ ಬಳಿಕ ಅವರ ಕುಟುಂಬವು ಭಾರತ ತೊರೆದು ಕರಾಚಿಯಲ್ಲಿ ನೆಲೆಸಿತ್ತು.

Mamnoon Hussain Pakistan's new president

ಜರ್ದಾರಿ ಅವರಿಗೆ ಗೌರವ ರಕ್ಷೆ ನೀಡಲಾಯಿತು. ಆದರೆ ಪ್ರಧಾನಿಯಾಗಲಿಅಥವಾ ಸೇನೆಯ ಮುಖ್ಯಸ್ಥರಾಗಲಿ ಈ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂಬುದು ಗಮನಾರ್ಹ.

ಏಕಕಾಲದಲ್ಲಿ ಎರಡು ಪದವಿಗಳನ್ನು ಹೊಂದಿರುವುದು, ರಾಷ್ಟ್ರಪತಿ ಭವನವನ್ನು ಪಕ್ಷ ರಾಜಕಾರಣಕ್ಕೆ ಬಳಸಿದ್ದು ಸೇರಿದಂತೆ ಜರ್ದಾರಿ ಅವರ ಹಲವು ನಡೆಗಳು ಟೀಕೆಗೆ ಗುರಿಯಾಗಿದ್ದವು. ಭ್ರಷ್ಟಾಚಾರದ ಆರೋಪವೂ ಅವರ ಮೇಲಿತ್ತು.

ಪಾಕಿಸ್ತಾನದ ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಹಾಗೂ ಹಾಲಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯ ಪುತ್ರ ಬಿಲಾವಲ್ ಭುಟ್ಟೋ ಮತ್ತು ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ನಡುವಿನ ಅನೈತಿಕ ಪ್ರೇಮ ಪ್ರಕರಣದಿಂದ ಜರ್ದಾರಿ ಭಾರಿ ಮುಖಭಂಗ ಅನುಭವಿಸಿದ್ದರು.

ಹುಸೇನ್: ಬ್ರಿಟಿಷ್ ಆಳ್ವಿಕೆಯ ಇಂಡಿಯಾದಲ್ಲಿ ಆಗ್ರಾದಲ್ಲಿ ಶೂ ಟ್ರೇಡರ್ಸ್ ಆಗಿ ಹುಸೇನ್ ಅವರ ಕುಟುಂಬ ನೆಲೆಸಿತ್ತು. ದೇಶ ವಿಭಜನೆ ನಂತರ 1949ರಲ್ಲಿ ಇವರ ಕುಟುಂಬ ಕರಾಚಿಗೆ ಬಂದು ನೆಲೆಸಿತು.

ಕರಾಚಿಯಲ್ಲಿ 60ರ ದಶಕದಲ್ಲಿ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಪದವಿ ಪಡೆದ ಹುಸೇನ್ ಅವರು1999ರಲ್ಲಿ ಸಿಂಧ್ ಪ್ರಾಂತ್ಯದ ರಾಜ್ಯಪಾಲರಾಗಿದ್ದರು. ನವಾಜ್ ಷರೀಫ್ ಅವರ ಆಪ್ತರಾಗಿರುವ ಹುಸೇನ್ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 432 ಮತಗಳನ್ನು ಪಡೆದಿದ್ದರು. ಇವರ ಪ್ರತಿ ಸ್ಪರ್ಧಿ ವಾಜಿಹುದ್ದೀನ್ ಅಹ್ಮದ್ ಗೆ ಕೇವಲ 7 ಮತಗಳು ಸಿಕ್ಕಿತ್ತು.

English summary
Mamnoon Hussain was sworn in Monday as Pakistan's new president, replacing Asif Ali Zardari, who becomes the nation's first democratically elected president to complete a full term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X