ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಹಾದಂಗಡಿ ಬಾಪು ಬನ್ ಗಯಾ ದೇವಮಾನವ

By Mahesh
|
Google Oneindia Kannada News

ನವದೆಹಲಿ, ಸೆ.3: ಚಹಾದಂಗಡಿಯಲ್ಲಿ ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಸಾರಾಮ್ ಈಗ ಸರಿ ಸುಮಾರು ಸಾವಿರಾರು ಕೋಟಿ ರು ಒಡೆಯ. ಸ್ವಯಂ ಘೋಷಿತ ದೇವ ಮಾನವನಾಗಿ ಹಲವಾರು ದೇಶಗಳಲ್ಲಿ ಭಕ್ತರನ್ನು ಹೊಂದಿರುವ ಬಾಪುಗೆ ಮೈತುಂಬಾ ಹಗರಣಗಳೇ ತುಂಬಿದೆ. ಬಾಪು ಅಸಾರಾಮ್ ಯಾರು? ಮುಂದೆ ಓದಿ...

ದೆಹಲಿಯ ಸಾಮೂಹಿಕ ಅತ್ಯಾಚಾರದಲ್ಲಿ ಮೃತಪಟ್ಟ ಯುವತಿ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿ ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದ ಸ್ವಯಂಘೋಷಿತ ದೇವಮಾನವ ಅಸಾರಮ್ ಬಾಪು ಲೇಟೆಸ್ಟ್ ಆಗಿ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಸಿಲುಕಿದ್ದಾರೆ. ಆದರೆ, ವಿವಾದಗಳು ಬಾಪುಗೆ ಹೊಸತೇನಲ್ಲ. ಅನೇಕ ಭೂ ಹಗರಣ, ಗಲಾಟೆ, ಕೊಲೆ ಕೇಸ್ ಗಳಲ್ಲಿ ಬಾಪು ಹೆಸರು ಕಾಣಿಸಿಕೊಂಡಿದೆ.

ಐಬಿಎನ್ 7 ಹುಡುಕಾಟದಂತೆ ಅಸಾರಾಮ್ ಅವರು ಏಪ್ರಿಲ್ 17, 1942ರಲ್ಲಿ ಅವಿಭಜಿತ ಭಾರತದ ನವಾಬ್ ಶಾ ಜಿಲ್ಲೆಯ ಬೆರಾನಿ ಗ್ರಾಮದಲ್ಲಿ(ಈಗ ಪಾಕಿಸ್ತಾನದಲ್ಲಿದೆ) ಜನಿಸಿದರು. ಮೆನ್ಹಗಿಬಾ ಹಾಗೂ ಉದ್ಯಮಿ ಥೊಮಲ್ ಸಿರುಮಲಾನಿ ದಂಪತಿಗೆ ಜನಿಸಿದ ಗಂಡು ಕೂಸಿಗೆ ಅಸುಮಲ್ ಎಂದು ಹೆಸರಿಡಲಾಗಿತ್ತು.

Who is Asaram?

ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಸಿರುಮಲನಿ ಕುಟುಂಬ ಭಾರತದ ಕಡೆಗೆ ತಿರುಗಿ ಅಹಮದಾಬಾದಿನ ಮಣಿನಗರಕ್ಕೆ ಬಂದು ನೆಲೆಸಿತು. ಭಾರತಕ್ಕೆ ಬಂದ ಕೆಲ ಸಮಯದಲ್ಲೇ ಸಿರುಮಲನಿ ಅವರು ತೀರಿಕೊಂಡರು. ಸಂಸಾರದ ಜವಾಬ್ದಾರಿ ಅಸುಮಾಲ್ ಮೇಲೆ ಬಿದ್ದಿತು. ಗ್ರೇಟರ್ ಬಾಂಬೆ ಹಾಗೂ ಗುಜರಾತ್ ಭಾಗವಾಗಿದ್ದ ಮೆಹ್ಸಾನಾದ ವಿಜಪುರಾಗೆ ಬಾಲಕ ಅಸುಮಲ್ ತೆರಳುತ್ತಾನೆ.

ಅಲ್ಲಿ 1958-59ರ ಅವಧಿಯಲ್ಲಿ ಮ್ಯಾಜಿಸ್ಟ್ರೇಟ್ ಅವರ ಕಚೇರಿ ಎದುರಿನ ಚಹಾ ಅಂಗಡಿಯಲ್ಲಿ ಎಂಜಲು ಲೋಟ ತೊಳೆದು ಬಂದ ಗ್ರಾಹಕರಿಗೆ ಟೀ ನೀಡುತ್ತಿದ್ದ ಅಸುಮಲ್ ಮುಂದೆ ದೇವಮಾನವನಾಗಿ ಬೆಳೆದ.

ಟೀ ಸ್ಟಾಲ್ ನಲ್ಲಿದ್ದಾಗಲೂ ಅಸುಮಲ್(ಅಸಾರಾಮ್) ಉದ್ದುದ್ದಾ ಗಡ್ಡ ಬಿಡುತ್ತಿದ್ದ. ಮ್ಯಾಜಿಸ್ಟ್ರೇಟ್ ಕಚೇರಿ ಬಳಿ ಹೋಂ ಗಾರ್ಡ್ ಆಗಿದ್ದ ರಸಿಕ್ ಭಾಯ್ ಅವರು ಅಸಾರಾಮ್ ಚಹಾ ಅಂಗಡಿಯಲ್ಲಿದ್ದ ಎಂಬುದನ್ನು ದೃಢಪಡಿಸಿದ್ದಾರೆ.

ನಂತರ ಮಧ್ಯಪ್ರದೇಶದಲ್ಲಿ 38 ವರ್ಷಗಳ ಹಿಂದೆ ಜ್ಞಾನೋದಯ ಪಡೆದು ಸ್ವಯಂಘೋಷಿತ ದೇವ ಮಾನವನಾಗಿ ಬೆಳೆದ ಅಸಾರಾಮ್ ಬಾಪು ಅವರಿಗೆ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಅಸಂಖ್ಯಾತ ಭಕ್ತರಿದ್ದಾರೆ. ಗುಜರಾತಿನ ಸಂತ ಶ್ರೀ ಅಶರಾಮ್ ಜೀ ಆಶ್ರಮದ ಭಾಗವಾಗಿ ಬೆಳೆದ ಬಾಪು ಆಶ್ರಮ ದೇಶದೆಲ್ಲೆಡೆ ಹರಡಿಕೊಂಡಿದೆ. ಸುಮಾರು 200 ಕ್ಕೂ ಆಶ್ರಮಗಳ ಜತೆಗೆ 500 ಕೋಟಿ ರು.ಗೂ ಅಧಿಕ ಆಸ್ತಿ ಹೊಂದಿರುವ ಶ್ರೀಮಂತ ಧಾರ್ಮಿಕ ಗುರು ಅಸರಾಮ್ ಅವರು 72 ವರ್ಷ ವಯಸ್ಸಿನಲ್ಲಿ ಹತ್ತಾರು ವಿವಾದಗಳನ್ನು ಹೊತ್ತು ಸಾಗುತ್ತಿದ್ದಾರೆ. [ಅಸಾರಮ್ ಬಾಪು 10 ವಿವಾದಗಳು]

English summary
Who is Asaram? : Self-styled godman Asaram has been accused of sexual assaults and land grabs. He had also come under severe criticism for his comments on the December 16, 2012 Delhi gangrape case. Asumal alias Asaram used to work at a tea stall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X