ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ತಾಲಿಬಾನಿಗಳು ಲೇಖಕಿ ಸುಷ್ಮಿತಾ ಹತ್ಯೆ ಮಾಡಿಬಿಟ್ರು

By Srinath
|
Google Oneindia Kannada News

ಕಾಬೂಲ್, ಸೆ. 6: ತಾಲಿಬಾನಿ ಉಗ್ರರು ಕೊನೆಗೂ ಕೋಲ್ಕತಾದ ಲೇಖಕಿ ಸುಷ್ಮಿತಾ ಬ್ಯಾನರ್ಜಿ (49) ಅವರನ್ನು ಹತ್ಯೆ ಮಾಡಿಬಿಟ್ಟಿದ್ದಾರೆ. ಮತ್ತೆ ತಮ್ಮ ಪೈಶಾಚಿಕತೆ ಮೆರೆದಿರುವ ತಾಲಿಬಾನಿ ಉಗ್ರರು ಲೇಖಕಿ ಸುಷ್ಮಿತಾ ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಬುಧವಾರ ರಾತ್ರಿ 11ಗಂಟೆಯಲ್ಲಿ ಈ ಹತ್ಯೆ ಮಾಡಿದ್ದಾರೆ.

ಪಕ್ಟಿಕಾ ರಾಜಧಾನಿ ಖರಾನಾದಲ್ಲಿದ್ದ ಸುಷ್ಮಿತಾ ಬ್ಯಾನರ್ಜಿ ಅಲಿಯಾಸ್ ಸಯೀದಾ ಕಮಲಾ ನಿವಾಸಕ್ಕೆ ನುಗ್ಗಿದ ಮುಸುಕುಧಾರಿ/ ಬಂದೂಕುಧಾರಿ ಉಗ್ರರು ಮೊದಲು ಅವರ ಪತಿ ಜಾನ್‌ ಬಾಜ್ ಖಾನ್ ಮತ್ತು ಕುಟುಂಬದ ಸದಸ್ಯರನ್ನು ಕಟ್ಟಿಹಾಕಿದ್ದಾರೆ. ಬಳಿಕ ಸುಷ್ಮಿತಾರನ್ನು ಮನೆಯಿಂದ ಹೊರಗೆಳೆದು ಆಕೆಯ ಮೇಲೆ ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಮೃತದೇಹವನ್ನು ಮುಸಲ್ಮಾನರ ಖಬರಸ್ತಾನ್ ಬಳಿ ಎಸೆದು ಪರಾರಿಯಾಗಿದ್ದಾರೆ. ಸುಷ್ಮಿತಾರ ಜೀವನದಲ್ಲಿ 2 ದಶಕಗಳಿಂದ ತಾಲಿಬಾನಿಗಳು ಹೇಗೆಲ್ಲಾ ಅಟ್ಟಹಾಸ ಮೆರೆದರು ಮತ್ತು ಸುಷ್ಮಿತಾ ಅವರು ಅದನ್ನು ಹೇಗೆ ದಿಟ್ಟವಾಗಿ ಎದುರಿಸಿದರು ಎಂಬುದನ್ನು ವಿವರವಾಗಿ ಇಲ್ಲಿ ಓದಿ.

 1995ರಲ್ಲಿ ಸುಷ್ಮಿತಾ ಬರೆದ Kababuliwalar Bangali Bou

1995ರಲ್ಲಿ ಸುಷ್ಮಿತಾ ಬರೆದ Kababuliwalar Bangali Bou

ಈ ಹಿಂದೆ ಸುಷ್ಮಿತಾ ಬ್ಯಾನರ್ಜಿ ಅವರನ್ನು ತಾಲಿಬಾನಿ ಉಗ್ರರು ಅಪಹರಿಸಿದ್ದರು. ಆದರೆ ಸುಷ್ಮಿತಾ ಉಗ್ರರ ಹಿಡಿತದಿಂದ ಪಾರಾಗಿದ್ದರು. ಹಾಗೆ ಪಾರಾಗಿ ಬಂದವರೆ ತಾಲಿಬಾನಿ ಉಗ್ರರ ಕುಕೃತ್ಯಗಳ ಬಗ್ಗೆ Kababuliwalar Bangali Bou (ಎ ಕಾಬೂಲಿವಾಲಾಸ್ ಬೆಂಗಾಲಿ ವೈಫ್) ಎಂಬ ಪುಸ್ತಕವನ್ನು 1995ರಲ್ಲಿ ಬರೆದಿದ್ದರು.

2003ರಲ್ಲಿ 'ಎಸ್ಕೇಪ್ ಫ್ರಂ ತಾಲಿಬಾನ್‌' ಬಾಲಿವುಡ್ ಸಿನಿಮಾ

2003ರಲ್ಲಿ 'ಎಸ್ಕೇಪ್ ಫ್ರಂ ತಾಲಿಬಾನ್‌' ಬಾಲಿವುಡ್ ಸಿನಿಮಾ

ಮುಂದೆ 2003ರಲ್ಲಿ 'ಎಸ್ಕೇಪ್ ಫ್ರಂ ತಾಲಿಬಾನ್‌' ಎಂಬ ಬಾಲಿವುಡ್ ಸಿನಿಮಾ ಅವತರಣಿಕೆಯಲ್ಲೂ ಬಂತು. ಮನಿಶಾ ಕೊಯಿರಾಲಾ ಚಿತ್ರದ ನಾಯಕಿಯಾಗಿದ್ದರು. ಇದೇ ತಾಲಿಬಾನಿಗಳ ವಿರುದ್ಧ ಮತ್ತಷ್ಟು ಸೆಟೆದು ನಿಂತ ಸುಷ್ಮಿತಾ, ಕಾಬೂಲಿನ ಉದ್ಯಮಿ ಜಾನ್‌ ಬಾಜ್ ಖಾನ್ ಅವರನ್ನು ಮದುವೆಯಾಗಿ ಅಲ್ಲೇ ವಾಸವಾಗತೊಡಗಿದರು. ಈ ಮಧ್ಯೆ ತಮ್ಮ ಹೆಸರನ್ನು ಸಯೀದಾ ಕಮಲಾ ಎಂದು ಬದಲಾಯಿಸಿಕೊಂಡಿದ್ದರು.

2003ರಲ್ಲಿ 'ಎಸ್ಕೇಪ್ ಫ್ರಂ ತಾಲಿಬಾನ್‌' ಬಾಲಿವುಡ್ ಸಿನಿಮಾ

2003ರಲ್ಲಿ 'ಎಸ್ಕೇಪ್ ಫ್ರಂ ತಾಲಿಬಾನ್‌' ಬಾಲಿವುಡ್ ಸಿನಿಮಾ

ಮುಂದೆ 2003ರಲ್ಲಿ 'ಎಸ್ಕೇಪ್ ಫ್ರಂ ತಾಲಿಬಾನ್‌' ಎಂಬ ಬಾಲಿವುಡ್ ಸಿನಿಮಾ ಅವತರಣಿಕೆಯಲ್ಲೂ ಬಂತು. ಮನಿಶಾ ಕೊಯಿರಾಲಾ ಚಿತ್ರದ ನಾಯಕಿಯಾಗಿದ್ದರು. ಇದೇ ತಾಲಿಬಾನಿಗಳ ವಿರುದ್ಧ ಮತ್ತಷ್ಟು ಸೆಟೆದು ನಿಂತ ಸುಷ್ಮಿತಾ, ಕಾಬೂಲಿನ ಉದ್ಯಮಿ ಜಾನ್‌ ಬಾಜ್ ಖಾನ್ ಅವರನ್ನು ಮದುವೆಯಾಗಿ ಅಲ್ಲೇ ವಾಸವಾಗತೊಡಗಿದರು. ಈ ಮಧ್ಯೆ ತಮ್ಮ ಹೆಸರನ್ನು ಸಯೀದಾ ಕಮಲಾ ಎಂದು ಬದಲಾಯಿಸಿಕೊಂಡಿದ್ದರು.

ಆಕ್ರೋಶಿತ ತಾಲಿಬಾನಿಗಳ ಪ್ರತೀಕಾರ

ಆಕ್ರೋಶಿತ ತಾಲಿಬಾನಿಗಳ ಪ್ರತೀಕಾರ

ಇದು ತಾಲಿಬಾನಿ ಉಗ್ರರನ್ನು ತೀವ್ರವಾಗಿ ಕೆರಳಿಸಿದೆ. ಸುಷ್ಮಿತಾ ತಮ್ಮ ಹಿಡಿತದಿಂದ ಪಾರಾಗಿದ್ದೂ ಅಲ್ಲದೆ ತಮ್ಮ ಕುಕೃತ್ಯಗಳನ್ನೆಲ್ಲ ಬಯಲಿಗೆಳೆಯುತ್ತಿದ್ದಾರೆ ಎಂದು ಆಕ್ರೋಶಗೊಂಡ ತಾಲಿಬಾನಿಗಳು ಪ್ರತೀಕಾರವಾಗಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಸುಷ್ಮಿತಾರ ಬೆನ್ನುಹತ್ತಿದ್ದ ತಾಲಿಬಾನಿಗಳು

ಸುಷ್ಮಿತಾರ ಬೆನ್ನುಹತ್ತಿದ್ದ ತಾಲಿಬಾನಿಗಳು

ಮೊದಲು ಕೋಲ್ಕೊತ್ತಾದಲ್ಲಿ ಭೇಟಿಯಾಗಿದ್ದ ಜಾನ್‌ ಬಾಜ್ ಖಾನ್ ಅವರನ್ನು 1988ರಲ್ಲಿ ಸುಷ್ಮಿತಾ ಮದುವೆಯಾದರು. ಅದಕ್ಕೂ ಮುನ್ನ ಅಫಘಾನಿಸ್ತಾನದಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. 27ನೆಯ ವಯಸ್ಸಿಗೆ ಮದುವೆಯಾದ ಸುಷ್ಮಿತಾಗೆ ಆನಂತರ ತಿಳಿದುಬಂದಿದ್ದು ತನ್ನ ಪತಿರಾಯ ಜಾನ್‌ ಬಾಜ್ ಗೆ ಈಗಾಗಲೇ ಮದುವೆಯಾಗಿದೆ ಎಂದು. ಎದೆಗುಂದದ ಸುಷ್ಮಿತಾ, ಜಾನ್‌ ಬಾಜನ ಮೊದಲ ಪತ್ನಿ ಗುಲಗುಟಿಯನ್ನು ಮತ್ತು ಆಕೆಯ ಮಕ್ಕಳನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ಪೋಷಿಸಿದರು.
ಫೆಬ್ರವರಿಯಲ್ಲಿ ಕೋಲ್ಕೊತ್ತಾಗೆ ಬಂದಿದ್ದ ಸುಷ್ಮಿತಾ, ಮತ್ತೊಂದು ಪುಸ್ತಕವನ್ನು ಬರೆದುಕೊಡುವುದಾಗಿ ಪ್ರಕಾಶಕರಾದ Swapan Biswasಗೆ ತಿಳಿಸಿದ್ದರು.

English summary
Indian author Sushmita Banerjee was executed by the Taliban late on Wednesday. Banerjee had attracted the ire of the fundamentalist outfit for her ceaseless social work, especially for women's healthcare and upliftment in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X