ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಕಂಪ್ಯೂಟರ್ ಗಳಲ್ಲಿ ಡರ್ಟಿ ಪಿಕ್ಚರ್ಸ್ ಇನ್ನಿಲ್ಲ

By Mahesh
|
Google Oneindia Kannada News

K'taka govt acts to stop porno watching on official computers
ಬೆಂಗಳೂರು, ಸೆ.1: ವಿಧಾನಸೌಧದ ಕಚೇರಿಗಳಲ್ಲಿ ನೀಲಿ ಚಿತ್ರ ವೀಕ್ಷಣೆ ಕುರಿತಂತೆ ಸಿಬಿಐನಿಂದ ಯಾವುದೇ ವರದಿ ಬಂದಿಲ್ಲ. ಈ ಬಗ್ಗೆ ಸಿಬಿಐ ಅಥವಾ ಸಿಡಿಐ ನೀಡಿರುವ ವರದಿ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಮಾ ಪಚಾವೋ ಹೇಳಿಕೆ ಬೆನ್ನಲ್ಲೇ ಐಟಿ ಸಚಿವ ಪಾಟೀಲ್ ರಿಂದ ಕಠಿಣ ಕ್ರಮ ಘೋಷಣೆಯಾಗಿದೆ.

ವಿಧಾನಸೌಧದ ಕಚೇರಿಗಳಲ್ಲಿನ ಅಧಿಕಾರಿಗಳು ಕೆಲಸದ ವೇಳೆ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆ ಪ್ರಮುಖ ಪತ್ರಿಕೆಗಳು ವರದಿ ಮಾಡಿದೆ. ಈ ಬಗ್ಗೆ ಸಿಐಡಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ.

ಉದ್ಯೋಗಕ್ಕೆ ಸಂಬಂಧಪಟ್ಟ ಕಡತಗಳು, ವೆಬ್ ತಾಣಗಳು ಮಾತ್ರ್ರ ಬಳಸುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕಚೇರಿಗಳ ಕಂಪ್ಯೂಟರ್ ಜಾಲಕ್ಕೆ ಫೈರ್ ವಾಲ್ ಅಳವಡಿಸಲು ನಿರ್ದೇಶನ ನೀಡಲಾಗಿದೆ ಎಂದು ಐಟಿ-ಬಿಟಿ ಸಚಿವ ಎಸ್ ಆರ್ ಪಾಟೀಲ್ ಹೇಳಿದರು.

ಅನಗತ್ಯ ವೆಬ್ ತಾಣಗಳನ್ನು ತಡೆಗಟ್ಟಲು ಫೈರ್ ವಾಲ್ ಹಾಗೂ ಇನ್ನಿತರ ಸುರಕ್ಷಿತ ತಂತ್ರಾಂಶ ಅಳವಡಿಕೆಯನ್ನು ವಿಧಾನಸೌಧದಿಂದ ಆರಂಭಿಸಲಾಗುವುದು ನಂತರ ಸರ್ಕಾರಿ ಕಚೇರಿಗಳ ಕಂಪ್ಯೂಟರ್ ಗಳಿಗೂ ಇದೂ ಜಾರಿಯಾಗಲಿದೆ. ಸೈಬರ್ ಕ್ರೈಂ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇಡೀ ರಾಜ್ಯದಲ್ಲಿ ಸೈಬರ್ ಅಪರಾಧಗಳು ನಡೆಯದಂತೆ ಎಚ್ಚರಿಕೆವಹಿಸಲಾಗುತ್ತದೆ ಎಂದು ಪಾಟೀಲ್ ಹೇಳಿದರು.

ಐಟಿ ಸಮಾವೇಶ: ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುವಂತೆ ಮಾಡುವು ದಕ್ಕಾಗಿ ಅ.22ರಿಂದ ನಗರದಲ್ಲಿ ಐಟಿ ಬಿಜ್ ಸಮಾವೇಶ ಹಮ್ಮಿಕೊಂಡಿರುವುದಾಗಿ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ ತಿಳಿಸಿದ್ದಾರೆ.

ಅಕ್ಟೋಬರ್ 22 ಮತ್ತು 23ರಂದು ಎರಡು ದಿನಗಳ ಕಾಲ ಮಾಹಿತಿ ತಂತ್ರಜ್ಞಾನ ಸಂಬಂಧಿಸಿದಂತೆ ಐಟಿ ಬಿಜ್ ಸಮಾವೇಶ ನಡೆಸಲಾಗುತ್ತದೆ. ಮೈಸೂರು ಮತ್ತು ಮಂಗ ಳೂರಿನಲ್ಲಿ ಉಪ ಸಮಾವೇಶಗಳನ್ನು ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಸೆ. 26 ಕ್ಕೆ ಹುಬ್ಬಳ್ಳಿಯಲ್ಲಿ ಉಪ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಪಾಟೀಲ್ ಹೇಳಿದರು.

ಐಟಿ ಬಿಜ್ ಸಮಾವೇಶವನ್ನು ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಉದ್ಘಾಟಿಸಲಿದ್ದಾರೆ. ಇದೇ ಖಾತೆಯ ಸಹಾಯಕ ಸಚಿವ ಮಿಲಿಂದ ದಿಯೋರಾ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಶಶಿ ತರೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪಾಟೀಲ್ ಹೇಳಿದರು.

ಬಂಡವಾಳ ಹೂಡಿಕೆದಾರರ ಸಮಾವೇಶ: 2014ರ ಜೂನ್ 14ರಿಂದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲು ಸರಕಾರ ನಿರ್ಧರಿಸಿದ್ದು, ಅಗತ್ಯ ಪೂರ್ವಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

English summary
Rattled by a reported CBI dossier about state secretariat employees' prurient interest in watching pornography on official computers during office hours, Karnataka government has decided to install software to block such sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X