ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಕಳೆದವಾರ ಸದ್ದು ಮಾಡಿದ ಸುದ್ದಿಗಳು

By Mahesh
|
Google Oneindia Kannada News

ಬೆಂಗಳೂರು, ಸೆ.1: ಕಳೆದವಾರ ಆ.25 ರಿಂದ ಆ.31ರ ತನಕ ನಡೆದ ಪ್ರಮುಖ ಘಟನಾವಳಿಗಳನ್ನು ಹೆಕ್ಕಿ ಚಿತ್ರಗಳ ಮೂಲಕ ಸಂಕ್ಷಿಪ್ತವಾಗಿ ಒನ್ ಇಂಡಿಯಾ ನಿಮ್ಮ ಮುಂದಿಡುತ್ತಿದೆ.

ಹಬ್ಬ-ಹರಿದಿನ, ಮಳೆ-ಪ್ರವಾಹದ ನಡುವೆ ಮಹತ್ವದ ಮಸೂದೆಗಳ ಮಂಡನೆ, ಕ್ರೀಡೆಯಲ್ಲಿ ಬಾಡ್ಮಿಂಟನ್, ಬಿಲ್ಲುಗಾರಿಕೆ, ಹಾಕಿ ಸಂಭ್ರಮ ಬಿಟ್ಟರೆ ಬಹುತೇಕ ಕ್ರೈಂ ಸುದ್ದಿಗಳೆ ಕಳೆದ ವಾರದ ವಿಶೇಷವಾಗಿತ್ತು.

ಮುಂಬೈನ ಫೋಟೋ ಜರ್ನಲಿಸ್ಟ್ ಮೇಲಿನ ಅತ್ಯಾಚಾರದ ಎಲ್ಲಾ ಆರೋಪಿಗಳ ಬಂಧನ, ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಪ್ರಕರಣಗಳು, ಅಯೋಧ್ಯೆಯಲ್ಲಿ ಹಿಂದೂಗಳಿಗೆ ಯಾತ್ರೆ ನಡೆಸಲು ಬಿಡದ ಅಖಿಲೇಶ್ ಸರ್ಕಾರ, ಆಹಾರ ಭದ್ರತೆ, ಭೂ ಸ್ವಾದೀನ ಕಾಯ್ದೆ ಮಂಡಿಸಿದ ಯುಪಿಎ, ಬಿಲ್ಲುಗಾರಿಕೆಯಲ್ಲಿ ದೀಪಿಕಾ ತಂಡ ವಿಜಯೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ, ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸಿನ್ ಭಟ್ಕಳ ಬಂಧನ. ಕೊನೆಗೂ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮನಮೋಹನ್ ಸಿಂಗ್, ಸಿರಿಯಾದಲ್ಲಿ ಯುದ್ಧ ಭೀತಿ ಇವೇ ಮುಂತಾದ ಸುದ್ದಿಗಳು ಕಳೆದ ವಾರ ಸದ್ದು ಮಾಡಿದ್ದವು.. ಕಳೆದ ವಾರದ ಸುದ್ದಿಗಳ ಹಿನ್ನೋಟ ಇಲ್ಲಿದೆ...

ಆರೋಪಿಗಳ ಸೆರೆ

ಆರೋಪಿಗಳ ಸೆರೆ

ಮುಂಬೈನ ಫೋಟೋ ಜರ್ನಲಿಸ್ಟ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ ಓದಿ

ಅಸಾರಾಮ್ ಬಾಪು

ಅಸಾರಾಮ್ ಬಾಪು

ಅಸಾರಾಮ್ ಬಾಪು ಪರ ಅವರ ಪುತ್ರ ನೀಡಿದ ಹೇಳಿಕೆಗಳು, ಬಾಪು ಯಾವ ಆಶ್ರಮದಲ್ಲಿದ್ದಾರೆ ಎಂಬ ಗೊಂದಲ, ಆಶ್ರಮಗಳ ಮುಂದೆ ಕಾದು ನಿಂತ ಪೊಲೀಸರು, ಮಾಧ್ಯಮದವರ ಮೇಲೆ ಬಾಪು ಭಕ್ತರ ಹಲ್ಲೆ, ಕೊನೆಗೂ ಬಾಪು ಪೊಲೀಸರ ಅತಿಥಿಯಾಗಿದ್ದು ಇಲ್ಲಿ ತನಕದ ಕಥೆ

ಜ್ವಾಲಾ ಕಿಡಿ

ಜ್ವಾಲಾ ಕಿಡಿ

ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಬಾಡ್ಮಿಂಟನ್ ಲೀಗ್ ನ ಪಂದ್ಯಾವಳಿ ಸಂದರ್ಭದಲ್ಲಿ ಕ್ರಿಶ್ ಡೆಲ್ಲಿ ಸ್ಮಾಷರ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರನ್ನು ಮೇಲೆ ಪ್ರೇಕ್ಷಕರು ಕಿಚಾಯಿಸಿದ ಘಟನೆ ನಡೆಯಿತು.

ಕಂಠೀವರ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಾ ಬೀಟ್ಸ್ ವಿರುದ್ದದ ಪಂದ್ಯದ ಸಂದರ್ಭದಲ್ಲಿ ಎದುರಾಳಿ ತಂಡದ ಜ್ವಾಲಾ ಅವರನ್ನು ಅವಾಚ್ಯ ಶಬ್ದ ಬಳಸಿ ಕೀಟಲೆ ಮಾಡಿದರು ಎಂಬ ಕಾರಣಕ್ಕೆ ಜ್ವಾಲಾ ಕೋಪಗೊಂಡಿದ್ದರು.

ಸಾಧು ಸಂತರ ಪ್ರತಿಭಟನೆ

ಸಾಧು ಸಂತರ ಪ್ರತಿಭಟನೆ

ಆಯೋಧ್ಯೆಯಲ್ಲಿ ವಿಶ್ವಹಿಂದೂ ಪರಿಷತ್ ಹಮ್ಮಿಕೊಂಡಿದ್ದ 84 ಕೋಸಿ ಯಾತ್ರೆ ವಿಫಲಗೊಳಿಸಿದ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಸಾಧು ಸಂತರು ಪ್ರತಿಭಟನೆ ನಡೆಸಿದರು.

ಆಹಾರ ಭದ್ರತೆ

ಆಹಾರ ಭದ್ರತೆ

ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಆಹಾರ ಭದ್ರತಾ ಕಾಯ್ದೆಗೆ ಉಭಯ ಸದನಗಳಲ್ಲೂ ಸಮ್ಮತಿ ಸಿಕ್ಕಿದೆ. ಹೆಚ್ಚಿನ ವಿವರ ಇಲ್ಲಿದೆ ಓದಿ

ದೀಪಿಕಾ ತಂಡ ವಿಜಯೋತ್ಸವ

ದೀಪಿಕಾ ತಂಡ ವಿಜಯೋತ್ಸವ

ಭಾರತದ ಬಿಲ್ಲುಗಾರಿಕೆ ತಂಡ ದೀಪಿಕಾ ಕುಮಾರಿ, ರಿಮಿಲ್ ಬುರಿಯಲ್, ಬೊಂಬಾಯಲ ದೇವಿ ಅವರು ವಿಶ್ವಕಪ್ ನಲ್ಲಿ ಚಿನ್ನ ಗೆದ್ದರು. ವಿವರ ಇಲ್ಲಿದೆ ಓದಿ

ಓಂಪುರಿ ಗೃಹ ಭಂಗ

ಓಂಪುರಿ ಗೃಹ ಭಂಗ

ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟ ಓಂ ಪುರಿ ಅವರು ತಮ್ಮ ಎರಡನೇ ಪತ್ನಿ ನಂದಿತಾ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ನಾಪತ್ತೆಯಾಗಿದ್ದರು. ನಂದಿತಾ ಅವರು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರ ಓಂಪುರಿ ಠಾಣೆಗೆ ಆಗಮಿಸಿ ವಿಚಾರಣೆಗೆ ಒಳಪಟ್ಟರು.

ಮಲಾಲಗೆ ಪ್ರಶಸ್ತಿ

ಮಲಾಲಗೆ ಪ್ರಶಸ್ತಿ

ತಾಲಿಬಾನಿಗಳಿಂದ ಆಕ್ರಮಣಕ್ಕೆ ಒಳಗಾಗಿದ್ದ ಪಾಕಿಸ್ತಾನದ ಶಿಕ್ಷಣ ಪರ ಹೋರಾಟಗಾರ್ತಿ ಮಲಾಲ ಯೂಸಫಾಜಿ ಅವರಿಗೆ ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪುರಸ್ಕಾರ ಲಭಿಸಿದೆ.

ವಡೋದರದಲ್ಲಿ

ವಡೋದರದಲ್ಲಿ

ವಡೋದರದಲ್ಲಿ ಕಟ್ಟಡ ಕುಸಿತದಿಂದಾಗಿ 7 ಜನ ಸಾವನ್ನಪ್ಪಿದ್ದರು.

ಅತ್ಯಾಚಾರ ವಿರುದ್ಧ ಹೋರಾಟ

ಅತ್ಯಾಚಾರ ವಿರುದ್ಧ ಹೋರಾಟ

ಮುಂಬೈ ಅತ್ಯಾಚಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯಿತು. ಸಂಸದೆ ಹೇಮಮಾಲಿನಿ ಅವರ ಹೇಳಿಕೆ ತೀವ್ರ ಚರ್ಚೆಗೊಳಗಾಗಿತ್ತು. 'ನಾವೇನು ದ್ರೌಪದಿಗಳಲ್ಲ, ಕೃಷ್ಣ ಪರಮಾತ್ಮ ಯಾರು ಇಲ್ಲಿಲ್ಲ. ನಮ್ಮನ್ನು ಕಾಪಾಡಲು' ಎಂದು ಹೇಳಿದ್ದರು

ಸಿರಿಯಾದಲ್ಲಿ ಯುದ್ಧ ಭೀತಿ

ಸಿರಿಯಾದಲ್ಲಿ ಯುದ್ಧ ಭೀತಿ

ಸಿರಿಯಾದಲ್ಲಿ ಸರ್ಕಾರವೇ ತನ್ನ ಸಾವಿರಾರು ಜನರನ್ನು ಕೆಮಿಕಲ್ ಪ್ರಯೋಗ ಮೂಲಕ ಕೊಂದು ಹಾಕಿದ ಮೇಲೆ ಅಮೆರಿಕ ತನ್ನ ಅಸ್ತ್ರಗಳನ್ನು ಹೊತ್ತುಕೊಂಡು ಸಿರಿಯಾ ಮೇಲೆ ಯುದ್ಧ ಸಾರಲು ಕಾದು ನಿಂತಿವೆ. ರಷ್ಯಾ-ಅಮೆರಿಕ ಕಿತ್ತಾಟದಲ್ಲಿ ಸಿರಿಯಾ ಜನತೆ ನಲುಗಿದ್ದಾರೆ.

ಯಾಸಿನ್ ಭಟ್ಕಳ ಸೆರೆ

ಯಾಸಿನ್ ಭಟ್ಕಳ ಸೆರೆ

ಇಂಡಿಯನ್ ಮುಜಾಹಿದ್ದೀನ್ ನಾಯಕ ಯಾಸಿನ್ ಭಟ್ಕಳ ಬಂಧನವಾಗಿದ್ದು ವಿಚಾರಣೆ ಜಾರಿಯಲ್ಲಿದೆ.

ಹಾಕಿ ವಿಕ್ರಮ

ಹಾಕಿ ವಿಕ್ರಮ

ರುಪಿಂದರ್ ಸಿಂಗ್ ಹಾಗೂ ವಿಆರ್ ರಘುನಾಥ್ ಹ್ಯಾಟ್ರಿಕ್ ನೆರವಿನಿಂದ ಬಾಂಗ್ಲಾದೇಶವನ್ನು 9-1 ಅಂತರದಲ್ಲಿ ಬಗ್ಗು ಬಡಿದು ಫೈನಲ್ ಗೇರಿದ ಭಾರತ ಭಾನುವಾರ ಏಷ್ಯ ಕಪ್ ಅಂತಿಮ ಹಣಾಹಣಿಯಲ್ಲಿ ಸೆಣೆಸುತ್ತಿದೆ.

ಮಿಲಿಟರಿ ಉಪಗ್ರಹ

ಮಿಲಿಟರಿ ಉಪಗ್ರಹ

ಭಾರತದ ಮೊದಲ ದೇಸಿ ನಿರ್ಮಿತ ಮಿಲಿಟರಿ ಉಪಗ್ರಹ (GSAT-7) ಯಶಸ್ವಿಯಾಗಿ ಉಡಾವಣೆಗೊಂಡಿದೆ. ಉಪಗ್ರಹದ ಬಗ್ಗೆ ಇಲ್ಲಿ ತಿಳಿದು ಕೊಳ್ಳಿ

ಸುದ್ದಿಗಳ ಕಥೆ ವ್ಯಥೆ

ಸುದ್ದಿಗಳ ಕಥೆ ವ್ಯಥೆ

ಸೀಮಾಂಧ್ರದ ಮೇಲೆ ಅಧಿಪತ್ಯ ಸ್ಥಾಪಿಸಲು ಯೋಜನೆ ಹಾಕಿಕೊಂಡಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಉಪವಾಸ ಕಥೆ ಇಲ್ಲಿ ಓದಿ

ಜನ್ಮಾಷ್ಟಮಿ ಸಂಭ್ರಮ

ಜನ್ಮಾಷ್ಟಮಿ ಸಂಭ್ರಮ

ದೇಶದೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು

ಸುದ್ದಿಗಳ ಕಥೆ ವ್ಯಥೆ

ಸುದ್ದಿಗಳ ಕಥೆ ವ್ಯಥೆ

ಪ್ರಧಾನಿ ಚೋರ್ ಎಂದ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮನಮೋಹನ್ ಸಿಂಗ್

English summary
OneIndia brings you important highlights from August 25 to August 31.Mumbai gangrape accused arrested, Asaram Bapu embroiled in a sexual abuse case, Uproar over Ayodhya yatra, Food Security Bill passed in Lok Sabha and Many more news in pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X