ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ನೀರಿನ ಬಿಲ್ ಕಟ್ಟೋದು ಸುಲಭ

|
Google Oneindia Kannada News

bwssb
ಬೆಂಗಳೂರು, ಸೆ.4 : ಮಹಾನಗರ ಬೆಂಗಳೂರಿನಲ್ಲಿ ನೀರಿನ ಬಿಲ್ ಪಾವತಿ ಮತ್ತಷ್ಟು ಸರಳವಾಗಿದೆ. ಬೆಂಗಳೂರು ಜಲಮಂಡಳಿ ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಈಜಿ ಬಿಲ್ ಜೌಟ್ ಲೆಟ್ ಗಳನ್ನು ಪ್ರಾರಂಭಿಸಿದೆ.

ಈಜಿ ಬಿಲ್ ಔಟ್ ಲೆಟ್ ಏಜೆನ್ಸಿ ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ಸಾವಿರಕ್ಕೂ ಅಧಿಕ ಏಜೆಂಟರನ್ನು ಹೊಂದಿದೆ. ಸಾರ್ವಜನಿಕರು ಈ ಜೌಟ್ ಲೆಟ್ ಗಳ ಮೂಲಕ ನೀರಿನ ಬಿಲ್ ಪಾವತಿ ಮಾಡಲು ಜಲಮಂಡಳಿ ಅವಕಾಶ ಕಲ್ಪಿಸಿದೆ.

ಈಜಿ ಬಿಲ್ ಔಟ್ ಲೆಟ್ ಏಜೆನ್ಸಿಯೊಂದಿಗೆ ಜಲಮಂಡಳಿ ಒಪ್ಪಂದ ಮಾಡಿಕೊಂಡಿದ್ದು, ಗ್ರಾಹಕರು ಜೌಲ್ ಲೆಟ್ ಮೂಲಕ ಬಿಲ್ ಪಾವತಿ ಮಾಡಲು ವ್ಯವಸ್ಥೆ ಮಾಡಿದೆ. ದಿನಸಿ ಅಂಗಡಿ, ಮೆಡಿಕಲ್ ಶಾಪ್, ಎಸ್ ಟಿಡಿ, ಪಿಸಿಒ ಬೂತ್, ಪೆಟ್ರೋಲ್ ಬಂಕ್ ಗಳಲ್ಲಿ ಈಜಿ ಬಿಲ್ ಜೌಟ್ ಲೆಟ್ ಗಳು ಕಾರ್ಯನಿರ್ವಹಿಸಲಿವೆ.

ಪಾವತಿ ಹೇಗೆ : ಈಜಿ ಬಿಲ್ ಜೌಟ್ ಲೆಟ್ ಮೂಲಕ ಬಿಲ್ ಪಾವತಿ ಮಾಡುವ ಗ್ರಾಹಕರು ಜೌಟ್ ಲೆಟ್ ನಲ್ಲಿ ಮೊದಲು ತಮ್ಮ ನೀರಿನ ಸಂಪರ್ಕದ ಆರ್ ಆರ್ ಸಂಖ್ಯೆ ನೀಡಬೇಕು. ಆಗ ನೀರಿನ ಬಿಲ್ ಮೊತ್ತದ ಮಾಹಿತಿ ದೊರೆಯುತ್ತದೆ. ತಕ್ಷಣ ಹಣ ಪಾವತಿ ಮಾಡಬಹುದಾಗಿದೆ.

ಹಣ ಪಾವತಿ ಮಾಡಿದ ಗ್ರಾಹಕರಿಗೆ ರಸೀದಿ ನೀಡಲಾಗುತ್ತದೆ. ಬಿಲ್ ಪಾವತಿ ಖಚಿತ ಪಡಿಸಲು ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಎಸ್ಎಂಎಸ್ ಬರುತ್ತದೆ. ಈ ಜೌಟ್ ಲೆಟ್ ಗಳು ಬೆಳಗ್ಗೆಯಿಂದ ತಡರಾತ್ರಿ ವರೆಗೆ ಕಾರ್ಯನಿರ್ವಹಿಸುತ್ತವೆ ಮತ್ತು ರಜಾದಿನಗಳಂದು ತೆರೆದಿರುತ್ತವೆ.

ಈಜಿ ಬಿಲ್ ಜೌಟ್ ಲೆಟ್ ಗಳ ಕುರಿತ ಹೆಚ್ಚಿನ ಮಾಹಿತಿಗಾಗಿ www.bwssb.org ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ. ಅಥವ ಟೋಲ್ ಫ್ರೀ ಸಂಖ್ಯೆ 1800-11-75-75 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
To make bill payment easy for customers, the Bangalore Water Supply and Sewerage Board (BWSSB) has tied up with Easy Bill, a bill payment facility in the city. According to an official press release, Easy Bill has more than 1,000 authorized agents in the city. The facility is available in grocery shops, medical stores, STD and PCO booths, petrol pumps and other service centers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X