ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಬಲ್ ನಲ್ಲಿ 21 ಡಿಡಿ ಚಾನೆಲ್ ಪ್ರಸಾರ ಕಡ್ಡಾಯ!

|
Google Oneindia Kannada News

Doordarshan
ನವದೆಹಲಿ, ಸೆ.10: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇನ್ನು ಮುಂದೆ ಕೇಬಲ್ ಟಿವಿ ಆಪರೇಟರ್ ಗಳು ಕಡ್ಡಾಯವಾಗಿ 24 ಡಿಡಿ ಚಾನೆಲ್‌ಗಳನ್ನು ಪ್ರಸಾರ ಮಾಡಬೇಕಾಗಿದೆ. ಕೇಬಲ್ ಟಿವಿ ಡಿಜಿಟಲೀಕರಣಗೊಂಡ ನಗರಗಳಿಗೆ ಈ ನಿಯಮ ಕಡ್ಡಾಯವಾಗಿ ಅನ್ವಯವಾಗಲಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರು ಸೇರಿದಂತೆ ಕೇಬಲ್ ಟಿವಿ ಡಿಜಿಟಲೀಕರಣಗೊಂಡ 40 ನಗರಗಳಲ್ಲಿ, ಕಡ್ಡಾಯವಾಗಿ 24 ದೂರದರ್ಶನ ಚಾನೆಲ್‌ಗಳನ್ನು ಗ್ರಾಹಕರಿಗೆ ಒದಗಿಸುವಂತೆ ಆದೇಶಿದೆ.

ಕೇಬಲ್ ಟಿವಿ ಡಿಜಿಟಲೀಕರಣದಿಂದಾಗಿ ಕೇಬಲ್ ನೆಟ್‌ವರ್ಕ್‌ಗಳ ಚಾನೆಲ್ ಪ್ರಸಾರ ಸಾಮರ್ಥ್ಯ ಹೆಚ್ಚಾಗಿದೆ. ಆದ್ದರಿಂದ 21 ಡಿಡಿ ಚಾನೆಲ್‌ಗಳ ಜತೆಗೆ ಲೋಕಸಭೆ ಟಿವಿ, ರಾಜ್ಯಸಭೆ ಟಿವಿ, ಜ್ಞಾನದರ್ಶನವನ್ನು ಪ್ರಸಾರ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿಲಾಗಿದೆ.

ಮೊದಲು ಕೇವಲ 8 ಡಿಡಿ ಚಾನೆಲ್ ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕೆಂಬ ನಿಯಮವಿತ್ತು. ಸದ್ಯ ನಾಲ್ಕು ಮೆಟ್ರೋ ನಗರಗಳ ಜೊತೆಗೆ 36 ಇತರೆ ನಗರಗಳಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ನಗರಗಳಿಗೆ ಈ ನಿಯಮ ಅನ್ವಯವಾಗಲಿದೆ.

ನೂತನ ಅದೇಶದಿಂದಾಗಿ ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಭಾರತಿ, ಡಿಡಿ ಉರ್ದು, ಡಿಡಿ ಸ್ಟೋರ್ಟ್ಸ್, ಡಿಡಿ ಇಂಡಿಯಾ, ಡಿಡಿ ಕಾಶ್ಮೀರಿ, ಡಿಡಿ ಪಂಜಾಬಿ, ಡಿಡಿ ಸಹ್ಯಾದ್ರಿ, ಡಿಡಿ ಸಪ್ತಗಿರಿ, ಡಿಡಿ ಮಲೆಯಾಳಂ, ಡಿಡಿ ಚಂದನ, ರಾಜ್ಯಸಭೆ, ಲೋಕಸಭೆ ಮತ್ತು ಜ್ಞಾನ ದರ್ಶನ ಮುಂತಾದ ಚಾಲನೆಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕಾಗಿದೆ.

ಇತರ ಖಾಸಗೀ ಚಾನೆಲ್ ಗಳಂತೆ ಡಿಡಿಯ ಎಲ್ಲಾ ಚಾನೆಲ್ ಗಳು ಗ್ರಾಹಕರಿಗೆ ಒಟ್ಟಿಗೆ ದೊರಕುವಂತಿರಬೇಕು. ಯಾವುದೇ ಕಾರಣಕ್ಕೂ ಈ ಅಧಿಸೂಚನೆಯನ್ನು ಕೇಬಲ್ ಆಪರೇಟರ್ ಗಳು ಉಲ್ಲಂಘಿಸಬಾರದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

English summary
Cable TV operators in more than 40 major cities will now have to mandatory show 21 Doordarshan and three other channels to their consumers. Information and Broadcasting ministry has issued a notification as per which cable operators must show the 24 channels to all their subscribers in cities where digitization has been implemented.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X