ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರಿಗೆ ಯುಪಿಎನಿಂದ ಹಬ್ಬದ ಗಿಫ್ಟ್

By Mahesh
|
Google Oneindia Kannada News

Govt to hike DA by 10%; benefit 80 lakh employees and pensioners
ನವದೆಹಲಿ,ಸೆ.1: ಕೇಂದ್ರ ಸರ್ಕಾರಿ ನೌಕರರಿಗೆ ಗೌರಿ ಗಣೇಶ ಹಬ್ಬಕ್ಕೂ ಮುನ್ನ ಸಿಹಿ ಸುದ್ದಿ ಸಿಕ್ಕಿದೆ. ನೌಕರರ ತುಟ್ಟಿ ಭತ್ಯೆಯನ್ನು ಶೇ.10ರಷ್ಟು ಹೆಚ್ಚಳ ಮಾಡಿ ಇದೇ ತಿಂಗಳಲ್ಲಿ ಸರ್ಕಾರ ಘೋಷಣೆ ಹೊರಡಿಸಲಿದೆ. ಸದ್ಯ ಶೇ.80 ಇರುವ ತುಟ್ಟಿಭತ್ಯೆ ಶೇ.90ಕ್ಕೇರಲಿದ್ದು, ಇದರಿಂದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 30 ಲಕ್ಷ ಪಿಂಚಣಿದಾರರಿಗೆ ನೆರವಾಗಲಿದೆ.

ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿ ಭತ್ಯೆ ಹೆಚ್ಚಳ ಜಾರಿಯಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ 3 ವರ್ಷಗಳಲ್ಲಿ ತುಟ್ಟಿ ಭತ್ಯೆ 2 ಅಂಕಿಯಷ್ಟು ಹೆಚ್ಚಾಗುತ್ತಿರುವುದು ಇದೇ ಮೊದಲು. 2010ರ ಸೆಪ್ಟೆಂಬರ್ ನಲ್ಲಿ ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು ಶೇ.10ರಷ್ಟು ಏರಿಕೆ ಮಾಡಿತ್ತು. ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ(ಸಿಪಿಐ-ಐಡಬ್ಲ್ಯೂ) ಆಧಾರದಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ.

ಆಗಸ್ಟ್ 30ಕ್ಕೆ ಪ್ರಕಟಗೊಂಡ ಪರಿಷ್ಕೃತ ದತ್ತಾಂಶದ ಪ್ರಕಾರ ಜೂನ್ ತಿಂಗಳಿನಲ್ಲಿ ಕಾರ್ಖಾನೆ ನೌಕಕರಿಗೆ ರೀಟೇಲ್ ಹಣದುಬ್ಬರ ಪ್ರಮಾಣ ಶೇ 11.63ರಷ್ಟಿತ್ತು. ಈ ಅವಧಿಗೆ ಶೇ 11.06 ರಷ್ಟು ಪ್ರಮಾಣವನ್ನು ನಿರೀಕ್ಷಿಸಲಾಗಿತ್ತು. ಕಳೆದ ಏಪ್ರಿಲ್ ನಲ್ಲಿ ಶೇ 72 ರಿಂದ ಶೇ 80ಕ್ಕೆ ಡಿಎ ಏರಿಸಲಾಗಿತು.ಈಗ ಜೂನ್-ಜುಲೈ 2013ರ ರೀಟೈಲ್ ಹಣದುಬ್ಬರ ಪ್ರಮಾಣದ ಆಧಾರದ ಮೇಲೆ ಪ್ರಸ್ತಾವಣೆಯನ್ನು ಸರ್ಕಾರಕ್ಕೆ ಕಳಿಸಲಾಗಿದೆ.

ಡೀಸೆಲ್ ಬೆಲೆ ಏರಿಕೆ, ಬಹುಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ, ಅತಿಯಾದ ಹಣದುಬ್ಬರದ ನಡುವೆ ತತ್ತರಿಸಿರುವ ನೌಕರ ವರ್ಗವನ್ನು ಓಲೈಸಿಕೊಳ್ಳಲು ಕೇಂದ್ರದ ಯುಪಿಎ ಸರ್ಕಾರ ಮುಂದಾಗಿದೆ ಎಂದು ವಿಪಕ್ಷಗಳು ಆರೋಪಿಸಿದರೂ ನೌಕರರ ವರ್ಗ ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ.

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕವಾಗಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ. (ಪಿಟಿಐ)

English summary
Ahead of festival season, Central Government will this month announce a hike in dearness allowance to 90 percent from existing 80 percent, benefiting about 50 lakh central employees and 30 lakh pensioners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X