ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತರ ಜತೆ ಸೆಕ್ಸ್ ಪ್ರಕರಣ, ಪೋಪ್ ಮೌನ?

By Mahesh
|
Google Oneindia Kannada News

Pope’s secrecy over new child sex scandal condemned
ವ್ಯಾಟಿಕನ್ ಸಿಟಿ, ಸೆ. 6: ಮಕ್ಕಳೊಂದಿಗೆ ಲೈಂಗಿಕತೆ ಹೊಂದುವ ಕ್ರೈಸ್ತ ಧಾರ್ಮಿಕ ಗುರುಗಳ ವಿಷಯದಲ್ಲಿ ಪೋಪ್ ಫ್ರಾನ್ಸಿಸ್ ಅವರು ಪ್ರಾಮಾಣಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಸಂತ್ರಸ್ತ ಗುಂಪುಗಳು ಆರೋಪಿಸಿವೆ.

ಮಕ್ಕಳೊಂದಿಗೆ ಲೈಂಗಿಕತೆ ಹೊಂದಿದ ಆರೋಪದಲ್ಲಿ ವ್ಯಾಟಿಕನ್ ನ ಡಾಮಿನಿಕ್ ರಿಪಬ್ಲಿಕ್ ರಾಯಭಾರಿಯನ್ನು ಪೋಪ್ ವಜಾಗೊಳಿಸಿದ ಬಳಿಕ ಈ ರೀತಿ ಟೀಕೆಗಳು ವ್ಯಕ್ತವಾಗಿವೆ.

'ತನ್ನ ಎಲ್ಲ ಪೂರ್ವಾಧಿಕಾರಿಗಳಂತೆ ಪೋಪ್ ಫ್ರಾನ್ಸಿಸ್ ತಡವಾಗಿ, ರಹಸ್ಯವಾಗಿ ಹಾಗೂ ನಿರ್ಲಕ್ಷದಿಂದ ಕ್ರಮ ತೆಗೆದುಕೊಳ್ಳುತ್ತಾರೆ' ಎಂದು ಅಮೆರಿಕದ 'ಧಾರ್ಮಿಕ ಗುರುಗಳಿಂದ ಶೋಷಣೆಗೊಳಗಾದವರ ಸಂತ್ರಸ್ತ ಸಂಘ'ದ ನಿರ್ದೇಶಕಿ ಬಾರ್ಬರಾ ಡೋರಿಸ್ ಹೇಳಿದರು.

'ಮಾಧ್ಯಮ ಒತ್ತಡ ಬಂದಾಗ ಮಾತ್ರ ಕ್ಯಾಥಲಿಕ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಾರೆ'' ಎಂದು ಆಕೆ ಹೇಳಿಕೆಯೊಂದರಲ್ಲಿ ಆರೋಪಿಸಿದ್ದಾರೆ. 'ಅವರು ಕ್ರಮ ತೆಗೆದುಕೊಳ್ಳುವಾಗ ರಹಸ್ಯ ಕಾಯ್ದುಕೊಳ್ಳುತ್ತಾರೆ. ಈ ಪ್ರಕರಣದಲ್ಲೂ ಆರೋಪಗಳು, ಅಮಾನತು ಅಥವಾ ಅಮಾನತಿಗೆ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲ'' ಎಂದು ಬಾರ್ಬರಾ ಡೋರಿಸ್ ಹೇಳಿದ್ದಾರೆ.

ಕಳೆದ ಆಗಸ್ಟ್ 21 ರಂದು ಸ್ಯಾನ್ ಡೋಮನಿಕೋದ ಜೊಸೆಫ್ ವೆಸೊಲೊವೊಸ್ಕಿ ಅವರನ್ನು ಗುಪ್ತವಾಗಿ ಅಮಾನತುಗೊಳಿಸಲಾಗಿತ್ತು. ವ್ಯಾಟಿಕನ್ ಅನೇಕ ನಿರ್ಣಯಗಳನ್ನು ಬಹಿರಂಗಗೊಳಿಸಲು ಹೆದರುತ್ತಿದೆ. ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವ್ಯಾಟಿಕನ್ ನ ವಕ್ತಾರ ಫೆಡೆರಿಕೋ ಲೊಮ್ಬಾರ್ಡಿ,ಧರ್ಮ ರಾಯಭಾರಿಗಳು ಲೈಂಗಿಕ ಶೋಷಣೆ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇತ್ತೀಚಿಗೆ ಅಮಾನತು ಮಾಡಿದ ಅಧಿಕಾರಿಗಳಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

ಪೋಪ್ ಬೆನೆಡಿಕ್ಟ್ XVI ಅವರ ಉತ್ತರಾಧಿಕಾರಿಯಾಗಿ ಅರ್ಜೆಂಟಿನಾದ ಜಾರ್ಗ್ ಮಾರಿಯೊ ಬೆರ್ಗೋಗ್ಲಿಯೋ (76) ಅವರು ಮಾ. 13,2013ರ ರಾತ್ರಿ ಆಯ್ಕೆಯಾಗಿದ್ದರು. ವ್ಯಾಟಿಕನ್ ಸಿಟಿಯಲ್ಲಿ ನೆರೆದಿದ್ದ ಸಹಸ್ರಾರು ಕ್ರೈಸ್ತರು ಮತ್ತು ವಿಶ್ವದಾದ್ಯಂತ ಇರುವ ಕ್ರೈಸ್ತ ಧರ್ಮೀಯರು 266ನೇ ಧರ್ಮಗುರುವನ್ನು ಸ್ವಾಗತಿಸಿದ್ದರು.

ಸಲಿಂಗಿಗಳ ಮದುವೆ, ಗರ್ಭಪಾತ ಮತ್ತು ಗರ್ಭನಿರೋಧಕ ಬಳಕೆಯನ್ನು ತಾವು ವಿರೋಧಿಸುವುದಾಗಿ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಸಲಿಂಗಿಗಳ ಮದುವೆ ದೈವೇಚ್ಛೆಯ ಮೇಲೆ ನಡೆಸುವ ವಿಧ್ವಂಸಕ ಕೃತ್ಯ ಎಂದು ಅವರು ಬಣ್ಣಿಸಿದ್ದರು.

ಹಸ್ತಮೈಥುನ ಎಂಬುದು ಅತಿ ಸೂಕ್ಷ್ಮದ ಮತ್ತು ಅತಿರೇಕದ ರೋಗಿಷ್ಠ ಲಕ್ಷಣ. ಇನ್ನು ಸಲಿಂಗಕಾಮ ಸಹ ಅತಿರೇಕದ ಕ್ರಿಯೆ. ಅದು ಪಾಪಪ್ರಕೃತಿ. ಪತಿತಾವಸ್ಥೆಯದ್ದು. ಕಡೆಕುತನದ್ದು. ನಡತೆಗೆಟ್ಟಿದ್ದು. ಅದಕ್ಕೆಲ್ಲ ಮದುವೆಯೇ ಪರಿಪಾರ. ಅದನ್ನು ಯಾವುದೇ ವ್ಯಕ್ತಿಯಿಂದ ನಾಶಪಡಿಸಲು ಸಾಧ್ಯವಿಲ್ಲ. ಸಾವೊಂದೇ ಅದಕ್ಕೆ ಪರಿಹಾರ ಎಂದು ವ್ಯಾಟಿಕನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Pope Francis came under fire from victim groups following news that he had quietly sacked the Vatican's envoy to the Dominican Republic over allegations of pedophilia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X