ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ಣಚಂದ್ರ ತೇಜಸ್ವಿ 75 ವಿಶಿಷ್ಟ ಆಚರಣೆ

By Mahesh
|
Google Oneindia Kannada News

ಕನ್ನಡದ ವಿಶಿಷ್ಟ ಸಾಹಿತಿ ದಿವಂಗತ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಹಾಗೂ ಚಿಂತನೆಗಳ ಸಾಕಾರಕ್ಕಾಗಿ ಸ್ಥಾಪನೆಯಾದ ಮೂಡಿಗೆರೆಯ ವಿಸ್ಮಯ ಪ್ರತಿಷ್ಠಾನವು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತೇಜಸ್ವಿ ಅವರ 75 ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಯೋಜಿಸಿದೆ.

ಸೆ.8 ರಿಂದ ಸೆ.14 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತೇಜಸ್ವಿ ಕೃತಿ ಕಾಡು ಮತ್ತು ಕ್ರೌರ್ಯ ಬಿಡುಗಡೆ ಛಾಯಾಚಿತ್ರ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಚಿಂತನೆ, ಗೀತಗಾಯನ, ಕಿರುಚಿತ್ರ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿವೆ.

ಸೆ.8 ರಂದು ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಜ್ಜಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಪತ್ರಕರ್ತ, ಅಂಕಣಕಾರ ನಾಗೇಶ್ ಹೆಗ್ಡೆ, ಸಾಹಿತಿಗಳಾದ ಮರುಳಸಿದ್ದಪ್ಪ, ಎನ್ ಎಚ್ ಕೃಷ್ಣಯ್ಯ ಪಾಲ್ಗೊಳ್ಳಲಿದ್ದಾರೆ.

ತೇಜಸ್ವಿ ಅವರ ಬದುಕು ಬರಹ ಸಾಕಾರಕ್ಕಾಗಿ ಆರಂಭಗೊಂಡ ವಿಸ್ಮಯ ಪ್ರತಿಷ್ಠಾನದ ಪರಿಸರ ಸಂಶೋಧನಾ ಕೇಂದ್ರಕ್ಕೆ 25 ಎಕರೆ ಜಾಗ ನೀಡುವಂತೆ ಸರ್ಕಾರವನ್ನು ಕೋರಲಾಗಿದ್ದು, ಆದರೆ, ಕೇವಲ 2 ಎಕರೆ ಜಾಗ ಸಿಕ್ಕಿದೆ. ಸರ್ಕಾರದ ಅನುದಾನ 2 ಕೋಟಿ ರು ಆಧಾರವಾಗಿಟ್ಟುಕೊಂಡು ಮೂಡಿಗೆರೆಯ ಬಾಳೂರು ಅರಣ್ಯ ಪ್ರದೇಶದಲ್ಲಿ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು ಟ್ರಸ್ಟ್ ನ ಮುಖ್ಯ ಸದಸ್ಯರು, ಚಿತ್ರಕಲಾ ಪರಿಷತ್ ನ ಅಧ್ಯಕ್ಷರೂ ಆದ ಬಿಎಲ್ ಶಂಕರ್ ಹೇಳಿದರು. ಇನ್ನಷ್ಟು ವಿವರಗಳನ್ನು ನೋಡಿ..

ತೇಜಸ್ವಿ ಎಂಬ ವಿಸ್ಮಯ

ತೇಜಸ್ವಿ ಎಂಬ ವಿಸ್ಮಯ

ಪೂರ್ಣಚಂದ್ರ ತೇಜಸ್ಚಿಯವರ ಕಲೆ, ಸಾಹಿತ್ಯ, ವೈಚಾರಿಕ ದೃಷ್ಟಿಕೋನ, ಸರಳ ನೇರ ನಡವಳಿಕೆ , ಬಹುಮುಖಿ ಸಾಧನೆಯ ಜೀವನ ನಮ್ಮಗೆಲ್ಲ ಅನುಕರಣೀಯ ಹಾಗೂ ಆದರ್ಶಪ್ರಾಯವಾಗಿದೆ. ಅವರ ಚಿಂತನೆಗಳಿಗೆ ಸ್ಮಾರಕದ ರೂಪಕೊಟ್ಟು ಸೀಮತಗೊಳಿಸದೆ ಅವರು ನಡೆದ ಹಾದಿಯ ಮಾರ್ಗದಲ್ಲಿ ನಾವು ನಡೆಯುತ್ತಾ, ನಮ್ಮ ಮುಂದಿನ ಪೀಳಿಗೆಗೂ ತೇಜಸ್ವಿಯ ವಿಸ್ಮಯ ಲೋಕದ ಪರಿಚಯ ಮಾಡಿಕೊಡಬೇಕಾಗಿದೆ

ಕಾಡು ಮತ್ತು ಕ್ರೌರ್ಯ ಕೃತಿ

ಕಾಡು ಮತ್ತು ಕ್ರೌರ್ಯ ಕೃತಿ

ಸೆ.8 ರಂದು ಸಂಜೆ 4 ಗಂಟೆಗೆ ಚಿತ್ರಕಲಾ ಪರಿಷತ್ ಆವರಣದಲ್ಲಿ ತೇಜಸ್ವಿಯವರ ಕಾಡು ಮತ್ತು ಕ್ರೌರ್ಯ ಕೃತಿ ಹಾಗೂ ಪರಿಸರ ಕೈಪಿಡಿ ಬಿಡುಗಡೆ ಜತೆಗೆ ಗೀತ ಗಾಯನ: ಅಭಿಮನ್ಯು ಹಾಗೂ ರಾಜಗುರು

ಚಿತ್ರಕಲಾ ಪ್ರದರ್ಶನ, ಕಥೆ ವಾಚನ

ಚಿತ್ರಕಲಾ ಪ್ರದರ್ಶನ, ಕಥೆ ವಾಚನ

ಸೆ.9 : ಚಿತ್ರಕಲಾ ಪ್ರದರ್ಶನ, ಕಥೆ ವಾಚನ, ಸ್ಥಳ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಬೆಂಗಳೂರು

ಸೆ.10: ತೇಜಸ್ವಿ ಪರಿಸರ ಕಥಾ ಪ್ರಸಂಗ ಕೃತಿ ಬಿಡುಗಡೆ
ನಂತರ ನಾಟಕ ಪ್ರದರ್ಶನ
ಸ್ಥಳ ರವೀಂದ್ರ ಕಲಾಕ್ಷೇತ್ರ, ಸಂಜೆ 6 ಗಂಟೆಗೆ

ಚಿಂತನೆ, ನಾಟಕ

ಚಿಂತನೆ, ನಾಟಕ

ಸೆ.11, ಸಂಜೆ 6 ಗಂಟೆ, ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು
ತೇಜಸ್ವಿ ಮತ್ತು ನಾನು: ಡಾ. ಎಂಎಸ್ ಆಶಾದೇವಿ

* ಯಮಳ ಪ್ರಶ್ನೆ ನಾಟಕ, ನಿರ್ದೇಶನ: ನಾಗರಾಜ ಮೂರ್ತಿ

ಸಂಜೆ 6 ಗಂಟೆಗೆ ಜುಗಾರಿ ಕ್ರಾಸ್ 75ನೇ ಪ್ರದರ್ಶನ, ರವೀಂದ್ರ ಕಲಾಕ್ಷೇತ್ರದಲ್ಲಿ

ಪರಿಸರ ಕಾವ್ಯ

ಪರಿಸರ ಕಾವ್ಯ

ಡಾ. ಚಂದ್ರ ಶೇಖರ ಕಂಬಾರ್ ಅಧ್ಯಕ್ಷತೆ, ಡಾ. ಎಚ್ ಎಸ್ ಶಿವಪ್ರಕಾಶ್ ಉದ್ಘಾಟನೆ
ಕಾವ್ಯ ವಾಚನ: ಮುಕುಂದರಾಜ್, ಮಮತಾ ಸಾಗರ್, ಎಚ್ ಎಲ್ ಪುಷ್ಪ, ಜಯಶ್ರೀ ಕಂಬಾರ, ಹೇಮಲತ ವಡ್ಡೆ, ತಾರಿಣಿ ಶುಭದಾಯಿನಿ, ಜಯಲಕ್ಷ್ಮಿ ಪಾಟೀಲ, ಸುಬ್ಬು ಹೊಲೆಯಾರ್, ಎಚ್ ಎನ್ ಆರತಿ

ಗಾಯನ: ವರುಣ್, ರಾಜಗುರು, ಅಭಿಮನ್ಯು

ಗೀತ ಗಾಯನ

ಗೀತ ಗಾಯನ

* ಹೇಮ ಪ್ರಸಾದ್, ರಾಜೀವ್, ಸುಪ್ರೀತ
ಸಾಹಿತ್ಯ ಸಂಜೆ ಬಳಗ ರೂಪಿಸುವ -ತೇಜಸ್ವಿ
ನಿರೂಪಣೆ: ಡಾ. ಡಿ ಮಮತಾ ಸಾಗರ

ಕಿರುಚಿತ್ರ ಪ್ರದರ್ಶನ

ಕಿರುಚಿತ್ರ ಪ್ರದರ್ಶನ

ಹಾಯ್ ತೇಜಸ್ವಿ: ಜಿಎನ್ ಮೋಹನ್ ಮತ್ತು ದಿನೇಶ್ ಕುಮಾರ್ ತಂಡದ
ತೇಜಸ್ವಿ ಮಾಯಾಲೋಕ: ಕೃಪಾಕರ ಸೇನಾನಿ
ತೇಜಸ್ವಿ ಇನ್ನಿಲ್ಲ: ಜಿಎನ್ ಮೋಹನ್

ಸಹಕಾರ ಸಹಯೋಗ

ಸಹಕಾರ ಸಹಯೋಗ

ಸಹಕಾರ: ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಆಯೋಜನೆ: ಕರ್ನಾಟಕ ಚಿತ್ರಕಲಾ ಪರಿಷತ್, ಭಾರತ ಯಾತ್ರಾ ಕೇಂದ್ರ, ಬೆಂಗಳೂರು
ವಿಸ್ಮಯ ಪ್ರತಿಷ್ಠಾನ, ಮೂಡಿಗೆರೆ, ಪರಿಸರ-ನಿಸರ್ಗ ಸಂರಕ್ಷಣಾ ಸಂಸ್ಥೆ, ಬೆಂಗಳೂರು

English summary
KP Poornachandra Tejaswi 75 : Bangalore to witness a week long cultural program in order to give tribute to Kannada Writer, novelist, photographer, ornithologist, publisher, painter and environmentalist KP Poornachandra Tejaswi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X