ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಕ್ರೈಂ ನ್ಯೂಸ್ ಸಂಗ್ರಹ

By Mahesh
|
Google Oneindia Kannada News

ಬೆಂಗಳೂರು, ಸೆ.4: ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ, ಚಿತ್ರದುರ್ಗದಲ್ಲಿ ಪೊಲೀಸ್ ಪೇದೆ ಅಮಾನತು, ಮಣಿಪಾಲದಲ್ಲಿ ಸಿಕ್ಕಿ ಬಿದ್ದ ಐನಾತಿ ಕಳ್ಳರು, ಮಾಲೂರಿನಲ್ಲಿ ಕೊಲೆ ಪ್ರಕರಣ ಸೇರಿದಂತೆ ರಾಜ್ಯದ ಕ್ರೈಂ ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ ಓದಿ...

ಶ್ರೀಮತಿ ಶ್ವೇತಾ ಕಡೂರು ಟೌನ್ ವಾಸಿ ಇವರು ಕಳೆದ 1 ವರ್ಷ 4 ತಿಂಗಳ ಹಿಂದೆ ಸಂತೋಷ್ ಎಸ್ ರವರನ್ನು ಮದುವೆಯಾಗಿದ್ದು ಮದುವೆಯಾಗಿ ಕೆಲವು ದಿನಗಳ ನಂತರ ಅತ್ತೆ ಸುನಂದಮ್ಮ ನವರು ಶ್ವೇತಾ ಮಾಡುವ ಕೆಲಸಗಳಲ್ಲಿ ತಪ್ಪು ಹುಡುಕಿ ಅವಾಚ್ಯವಾಗಿ ಬೈದು ಮುಖಕ್ಕೆ ಉಗುಳುವುದು, ನಿನ್ನ ಹೊಟ್ಟೆಯಲ್ಲಿ ಮಗುವಾಗಲು ಬಿಡುವುದಿಲ್ಲಾ ಎಂದು ಬೈದು ಕೈ ಯಿಂದ ಹೊಡೆದು ಬಟ್ಟೆ ಹರಿದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ.

ತವರು ಮನೆಯಲ್ಲಿ ಕೊಟ್ಟಿದ್ದ ಒಂದು ಚಿನ್ನದ ಬಳೆಯನ್ನು ಗಂಡ ಮತ್ತು ಅತ್ತೆ ಸೇರಿ ತೆಗೆದುಕೊಂಡಿದ್ದು ವಾಪಸ್ಸು ಫಿರ್ಯಾದಿಗೆ ಕೊಟ್ಟಿರುವುದಿಲ್ಲ. ಫಿರ್ಯಾದಿ ಗಂಡ ಕೋಳಿ ಫೌಲ್ಟ್ರೀ ಫಾರಂ ಮಾಡಿ ಸಾಲ ಮಾಡಿಕೊಂಡಿದ್ದು ಈ ಸಾಲ ತೀರಿಸಲು ತವರು ಮನೆಯಿಂದ ಒಂದು ಲಕ್ಷ ರೂಪಾಯಿ ತರುವಂತೆ ಗಂಡ ಮತ್ತು ಅತ್ತೆ ಸೇರಿ ವರದಕ್ಷಿಣೆ ಕಿರುಕುಳ ನೀಡಿದ್ದು ಬೈದು ಹೊಡೆದು ರೂಂ ನಲ್ಲಿ ಕೂಡಿ ಹಾಕಿ ಊಟ ತಿಂಡಿ ಕೊಡದೆ ಹಿಂಸೆ ಮಾಡಿರುತ್ತಾರೆ.

ಫಿರ್ಯಾದಿಯ ನಾದಿನಿ ಸ್ವರೂಪ ಎಂಬುವರು ಕೂಡ ಫಿರ್ಯಾದಿಯ ಅತ್ತೆ ಮಾತು ಕೇಳಿಕೊಂಡು ಅತ್ತೆಯವರ ಜೊತೆ ಸೇರಿಕೊಂಡು ಫಿರ್ಯಾದಿಗೆ ಬೈದು ಹೊಡೆದು ತವರು ಮನೆಯಿಂದ ನನ್ನ ತಮ್ಮನಿಗೆ ಹಣ ತಂದು ಕೊಡಲು ನಿನಗೆ ಏನು ರೋಗ ಎಂದು ಹೇಳಿ ಹಿಂಸೆ ಕೊಡುತ್ತಿದ್ದಳು ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿ ದಾಖಲು ಮಾಡಿರುತ್ತೆ. ಕಡೂರು ಪೊಲೀಸ್ ಠಾಣೆ ಮೊ.ಸಂ. 205/2013 ಕಲಂ; 498(ಎ) 34 ಐಪಿಸಿ ಸಹಿತ 3 & 4 ಡಿಪಿ ಆಕ್ಟ್

ಚಿತ್ರದುರ್ಗ

ಚಿತ್ರದುರ್ಗ

ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ ಟೇಬಲ್ ಲಿಂಗರಾಜು, ಸಿಪಿಸಿ-651 ರವರು ಈ ಹಿಂದೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರೆಡ್ಡಿಹಳ್ಳಿ ಕಲಮರಹಳ್ಳಿ ಕಡೆ ಅಕ್ರಮ ಮರಳು ಸಾಗಾಣಿಕೆ ದಂಧೆಗೆ ಕುಮ್ಮಕ್ಕು ನೀಡಿರುವರೆಂದು ಹಾಗೂ ಅಲ್ಲಿನ ಗ್ರಾಮಸ್ಥರು ಆಪಾದಿಸಿದ್ದಾರೆ.

ಕಾನ್ಸ್ ಟೇಬಲ್ ಲಿಂಗರಾಜು ರವರೇ ಲಾರಿಗಳಲ್ಲಿ ಮರಳನ್ನು ಸಾಗಿಸಲು ಸಹಕಾರ ನೀಡುತ್ತಿರುವುದಾಗಿ ಆಪಾದಿಸಿದ ಮೇರೆಗೆ ಸದರಿಯವರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟಿರುತ್ತಾರೆ.

ಕೋಲಾರ

ಕೋಲಾರ

ಮಾಲೂರು ಪೊಲೀಸ್ ಠಾಣೆಯಲ್ಲಿ ಮಹಿಳೆಯನ್ನು ಕಿರುಕುಳ ನೀಡಿ, ಕೊಲೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ನಗರ, ಸಮತಾನಗರದಲ್ಲಿ ಸಂಭವಿಸಿರುತ್ತದೆ.

ಆನಂದಪ್ಪ ಅವರ ಮಗಳು ಮಂಜುಳ ಮಾಲೂರು, ನಂಬಿಗಾನಹಳ್ಳಿ ಗ್ರಾಮದ ಮುನಿಯಮ್ಮ ಮನೆಯಲ್ಲಿ ವಾಸವಾಗಿದ್ದು, ದೇವನಗೊಂದಿ ಬಳಿ ಗಾರ್ಮೆಂಟ್ಸ್ ಪ್ಯಾಕ್ಟರಿಗೆ ಹೋಗಿ ಬರುತ್ತಿದ್ದರು.

ಮಾಲೂರು- ತಿರುಮಲಹಟ್ಟಿ ವಾಸಿ ಕೃಷ್ಣಮೂರ್ತಿ ಪ್ರೀತಿಸಿದ್ದು. ಈಗ್ಗೆ 4 ತಿಂಗಳ ಹಿಂದೆ ಮದುವೆ ಮಾಡಿಕೊಂಡು ಸಮತಾ ನಗರದಲ್ಲಿ ವಾಸವಾಗಿದ್ದರು.

ಮಂಜುಳ ಮತ್ತು ಕೃಷ್ಣಮೂರ್ತಿ ಗೆ ವೈಮನಸ್ಸು ಉಂಟಾಗಿ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದು. ಈ ಬಗ್ಗೆ ಹಿರಿಯರು ಬುದ್ದಿವಾದ ಹೇಳಿ ಸಮಾಧಾನ ಮಾಡಿದ್ದರು. ಮಂಜುಳ ಮತ್ತು ಕೃಷ್ಣಮೂರ್ತಿ ರವರು ಪರಸ್ಪರ ಜಗಳ ಮಾಡಿಕೊಂಡಿದ್ದು. ನಂತರ ಕೃಷ್ಣಮೂರ್ತಿ ರವರು ಮಂಜುಳ ರವರಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು. ಈ ಬಗ್ಗೆ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ.

ದಾವಣಗೆರೆ

ದಾವಣಗೆರೆ

ವಿದ್ಯಾ ಕೋಂ ರವಿಶಂಖರ್

ಸೋಮವಾರ ಸಂಜೆ 4-00 ಗಂಟೆಗೆ ಪಿರ್ಯಾದಿ ತನ್ನ ಮೆನೆಯಿಂದ ತನ್ನ ಮಗಳಾದ ಅಭಿಜ್ಞಳನ್ನು ಬಾಪೂಜಿ ಶಾಲೆಯಿಂದ ಕರೆದು ಕೊಂಡು ಬರಲು 14ನೇ ಮೈನ್ 5ನೇ ಕ್ರಾಸ್ ಮರಳು ಸಿದ್ದೇಶ್ವರ ನಿಲಯದ ಮುಂದೆ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಯಾರೋ ಒಬ್ಬ ಸುಮಾರು 20-25 ವರ್ಷ ವಯಸ್ಸಿನವನಾಗಿದ್ದು ಕಪ್ಪು. ಬಣ್ಣದ ಶರಟು ಜಿನ್ಸ್ ಪ್ಯಾಂಟು ಸಾಧಾರಣ ಮೈಕಟ್ಟು ಧರಿಸಿದವನು. ಪಿರ್ಯಾದಿ ಮುಂದೆ ಬರುತ್ತಿದವನ್ನು ಏಕಾಏಕಿ ಮುಂದೆ ಬಂದು ಕೊರಳಿಗೆ ಕೈ ಹಾಕಿದ.

ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಕೊಂಡಾಗ ಸರ ಹಿಡಿದು ಕೊಂಡಾಗ ಎರಡು ಎಳೆಯ ಮಾಂಗಲ್ಯ ಸರದಲ್ಲಿ 1ಎಳೆ ಕೈಯಲ್ಲಿದ್ದು ಇನ್ನು ಉಳಿದ ತಾಳಿ ಸಮೇತ 40 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತು ಕೊಂಡು ಓಡಿ ಹೋಗಿರುತ್ತಾನೆ ಕಿತ್ತು ಕೊಂಡು ಹೋದ ಬಂಗಾರದ ಅಂಜಲಿ ಡಿಜೈನಿನ 2 ಎಳೆಯ 2ತಾಳಿ ಇರುವ ವಾಂಗಲ್ಯ ಸರ 40 ಗ್ರಾಂ ಬೆಲೆ 130000/-ರೂ ವುಳ್ಳದನ್ನು ಕಿತ್ತು ಕೂಂಡು ಹೋದವನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಮಾಂಗಲ್ಯ ಸರವನ್ನು ಪತ್ತೆ ಮಾಡಿ ಕೊಡಲು ತಮ್ಮಲ್ಲಿ ವಿನಂತಿ ಅಂತಾ ಇದ್ದ ದೂರಿನ ಮೇರೆಗೆ ಮೇಲ್ಕಂಡಂತೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ .

ಉಡುಪಿ

ಉಡುಪಿ

ಉಡುಪಿ ತಾಲೂಕು ಮಣಿಪಾಲ ವಿದ್ಯಾರತ್ನ ನಗರದಲ್ಲಿರುವ ಅತಿಥಿ ಅಪಾರ್ಟ್ ಮೆಂಟ್ ರೂಮ್ 303 ಮತ್ತು 104 ರಲ್ಲಿ ರಾತ್ರಿ ವೇಳೆ ಬೀಗ ಹಾಕದೇ ಇರುವ ಮನೆಯನ್ನು ಗಮನಿಸಿ ಹಾಗೂ ಮನೆಯ ಕಿಟಕಿಯ ಮೂಲಕ ಕೈ ಹಾಕಿ ಬಾಗಿಲ ಚಿಲಕ ತೆಗೆದು ಕಳವು ಮಾಡುತ್ತಿದ್ದರು.

ರಾತ್ರಿ ಪುಡ್ ಪಾರ್ಸೆಲ್ ಆರ್ಡರ್ ಕೊಂಡು ಹೋಗುವ ಸ್ಪೈಸ್ & ಐಸ್ ಫಾಸ್ಟ್ ಫುಡ್ ಹೋಟೇಲ್ ನಲ್ಲಿ ಕೆಲಸ ಮಾಡುವ ಅಶ್ರಫ್ ನನ್ನು ಬಂಧಿಸಿ ಕಳವು ಮಾಡಿದ ನಾಲ್ಕು ಲ್ಯಾಪ್ ಟಾಪ್, ಒಂದು ಹಾರ್ಡ್ ಡಿಸ್ಕ್, ಒಂದು ಐ-ಪೋನ್, ಒಂದು ಮೊಬೈಲ್ ಮತ್ತು ಅವುಗಳ ಪರಿಕರ ಹಾಗೂ ಇತ್ಯಾದಿ ಒಟ್ಟು ರೂಪಾಯಿ 1,50,000/- ಬೆಲೆಬಾಳುವ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

English summary
Karnataka Todays Crime beat news : A dowry harassment case registered in Kadur, A police constable suspended in Chitragurga, Robber held by Manipal police and More crime report from across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X