ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರಿಕರೊಬ್ಬರ ಡಿಎಲ್ ಪ್ರಸಂಗ

By Mahesh
|
Google Oneindia Kannada News

ಮೈಸೂರು, ಸೆ.3: ಇಲ್ಲಿನ ಹಿರಿಯ ನಾಗರಿಕರೊಬ್ಬರಿಗೆ ಡ್ರೈವಿಂಗ್ ಲೈಸನ್ಸ್ ನೀಡಲು ಆರ್ ಟಿಒ ಅಧಿಕಾರಿಗಳು ನಿರಾಕರಿಸಿದ್ದಾರೆ. ಸುಮಾರು 55 ವರ್ಷಗಳ ಕಾಲ 14 ಬಾರಿ ನವೀಕರಣ ಮಾಡಿದ ಮೇಲೆ ಮತ್ತೊಮ್ಮೆ ನವೀಕರಣ ಸಾಧ್ಯವಿಲ್ಲ ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.

ಟಿಎನ್ ಹರಿನಂಜರಾಜೇ ಅರಸ್ ಅವರು ಡಿಎಲ್ ನವೀಕರಣ(renew) ಮಾಡುವಂತೆ ಜು.15, 2013 ರಂದು ಅರ್ಜಿ ಹಾಕಿದ್ದಾರೆ. ನವೀಕರಣಕ್ಕಾಗಿ ಕಟ್ಟಬೇಕಾದ ಶುಲ್ಕ ಕೂಡಾ ಪಾವತಿಸಿ, ಸೂಕ್ತ ದಾಖಲೆಗಳನ್ನು ಒದಗಿಸಿದ್ದಾರೆ. ಅದರೆ, ನಿಗದಿತ ಅವಧಿಯಂತೆ 30 ದಿನಗಳಲ್ಲಿ ಕೈ ಸೇರಬೇಕಿದ್ದ ಡಿಎಲ್ 7 ವಾರವಾದರೂ ಕೈ ಸೇರದಿದ್ದಾಗ ಅರಸ್ ಅವರು ಆರ್ ಟಿಒ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ.

ಕಡತಗಳನ್ನು ಪರಿಶೀಲಿಸಿದ ಆರ್ ಟಿಒ ಕಚೇರಿ ಅಧಿಕಾರಿಗಳು ನಿಮ್ಮ ಡಿಎಲ್ ನವೀಕರಿಸಲು ಸಾಧ್ಯವಿಲ್ಲ. ನೀವು ಹೊಸದಾಗಿ ಅರ್ಜಿ ಸಲ್ಲಿಸಿ ಡಿಎಲ್ ಪಡೆಯಬೇಕು ಎಂದಿದ್ದಾರೆ. ಇದರ ಜತೆಗೆ ಕುತೂಹಲದ ಸಂಗತಿ ಎಂದರೆ ಮೊದಲ ಬಾರಿಗೆ ಡಿಎಲ್ ಪಡೆದಾಗ ಅರಸ್ ಅವರು ಅಪ್ರಾಪ್ತ ವಯಸ್ಕರಾಗಿದ್ದರಂತೆ.

Sr citizen denied DL after 55 years and 14 renewals

17 ವರ್ಷಕ್ಕೆ ಅರಸ್ ಅವರ ಕೈಗೆ ಡಿಎಲ್ ಸಿಕ್ಕಿದ್ದು ಅದು ಲಘು ವಾಹನ ಓಡಾಟಕ್ಕೆ ಮೇ 16, 1958ರಲ್ಲಿ. ಅವಾಗಲೇ ನನ್ನ ವಯಸ್ಸಿನ ಬಗ್ಗೆ ತಕರಾರು ಏಕೆ ತೆಗೆಯಲಿಲ್ಲ. 14 ಬಾರಿ ನವೀಕರಣ ಮಾಡಿಸಿಕೊಂಡ ಮೇಲೆ ವಯಸ್ಸಿನ ಬಗ್ಗೆ ತಕರಾರು ಹಾಗೂ ನವೀಕರಣ ಸಾಧ್ಯವಿಲ್ಲ ಎನ್ನುವುದು ಎಷ್ಟು ಸರಿ ಎಂದು ಅರಸ್ ಅಜ್ಜ ಪ್ರಶ್ನಿಸಿದ್ದಾರೆ.

ಮೊದಲ ಬಾರಿ ಡಿಎಲ್ ಪಡೆಯುವಾಗ ನಾನೇನು ನನ್ನ ಜನ್ಮ ದಿನಾಂಕವನ್ನು ಮುಚ್ಚಿಟ್ಟಿರಲಿಲ್ಲ. ಪೂರ್ಣ ಮಾಹಿತಿ ನೀಡಿದ್ದೆ. ಡಿಎಲ್ ಟೆಸ್ಟ್ ನಲ್ಲಿ ಪಾಸ್ ಆಗಿದ್ದೆ ಎಂದು ಅರಸ್ ಹೇಳುತ್ತಾರೆ.

ಬೆಂಗಳೂರಿನಲ್ಲೂ ಇಂಥದ್ದೇ ಒಂದು ಪ್ರಸಂಗ ನಡೆದಿತ್ತು. 70 ವರ್ಷದ ಹಿರಿಯ ನಾಗರಿಕರೊಬ್ಬರಿಗೆ 54 ವರ್ಷಗಳ, 17 ಬಾರಿ ನವೀಕರಣದ ನಂತರ ಮತ್ತೆ ಡಿಎಲ್ ನವೀಕರಣಕ್ಕೆ ಅನುಮತಿ ಕೊಟ್ಟಿರಲಿಲ್ಲ.

ಎರಡೂ ಪ್ರಕರಣಗಳಲ್ಲೂ ಅಪ್ರಾಪ್ತ ವಯಸ್ಕರಾಗಿದ್ದಾಗ ಡಿಎಲ್ ನೀಡಿರುವುದೇ ಪ್ರಾಬ್ಲಂ ಆಗಿದೆ. ಆರ್ ಟಿಒ ಕಚೇರಿ ಗಣಕೀಕರಣಗೊಂಡಿದ್ದು, ಕಂಪ್ಯೂಟರ್ ನ ತಂತ್ರಾಂಶಗಳು 18 ವರ್ಷಕ್ಕಿಂತ ಕೆಳಲ್ಪಟ್ಟ ವಯಸ್ಸಿನವರ ಅರ್ಜಿಯನ್ನು ತಿರಸ್ಕರಿಸುವುದರಿಂದ ಮತ್ತೊಮ್ಮೆ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿರಿಯ ನಾಗರಿಕರಾದ ನಮಗೆ ಹೆಚ್ಚಿನ ಸೌಲಭ್ಯ ನೀಡುವ ಬದಲು ಹೆಚ್ಚು ತೊಂದರೆ ನೀಡುತ್ತಿರುವುದು ಎಷ್ಟು ಸರಿ. ನಾವೇನೋ ದೊಡ್ಡ ತಪ್ಪು ಎಸಗಿದಂತೆ ಕಾಣಲಾಗುತ್ತಿದೆ. ಈ ವಯಸ್ಸಿನಲ್ಲ್ಲಿ ಲರ್ನಿಂಗ್ ಲೈಸನ್ಸ್ ಪಡೆದು ನಂತರ ಡಿಎಲ್ ಪಡೆಯುವ ಪ್ರಕ್ರಿಯೆಗೆ ಒಳಗಾಗುವುದು ನಮಗೂ ಕಷ್ಟ. ಸಾಫ್ಟ್ ವೇರ್ ಪ್ರಾಬ್ಲಂಗೆ ಪರಿಹಾರ ಕಂಡುಕೊಳ್ಳದೆ ಹಿರಿಯ ನಾಗರಿಕರ ಅರ್ಜಿತನ್ನು expire ಆಗಿದೆ ಎಂದು ಪಕ್ಕಕ್ಕೆ ತಳ್ಳುವುದು ಎಷ್ಟು ಸರಿ ಎಂದು ಅರಸ್ ಪ್ರಶ್ನಿಸಿದ್ದಾರೆ.

English summary
A Sr citizen in Mysore was denied a renewal of driving license by the RTO (West) after 55 years and 14 consecutive renewals. Surprisingly, the reason cited was the applicant being under-age when he first issued the DL in 1958.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X