ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಶನಿವಾರಗಳಂದು ರಂಗ ಸಂಭ್ರಮ

By Prasad
|
Google Oneindia Kannada News

ರಂಗವಲ್ಲಿ, ಮೈಸೂರು ತಂಡವು ಇದೇ ಸೆಪ್ಟೆಂಬರ್ ತಿಂಗಳ 7, 14 ಮತ್ತು 21ನೇ ಶನಿವಾರದಂದು ಮೈಸೂರಿನ ರಂಗಾಯಣದ ಶ್ರೀರಂಗ ರಂಗಮಂದಿರದಲ್ಲಿ ಎ.ಕೆ.ರಾಮಾನುಜನ್ ಅವರ 'ಅಣ್ಣಯ್ಯನ ಮಾನವಶಾಸ್ತ್ರ' ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ 'ಮಾಯಾಮೃಗ' ಕತೆಗಳನ್ನಾಧರಿಸಿದ ಎರಡು ನಾಟಕಗಳನ್ನು ಪ್ರದರ್ಶಿಸಲಿದೆ. ಈ ನಾಟಕದ ನಿರ್ದೇಶನ ಪ್ರಶಾಂತ್ ಹಿರೇಮಠ್ ಅವರದ್ದು.

ನಾಟಕಗಳ ಕುರಿತು...

ಅಣ್ಣಯ್ಯನ ಮಾನವ ಶಾಸ್ತ್ರ

ಕನ್ನಡದ ಸಣ್ಣ ಕಥೆಗಳಲ್ಲಿ ಅತ್ಯಂತ ವಿಶಿಷ್ಟವಾದ ಸ್ಥಾನ ಪಡೆದಿರುವ ಕಥೆ ಎ.ಕೆ.ರಾಮಾನುಜನ್ ಅವರ "ಅಣ್ಣಯ್ಯನ ಮಾನವ ಶಾಸ್ತ್ರ". ಬುದ್ಧಿ ವಿದೇಶಿಯಾಗಿ, ಮನಸ್ಸು ಸ್ವದೇಶಿಯಾಗಿ ನಿರ್ಮಿಸುವ ದ್ವಂದ್ವವನ್ನು, ಪರಂಪರಾಗತವಾಗಿ ಬಂದ ಸಂಪ್ರದಾಯದ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತಾ ಸಾಗುತ್ತದೆ. ದೂರದ ಚಿಕಾಗೋದಲ್ಲಿ ಕುಳಿತು, ತನ್ನ ದೇಶದ ಸಂಪ್ರದಾಯದ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಹೊರಟ ಅಣ್ಣಯ್ಯ, ತನಗರಿವಿಲ್ಲದೆ, ತನ್ನ ಬದುಕಿನ ವೈಯಕ್ತಿಕ ಬದುಕಿನ ದುರಂತಗಳಿಗೆ ಮುಖಾಮುಖಿಯಾಗುತ್ತಾನೆ. ಈ ಕಥೆ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಮನುಷ್ಯ ತನ್ನನ್ನು ಚಿತ್ರ ವಿಚಿತ್ರ ಸನ್ನಿ ವೇಶಗಳಿಗೆ ಒಡ್ಡಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಹೆಚ್ಚು ಮಹತ್ವಪೂರ್ಣವೆನಿಸುತ್ತದೆ.

Two Kannada plays to be played in Mysore

ರಂಗದ ಮೇಲೆ

ಅಣ್ಣಯ್ಯ : ರಾಘವೇಂದ್ರ ಬೂದನೂರು
ಕಥನಕಾರರು : ವಿಶ್ವಾಸ್‌ಕೃಷ್ಣ ಮತ್ತು ರವಿಪ್ರಸಾದ್
ಮಾರ್ಥಾ ಮತ್ತು ಅಣ್ಣಯ್ಯನ ತಾಯಿ : ಶಾಲಿನಿ/ ರಶ್ಮಿ
ಲೈಬ್ರೆರಿಯನ್ ಶೆಟ್ಟಿ, ಬೇರರ್ ಮತ್ತು ಅಣ್ಣಯ್ಯನ ತಂದೆ : ಮಂಜುನಾಥಶಾಸ್ತ್ರಿ

ಮಾಯಾಮೃಗ

ಕನ್ನಡ ಸಾಹಿತ್ಯದಲ್ಲಿ ತನ್ನ ವಸ್ತುವಿನಿಂದಾಗಿ ಮಾತ್ರವಲ್ಲದೆ, ಅದರ ಅಭಿವ್ಯಕ್ತಿಯ ರೀತಿಯಿಂದಲೂ ವಿಶಿಷ್ಟವಾದ ಸ್ಥಾನ ಪಡೆದಿರುವ ಕಥೆ ಮಾಯಾಮೃಗ. ಸಾವಿನ ನಿಗೂಢತೆಯನ್ನು ಅಮೂರ್ತ ದೃಷ್ಟಿಕೋನದಿಂದ ನೋಡುವ ಯತ್ನ "ಮಾಯಾಮೃಗ", ಮನುಷ್ಯನ ಮನಸ್ಸಿನ ಅಪಾರ ಸಾಧ್ಯತೆಗಳನ್ನೂ, ನಂಬಿಕೆಗಳನ್ನೂ ಚೋದ್ಯ ಮಾಡುತ್ತಲೇ ವಿಶ್ವದ ನಿಗೂಢತೆಯನ್ನು ಭೇದಿಸಲಾಗದ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ. ಮೂಢನಂಬಿಕೆಗಳನ್ನು ಧಿಕ್ಕರಿಸಿ ವೈಜ್ಞಾನಿಕ ದೃಷ್ಟಿಕೋನವನ್ನು ಸಮರ್ಥಿಸಲು ಹೊರಡುವ ಷಾ ಮತ್ತು ಚಂದ್ರು, ತಮ್ಮ ದ್ವಂದ್ವಗಳಲ್ಲೇ ಹಾಸ್ಯಾಸ್ಪದ ರೀತಿಗಳಲ್ಲಿ ಸಿಲುಕಿ, ತಮಗರಿವಿಲ್ಲದೆ ತಮ್ಮದೇ ಆಟದ ದಾಳಗಳಾಗುತ್ತಾರೆ.

ರಂಗದ ಮೇಲೆ

ಷಾ : ಮಂಜುನಾಥಶಾಸ್ತ್ರಿ
ಚಂದ್ರು : ರವಿಪ್ರಸಾದ್
ದಾಸಪ್ಪ ಮೇಷ್ಟ್ರು/ ಮನೆ ಮಾಲೀಕ : ವಿಶ್ವಾಸ್ ಕೃಷ್ಣ
ಸರಸ್ವತಿ : ಶಾಲಿನಿ/ ರಶ್ಮಿ
ಮಾಯಾಮೃಗ : ಮಹೇಶ್ ನಂಜುಂಡಯ್ಯ

ನೇಪಥ್ಯದಲ್ಲಿ...

ಬೆಳಕು : ಕೃಷ್ಣಕುಮಾರ್ ನಾರ್ಣಕಜೆ
ರಂಗವಿನ್ಯಾಸ : ಹೆಚ್. ಕೆ. ದ್ವಾರಕಾನಾಥ್
ರಂಗ ಪರಿಕರ : ಸಂತೋಷ್ ಕುಮಾರ್ ಕುಸನೂರ್
ವಸ್ತ್ರವಿನ್ಯಾಸ : ನಂದಿನಿ ಕೆ. ಆರ್.
ಪ್ರಸಾದನ : ಮಹೇಶ್ ನಂಜುಂಡಯ್ಯ
ಸಂಗೀತ ಮತ್ತು ನಿರ್ದೇಶನ : ಪ್ರಶಾಂತ್ ಹಿರೇಮಠ್

English summary
Two Kannada plays, one written by A.K. Ramanujan (Annayyana Manavashastra) and another by Poornachandra Tejaswi (Mayamruga), are being staged on 7th, 14th and 21st of September, 2013 in Mysore by Rangavalli theatre group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X