ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸ್ನೇಹಿ ಗಣಪ ಸಂದೇಶ ಸಾರಿದ ರಾಷ್ಟ್ರಪತಿ

|
Google Oneindia Kannada News

ಪುರಿ, ಸೆ.8 : ದೇಶದ ಎಲ್ಲಾ ಜನರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುವಂತೆ ಕರೆ ನೀಡಿದ್ದಾರೆ. ಈ ಮೂಲಕ ಗೋ ಗ್ರೀನ್ ಅಭಿಯಾನಕ್ಕೆ ತಮ್ಮ ಬೆಂಬಲ ನೀಡಿದ್ದಾರೆ.

ಎರಡು ದಿನಗಳ ಒಡಿಶಾ ಪ್ರವಾಸಲ್ಲಿರುವ ಪ್ರಣಬ್ ಮುಖರ್ಜಿ, ಪುರಿ ಸಮುದ್ರ ತೀರದಲ್ಲಿ ಶನಿವಾರ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ ಪಟ್ನಾಯಕ್ ಅವರು ರಚಿಸಿರುವ ಗೋ ಗ್ರೀನ್ ಅಭಿಯಾನದ ಸಂದೇಶ ಸಾರುವ ಗಣಪತಿ ಕಲಾಕೃತಿಗಳನ್ನು ವೀಕ್ಷಿಸಿದರು.

ಕಳೆದ ತಿಂಗಳು ದೆಹಲಿಗೆ ಭೇಟಿ ನೀಡಿದ್ದ ಸುದರ್ಶನ ಪಟ್ನಾಯಕ್, ಪುರಿ ಕಡಲ ತೀರಕ್ಕೆ ಆಗಮಿಸಿ ತಾವು ರಚಿಸಿರುವ ಗಣೇಶ ಕಲಾಕೃತಿಗಳನ್ನು ವೀಕ್ಷಿಸಿ, ಗೋ ಗ್ರೀನ್ ಗಣೇಶ ಅಭಿಯಾನಕ್ಕೆ ಬೆಂಬಲ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದರು.

ಪರಿಸರ ಸ್ನೇಹಿ ಅಭಿಯಾನಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದ್ದ ಪ್ರಣಬ್ ಮುಖರ್ಜಿ ಶನಿವಾರ, ಕಡಲ ತೀರಕ್ಕೆ ಭೇಟಿ ನೀಡಿ ಗಣೇಶ ಕಲಾಕೃತಿಗಳನ್ನು ವೀಕ್ಷಿಸಿ, ದೇಶದ ಜನರಿಗೆ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದರು. ಚಿತ್ರಗಳಲ್ಲಿ ನೋಡಿ ರಾಷ್ಟ್ರಪತಿ ಭೇಟಿ...

ಸಂದೇಶ ಸಾರುವ ಗಣಪ

ಸಂದೇಶ ಸಾರುವ ಗಣಪ

ಸುದರ್ಶನ್ ಪಟ್ನಾಯಕ್ ಗೋ ಗ್ರೀನ್ ಎಂಬ ಸಂದೇಶ ಸಾರುವ ಬೃಹತ್ ಗಣಪನ ಕಲಾಕೃತಿಯನ್ನು ಪುರಿ ಕಡಲ ಕೀನಾರೆಯಲ್ಲಿ ನಿರ್ಮಿಸಿದ್ದರು. ಎಲ್ಲರೂ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಎಂದು ಮಾಹಿತಿ ನೀಡುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಪರಿಸರ ಸ್ನೇಹಿ ಗಣಪನಿಗೆ ರಾಷ್ಟಪತಿ ಬೆಂಬಲ

ಪರಿಸರ ಸ್ನೇಹಿ ಗಣಪನಿಗೆ ರಾಷ್ಟಪತಿ ಬೆಂಬಲ

ಸುದರ್ಶನ ಪಟ್ನಾಯಕ್ ಅವರ ಕಲಾಕೃತಿ ವೀಕ್ಷಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜನರು ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪನೆ ಮಾಡಿ, ಪರಿಸರ ಸಂಭ್ರಕ್ಷಣೆಗೆ ಸಹಕರಿಸಬೇಕೆಂದು ಜನರಿಗೆ ಕರೆ ನೀಡಿದರು.

100ಟನ್ ಮರಳು

100ಟನ್ ಮರಳು

ಗೋ ಗ್ರೀನ್ ಸಂದೇಶ ಸಾರುವ ಕಲಾಕೃತಿ ನಿರ್ಮಿಸಲು ಪಟ್ನಾಯಕ್, 100 ಟನ್ ಮರಳನ್ನು ಬಳಸಿದ್ದಾರೆ. 10 ಗಂಟೆಗಳ ಕಾಲ ತೆಗೆದುಕೊಂಡಿದ್ದಾರೆ. ಪಟ್ನಾಯಕ್ ಅವರ ವಿದ್ಯಾರ್ಥಿಗಳು ಗಣೇಶ ನಿರ್ಮಿಸಲುವಲ್ಲಿ ಅವರಿಗೆ ಸಹಕಾರ ನೀಡಿದ್ದರು.

ಮರಳು ಶಿಲ್ಪಗಳ ಮಾಹಿತಿ ನೀಡಿಕೆ

ಮರಳು ಶಿಲ್ಪಗಳ ಮಾಹಿತಿ ನೀಡಿಕೆ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿಯ ವೇಳೆ ಪಟ್ನಾಯಕ್ ಅವರಿಗೆ ಮರಳು ಶಿಲ್ಪಗಳ ಕುರಿತು ಮಾಹಿತಿ ನೀಡಿದರು. 14 ನೇ ಶತಮಾನದಲ್ಲಿ ಪುರಿ ಜಗನ್ನಾಥ್ ಸ್ವಾಮಿಯ ಭಕ್ತರು, ಕವಿಗಳು ಆಗಿದ್ದ ಬಾಲರಾಮ್ ದಾಸ್ ಮರಳು ಶಿಲ್ಪಗಳ ಪ್ರವರ್ತಕ ಎಂದು ಮಾಹಿತಿ ನೀಡಿದರು.

ರಾಷ್ಟ್ರಪತಿಗೆ ಗಣಪತಿ ಉಡುಗೊರೆ

ರಾಷ್ಟ್ರಪತಿಗೆ ಗಣಪತಿ ಉಡುಗೊರೆ

ಪ್ರಣಬ್ ಮುಖರ್ಜಿ ಅವರಿಗೆ ಪಟ್ನಾಯಕ್ ಮರಳು ಶಿಲ್ಪದ ಗಣೇಶನ ಚಿತ್ರವನ್ನು ಉಡುಗೊರೆಯಾಗಿ ನೀಡಿದರು.

ಸುದರ್ಶನ್ ಆಹ್ವಾನಿಸಿದ್ದರು

ಸುದರ್ಶನ್ ಆಹ್ವಾನಿಸಿದ್ದರು

ಕಳೆದ ತಿಂಗಳು ದೆಹಲಿಗೆ ಭೇಟಿ ನೀಡಿದ್ದ ಸುದರ್ಶನ ಪಟ್ನಾಯಕ್, ಪುರಿ ಕಡಲ ತೀರಕ್ಕೆ ಆಗಮಿಸಿ ತಾವು ರಚಿಸಿರುವ ಗಣೇಶ ಕಲಾಕೃತಿಗಳನ್ನು ವೀಕ್ಷಿಸಿ, ಗೋ ಗ್ರೀನ್ ಗಣೇಶ ಅಭಿಯಾನಕ್ಕೆ ಬೆಂಬಲ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದರು.

ಒಡಿಶಾ ಪ್ರವಾಸದಲ್ಲಿ ರಾಷ್ಟ್ರಪತಿ

ಒಡಿಶಾ ಪ್ರವಾಸದಲ್ಲಿ ರಾಷ್ಟ್ರಪತಿ

ಎರಡು ದಿನಗಳ ಒಡಿಶಾ ಪ್ರವಾಸಲ್ಲಿರುವ ಪ್ರಣಬ್ ಮುಖರ್ಜಿ, ಪುರಿ ಸಮುದ್ರ ತೀರದಲ್ಲಿ ಶನಿವಾರ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ ಪಟ್ನಾಯಕ್ ಅವರು ರಚಿಸಿರುವ ಗೋ ಗ್ರೀನ್ ಅಭಿಯಾನದ ಸಂದೇಶ ಸಾರುವ ಗಣಪತಿ ಕಲಾಕೃತಿಗಳನ್ನು ವೀಕ್ಷಿಸಿದರು.

ಶುಭಾಶಯದೊಂದಿಗೆ ಸಂದೇಶ

ಶುಭಾಶಯದೊಂದಿಗೆ ಸಂದೇಶ

ದೇಶದ ಎಲ್ಲಾ ಜನರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುವಂತೆ ಕರೆ ನೀಡಿದ್ದಾರೆ. ಈ ಮೂಲಕ ಗೋ ಗ್ರೀನ್ ಅಭಿಯಾನಕ್ಕೆ ತಮ್ಮ ಬೆಂಬಲ ನೀಡಿದ್ದಾರೆ.

English summary
President Pranab Mukherjee praised a massive sand sculpture of Lord Ganesh made by eminent sand artist Sudarsan Pattnaik on the Puri beach on Saturday, September 07. President Pranab Mukherjee is on a two-day visit to Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X